ಮಹಿಳೆಯರಿಗೆ ಮುಖ್ಯವಾಗಿ ಕಾನೂನು ಅರಿವು ಅಗತ್ಯ: ಹಳ್ಳಾಕಾಯಿ

ಹಾರೂಗೇರಿ,06: ಈ ಸಮಾಜದಲ್ಲಿ ಮುಖ್ಯವಾಗಿ ಮಹಿಳೆಯರ ಸಬಲೀಕರಣವಾಗಬೇಕಾದರೆ ಅವರುಗಳಿಗೆ ಕಾನೂನಿನ ಬಗ್ಗೆ ಅರಿವು ಅಗತ್ಯವಾಗಿದೆ. ಕಾನೂನು ಜ್ಞಾನ ಪಡೆದುಕೊಳ್ಳುವುದಕ್ಕೆ ಸ್ವಯಂ ಪೇರಣೆಯಿಂದ ಮುಂದಾಗಬೇಕು. ಮಹಿಳೆಯು ಸಮಾಜದ ಒಬ್ಬ ಕುಟುಂಬದ  ಕೇಂದ್ರ ಬಿಂದುವಾಗಿ ಬೆಳೆಯಲು ಸಾಧ್ಯ. ನಾವುಗಳು ಈ ಭೂಮಿಯ ಮೇಲೆ ಜನ್ಮ ಪಡೆಯುವುದಕ್ಕಿಂತ ಮುಂಚಿತವಾಗಿ ಕಾನೂನು ನಮಗೆ ಬೇಕೆ ಬೇಕು ಎಂದು ರಾಯಬಾಗದ ಪ್ರಧಾನ ದಿವಾಣಿ ನ್ಯಾಯಾಧೀಶ ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿಯ  ಮುಖ್ಯ ನ್ಯಾಯಾಧೀಶ ಜಿ.ಬಿ. ಹಳ್ಳಾಕಾಯಿ ಕರೆ ನೀಡಿದರು.

       ಅವರು ಸಮೀಪದ ಬಡಬ್ಯಾಕೂಡದ ಶಿವಯೋಗಿ ಶಿವಲೀಂಗೇಶ್ವರ ಮಠದ ಸಭಾ ಭವನದಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಪೋಲಿಸ್ ಇಲಾಖೆ ರಾಯಬಾಗ ಹಾಗೂ ಕನರ್ಾಟಕ ಹಾಲು ಮಹಾ ಮಂಡಳಿ ಬೆಂಗಳೂರ ಮತ್ತು ಬೆಳಗಾವಿ ಜಿಲ್ಲಾ ಸಹಾಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ "ಕಹಾಮ ಸಂಜೀವಿನಿ" ಯೋಜನೆ ಅಡಿಯಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು ನೆರವು ಕಾಯರ್ಾಗಾರದಲಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. 

   ಪ್ರಾಚೀನ ಕಾಲದಲ್ಲಿ ಸ್ತ್ರೀಯರಿಗೆ ಯಾವುದೇ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಇದ್ದಿರಲಿಲ್ಲ. ಆದರೆ ಈಗ ಮಾತ್ರ ಮಹಿಳೆಯರು ಪ್ರತಿಯೊಂದು ರಂಗದಲ್ಲಿ ಪುರುಷರ ಸಮಾನವಾಗಿ ಸ್ವತಂತ್ರವಾಗಿ ಬೆಳೆಯುತ್ತಿದ್ದಾಳೆ.  ಎ ಕಾನೂನಿನಿಂದ ನಾವು ಅರಿವು ಮಾಡಿಕೊಳ್ಳಲು ಸಂಘಗಳ ಮೂಲಕ ಎಲ್ಲ ಮಹಿಳೆಯರಿಗೆ ಕಾನೂನಿನ ಬಗ್ಗೆ ಮುಖ್ಯವಾಗಿ ಅರಿವು ಮುಡಿಸಬೇಕಾಗಿದೆ ಎಂದು ಉಪನ್ಯಾಸಕರಾಗಿ ಆಗಮಿಸಿದ ನ್ಯಾಯವಾದಿ ರಾಜೇಶ್ವರಿ ಪವಾರ ಹೇಳಿದರು.

ಬಡಬ್ಯಾಕೂಡದ ಸಿದ್ದಲಿಂಗ್ ಸ್ವಾಮಿಗಳು ಬಸವಣ್ಣನವರು ಬಸವಕಲ್ಯಾಣದಲ್ಲಿ ಮಹಿಳೆಯರಿಗೆ ಸಂಪೂರ್ಣವಾಗಿ ಸ್ವಾತಂತ್ಯ್ರ ನೀಡಿದರು. ನಾವುಗಳು ಪ್ರಥಮವಾಗಿ ಧರ್ಮವನ್ನು ಕಾಯ್ದುಕೊಳ್ಳಬೇಕು ನಂತರ ಕಾನೂನು ನಮನ್ನು ಕಾಯುತ್ತದೆಂದು ಆಶೀರ್ವಚನ ನೀಡಿದರು.

ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಸಂಘದಿಂದ ಹಾಲು ಉತ್ಪಾದನೆಯಲ್ಲಿ ನೂರಾರು ಲೀಟರ ಹಾಲು ನೀಡುತ್ತಿರುವ ಫಲಾನುಭವಿಗಳಿಗೆ ಸಹಾಯಧನ ಚಕ್ ನೀಡಿ ಸನ್ಮಾನಿಸಿ ಶ್ರೀಗಳು ಹಾಗೂ ನ್ಯಾಯಾಧೀಶರು ಪ್ರೋತ್ಸಾಹಿಸಿದರು.

ಜಯಶ್ರೀ ಠಕ್ಕಣ್ಣವರ, ಎಮ್. ಪಿ. ಗಾಂವ್ಕರ, ಪಿ. ಆರ್. ಗುಡೋಡಗಿ, ಎಸ್. ಎಚ್. ನಿಡೋಣಿ, ಆರ್. ಓ. ಲೋಹಾರ, ಎಮ್.ಎಮ್. ಚಿಂಚಲಿಕರ, ಪದ್ಮಜಾ ಮಗದುಮ ಹಾಗೂ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಶೋಭಾ ಕಾಟ್ಟಾಪೂಣರ ನಿರೂಪಿಸಿದರು. ಡಾ. ಜೆ. ಆರ್. ಮಣ್ಣೇರಿ ಸ್ವಾಗತಿಸಿ, ವಂದಿಸಿದರು.