ಮಹಿಳೆಯರು ಮನೆಯ ಜವಾಬ್ದಾರಿಯ ಜೊತೆಗೆ ಸಮಾಜದಲ್ಲಿ ಉತ್ತಮ ಕೆಲಸ ಮಾಡಲು ಸಮರ್ಥಳು- ಮುಂಜೋಜಿ
ಹಾವೇರಿ 12: ಮಹಿಳೆಯರು ಮನೆಯ ಜವಾಬ್ದಾರಿಯ ಜೊತೆಗೆ ಸಮಾಜದಲ್ಲಿ ಉತ್ತಮ ಕೆಲಸ ಮಾಡಲು ಸಮರ್ಥಳಾಗಿರುವುದು ಶ್ಲಾಘನೀಯವಾಗಿದೆ ಎಂದು ಛತ್ರಪತಿ ಶಿವಾಜಿ ಮಹಿಳಾ ಸ್ವ-ಸಹಾಯ ಸಂಘ(ರಿ)ದ ಅಧ್ಯಕ್ಷರಾದ ಶಶಿರೇಖಾ ರಮೇಶ ಮುಂಜೋಜಿ ಹೇಳಿದರು.
ಇಲ್ಲಿನ ನಾಗೇಂದ್ರನಮಟ್ಟಿಯಲ್ಲಿನ ಸಂಘದ ಸದಸ್ಯರಾದ ಶ್ರೀಮತಿ ಸುಮಿತ್ರಾ ಬೋಸ್ಲೆ ಅವರ ಮನೆಯಲ್ಲಿ ಛತ್ರಪತಿ ಶಿವಾಜಿ ಮಹಿಳಾ ಸ್ವಸಹಾಯ ಸಂಘ(ರಿ)ಹಾವೇರಿ ವತಿಯಿಂದ ಆಯೋಜಿಸಿದ ವಿಶ್ವ ಮಹಿಳಾ ದಿನಾಚಾರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಇಂದಿನ ದಿನಮಾನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮ ಛಾಪನ್ನು ಮೂಡಿದ್ದಾರೆ.ಕುಟುಂಬದ ಎಲ್ಲಾ ಜವಾಬ್ದಾರಿಯನ್ನು ನಿರ್ವಹಣೆ ಮಾಡಿ ಸಮಾಜಮುಖಿ ಕೆಲಸ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ.ವಿಶ್ವ ಮಹಿಳಾ ದಿನ ಆಚರಣೆಯನ್ನು ನಮ್ಮ ಸಂಘದ ಎಲ್ಲಾ ಸದಸ್ಯರು ಸೇರಿಕೊಂಡು ವಿಶಿಷ್ಟವಾಗಿ ಪ್ರತಿ ವರ್ಷ ಮಾಡುತ್ತಿದ್ದೇವೆ.ಎಲ್ಲರ ಸಹಕಾರದಿಂದ ಸಂಘ ಪ್ರಗತಿಯತ್ತ ಮುನ್ನಡಿಯುತ್ತಿದೆ ಎಂದು ವಿಶ್ವ ಮಹಿಳಾ ದಿನಾಚಾರಣೆ ಶುಭ ಕೋರಿ ಅವರು ಮಾತನಾಡಿದರು.
ಇದೇ ಅವಧಿಯಲ್ಲಿ ರೇವತಿ ತಿಳವಳ್ಳಿ, ರೀತಲ್ ಭೋಸ್ಲೆ ಅವರಿಗೆ ಭಾರತೀಯ ಸಂಸ್ಕೃತಿ-ಪರಂಪರೆಯ ಉಡಿತುಂಬಿವ ಕಾರ್ಯಮಾಡಿ,ಮಹಿಳೆಯರಿಗೆ ಹರಿಶಿಣ-ಕುಂಕುಮ ವಿತರಣೆ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿಗಳಾದ ಅಶ್ವಿನಿ ಬೋಸ್ಲೆ, ಗಾಯತ್ರಿ ಜಾಧವ, ಅನಿತಾ ಜಾಧವ, ಪ್ರಭಾವತಿ ಗುಂಡೆ, ಸುಧಾಬಾಯಿ ತಿಳುವಳ್ಳಿ, ಯಲ್ಲಮ್ಮ ತಿಳುವಳ್ಳಿ, ಸುಧಾ ಕಲಾಟೆ, ಸುನಿತಾ ಮೋರೆ, ಸಂಜನಾ ಮೋರೆ,ಕೀರ್ತಿ ತಿಳವಳ್ಳಿ ಹಾಗೂ ಮಹಿಳೆಯರು ಭಾಗವಹಿಸಿದ್ದರು