ಬೈಲಹೊಂಗಲ 31: ಆತ್ಮ ಸಾಕ್ಷಾತ್ಕಾರವಾದಾಗ ಮನುಷ್ಯ ಜನ್ಮ ಸಾರ್ಥಕವಾಗುವುದು ಎಂದು ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು
ಅವರು ಸೋಮವಾರ ಸಮೀಪದ ಸುಕ್ಷೇತ್ರ ಇಂಚಲದ ಡಾ.ಶಿವಾನಂದ ಭಾರತಿ ಶ್ರೀಗಳ 79 ನೇ ಜಯಂತೋತ್ಸವ, ವಿಶ್ವಶಾಂತಿಗಾಗಿ 49ನೇ ಅಖಿಲ ಭಾರತ ವೇದಾಂತ ಪರಿಷತ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಇಹಚೇಧ ವೇಧಿತ ಎಂಬ ವಿಷಯದ ಕುರಿತು ಪ್ರವಚನ ನೀಡಿದರು.ತನ್ನನ್ನು ತಾನು ಅರಿಯದೇ ಜೀವನದ ಯತಾರ್ಥಜ್ಞಾನವನ್ನು ಪಡೆಯಲು ಸಾಧ್ಯವಿಲ್ಲ ಎಂಬತನಾಲ್ಕು ಲಕ್ಷ ಜೀವರಾಶಿಗಳನ್ನು ತಿರುಗಿ ಅರುವಿನ ಜನ್ಮಕ್ಕೆ ಬಂದಿದ್ದೇವೆ ಆದ್ದರಿಂದ ನಾನು ಯಾರು ಎಂಬುವದನ್ನು ತಿಳಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿದ್ದಾರೂಢ ಮಠ ಇಂಡಿ ಸ್ವರೂಪಾನಂದ ಸ್ವಾಮಿಗಳು ಇವರು ಮಾತನಾಡುತ್ತಾ ಈ ಅಸ್ಥಿರ ದೇಹವನ್ನು ನಾನು ಎಂದು ಭಾವಿಸಿದ್ದೇನೆ ನಿಜವಾಗಿ ನಾನು ಯಾರು ಎಂದು ತಿಳಿಯಬೇಕಾಗಿದೆ ನಾವೆಲ್ಲರೂ ಬ್ರಹ್ಮ ಸ್ವರೂಪರೇ ಆ ಜ್ಞಾನ ನಮಗೆ ದೊರೆಯಬೇಕೆಂದರು.
ಕಲ್ಲೂರ ಆರೂಢ ವಿದ್ಯಾಶ್ರಮ ಮಾತೋಶ್ರೀ ಲಲಿತಮ್ಮನವರು ಮಾತನಾಡುತ್ತಾ ಭೂಮಿ ನಿನ್ನದಲ್ಲ ಃಏಮ ನಿನ್ನದಲ್ಲ ಕಾಮಿನಿ ನಿನ್ನವಳಲ್ಲ ನೀ ಯಾರೆಂದು ನಿನ್ನ ಆತ್ಮ ಸ್ವರೂಪ ಜ್ಞಾನ ಮಾಡಿಕೊಂಡಾಗ ಅರಿವಿಗೆ ಬರುತ್ತದೆ ಎಂದರು.
ಸಿದ್ದಾರೂಢ ಮಠ ರಾಣೆಬೆನ್ನೂರ ಪೂಣರ್ಾನಂದ ಭಾರತಿ ಸ್ವಾಮಿಗಳು ಮಾತನಾಡುತ್ತಾ ಮಾನವ ಜನ್ಮ ಶ್ರೇಷ್ಠವಾದದ್ದು ನಾವು ನಮ್ಮ ಜೀವನವನ್ನು ಬಹಳ ಉಚ್ಚ ರೀತಿಯಲ್ಲಿ ಆಚರಿಸಬೇಕು ಮಹಾತ್ಮ ಪ್ರವಚನ ಕೇಳುವ ಮೂಲಕ ನಮ್ಮ ಜೀವನವನ್ನು ಪಾವನಗೊಳಿಸಬೇಕು ಎಂದು ಆಶೀರ್ವದಿಸಿದರು.
ಹೊಸಕೋಟಿಯ ಅಭಿನವ ರೇವಯ್ಯ ಸ್ವಾಮಿಗಳು ಮಾತನಾಡುತ್ತಾ ಜೀವನದಲ್ಲಿ ಲಾಭ ನಷ್ಟ ಯಾವವು ಎಂದು ತಿಳಿದುಕೊಂಡಾಗ ಮಾತ್ರ ನಾವು ಜೀವಿಸಿದ್ದು ಸಾರ್ಥಕ ನಿಜವಾದ ಜ್ಞಾನ ಸಂಪಾದನೆಯನ್ನು ಲಾಭ ಎಂದು ಹೇಳಿದರು.
ಬಸವರೂಢಶ್ರಮ ಹಿಪ್ಪರಗಿಯ ಶಿವರುದ್ರ ಶರಣರು ಮಾತನಾಡುತ್ತಾ ಅಪರೋಕ್ಷ ಬ್ರಹ್ಮ ಮಾಡಿಕೊಳ್ಳದಿದ್ದರೆ ಜನ್ಮ ಸಾರ್ಥಕವಾಗುವದಿಲ್ಲ ಯಾರು ತನ್ನನ್ನು ತಾನು ತಿಳಿದುಕೊಳ್ಳುವುದೇ ನಿಜವಾದ ಜೀವನ ಎಂದರು.
ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಶ್ರೀಮಠದ ಡಾ. ಶಿವಾನಂದ ಭಾರತಿ ಶ್ರೀಗಳು ಮಾತನಾಡಿ, ಶ್ರೇಷ್ಠವಾದ ಮನುಷ್ಯ ಜನ್ಮ ಪಡೆದಿದ್ದೇವೆ ಇದರ ಲಾಭವೇನು ಅಂದರೆ ಯಾತಾರ್ಥ ಜ್ಞಾನ ಪಡೆದು ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳುವುದು ಇದಕ್ಕೆ ಸದ್ಗುರುವಿನ ಸನ್ನಿಧಾನಕ್ಕೆ ಹೋಗಬೇಕು ಶ್ರವಣ ಮನನ ಮಾಡಬೇಕು ಆವಾಗ ನಿಮ್ಮೊಳಗಿನ ಪರಬ್ರಹನ ಸ್ವರೂಪ ತಿಳಿದುಕೊಳ್ಳುವಿರಿ ಆಗ ನಿಮ್ಮ ಜನ್ಮ ಸಾರ್ತಕವಾಗುವುದು ಎಂದು ಆಶೀರ್ವಚನ ನೀಡಿದರು.
ವೇದಿಕೆಯ ಮೇಲೆ ಮಾತೋಶ್ರೀ ಜಾನಮ್ಮ ತಾಯಿಯವರು, ಪೂಣರ್ಾನಂದ ಭಾರತಿ ಸ್ವಾಮಿಗಳು ಸಿದ್ದಾರೂಢ ಮಠ ರಾಣೆಬೆನ್ನೂರ, ಪ್ರಭಾನಂದ ಸ್ವಾಮಿಗಳು ಸಿದ್ದಾರೂಢ ಮಠ ಬುದ್ನಿ, ಶಾಸಕರಾದ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡಗೌಡರ, ಮಾಜಿ ಶಾಸಕರಾದ ಡಾ: ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ, ಸಂಸ್ಥೆಯ ಚೇರಮನ್ ಡಿ.ಬಿ. ಮಲ್ಲೂರ, ಮಾಜಿ ಚೇರಮನ್ ಎಸ್.ಎಂ. ರಾಹತುನವರ, ಕಾರ್ಯದಶರ್ಿ ಎಸ್.ಎನ್. ಕೊಳ್ಳಿ, ಡಾ.ಜಿ. ವಿನಯ ಮೋಹನ, ಎಸ್. ಟಿ. ಕಾಂಬಳೆ, ಮಾಜಿ ಪುರಸಭಾಧ್ಯಕ್ಷ ಬಸವರಾಜ ಜನ್ಮಟ್ಟಿ, ಶಿವಾನಂದ ಬೆಳಗಾವಿ, ಬಿ.ಎಫ್. ಕೊಳದೂರ, ಎಸ್.ಡಿ. ಕರಾಡೆ, ಎಸ್.ಎಂ. ಬೆವಿನಕೊಪ್ಪ. ಎಸ್.ಎಫ್. ಇಂಚಲ, ಬಿ.ಪಿ. ತುಪ್ಪದ, ಎಂ.ಸಿ. ಮಟ್ಟಿ, ಎಸ್. ಟಿ. ಕಾಂಬಳೆ, ಎಮ್ ಬಿ ಯರಗುದ್ದಿ, ವಿವಿದ ಮಠಾಧೀಶರು ಮಾತಾಜಿಯವರುಗಳು ಹಾಗೂ ಸಾವಿರಾರು ಸದ್ಭಕ್ತರು ಇದ್ದರು.
ಸುಜ್ಞಾನ ಕುಟೀರ ಹಡಗಿನಾಳದ ಮಲ್ಲೇಶ್ವರ ಶರಣರು ನಿರೂಪಿಸಿದರು.