ನಿಪ್ಪಾಣಿ ತಾಲೂಕಿನ ನೇಕಾರರು ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಭೇಟಿ
ಚಿಕ್ಕೋಡಿ 12: ನಿಪ್ಪಾಣಿ ತಾಲೂಕಿನ ನೇಕಾರರು ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಭೇಟಿ ತಮ್ಮ ನೇಕಾರಿಗೆ ಕಸಬು ಇರುವುದರಿಂದ ನಮ್ಮ ಯಾಂತ್ರಿಕ ಮಗ್ಗುಗಳಿಗೆ ವಿದ್ಯುತ್ ಸಂಪೂರ್ಣ ಮಾಡುವುದಕ್ಕಾಗಿ ಬೆಳಗಾವಿವರೆಗೆ ಪಾದಯಾತ್ರೆ ಮೂಲಕ ಹೊರಟಿದ್ದಾರೆ ದಿನಾಂಕ 13 ರಂದು ಹತ್ತರ ಗಿ ವೀರಭದ್ರ ದೇವಸ್ಥಾನದಲ್ಲಿ ವಿಶ್ರಾಂತಿಗಾಗಿ ಬಂದು ಭೋಜನ ಮುಗಿಸಿಕೊಂಡು 14ರಂದು ವಿಧಾನಸೌಧ ಕೆ ಬೆಟ್ಟಿ ನೀಡಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದೆಂದು ಪತ್ರಕರ್ತರೊಂದಿಗೆ ಮಾತನಾಡುತ್ತ ಈ ವಿಷಯ ತಿಳಿಸಿದರು.
ಸುಮಾರು 600 ಜನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ಇವರ ಜೊತೆಗೆ ನೇಕಾರ ಮಹಿಳೆಯರು ಸಹಿತ ಇದ್ದಾರೆ ಸುಮಾರು 18 ತಿಂಗಳ ವಿದ್ಯುತ್ ಬಿಲ್ಲವನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಗುವದೆಂದು ತಿಳಿಸಿದರು ಮಹಾಲಿಂಗಪುರದ ನೇಕಾರ ಹೋರಾಟಗಾರರಾದ ಶಿವಲಿಂಗ ಟರ್ಕಿ ಅವರ ಮಾರ್ಗದರ್ಶನದಲ್ಲಿ ಪಾದಯಾತ್ರೆ ಕೈಗೊಂಡಿದ್ದು ಇದರಲ್ಲಿ ಅರ್ಜುನ್ ಕುಂಬಾರ್ ಅಣ್ಣಪ್ಪ ನಾಗರಾಳಿ ಸೋಮನಾಥ್ ಪ್ರಕಾಲಿ ಲಕ್ಷ್ಮಣ್ ಕದಂ ಭೀಮರಾವ್ ಕೋತ್ ಸೇರಿದಂತೆ ಅಪಾರ ನೇಕಾರ ಕುಲಬಾಂಧವರು ಪಾದಯಾತ್ರೆಯಲ್ಲಿ ಇದ್ದು ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ನಮ್ಮ ಭಾಗದಿಂದ ಸಂಪೂರ್ಣ ಬಹುಮತದಿಂದ ಆಯ್ಕೆ ಮಾಡಿಕೊಟ್ಟದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ ಎಂದು ಹೇಳಿದರು ಯಮಕಣ್ಣ ಮರಡಿ ಮತಕ್ಷೇತ್ರದ ಶಾಸಕರು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸಚಿವರು ಸತೀಶ್ ಜಾರಕಿಹೊಳಿ ಇವರ ಮಾರ್ಗದರ್ಶನದಲ್ಲಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಲಾಗುವುದೆಂದು ಹೇಳಿದರು