ನಮ್ಮ ಅಖಂಡ ಭಾರತದ ಸಂಸ್ಕೃತಿ ಪರಂಪರೆಗಳು ಇದೇ ವಿಶ್ವದಾದ್ಯಂತ ಪಸರಿಸುತ್ತೇವೆ
ಗುರ್ಲಾಪೂರ 12 : ನಮ್ಮ ಅಖಂಡ ಭಾರತದ ಸಂಸ್ಕೃತಿ ಪರಂಪರೆಗಳು ಇದೇ ವಿಶ್ವದಾದ್ಯಂತ ಪಸರಿಸುತ್ತೇವೆ ನಮ್ಮ ಭಾರತೀಯ ಋಷಿಮುನಿಗಳು ಕಲಿಸಿಕೊಟ್ಟ ಪರಂಪರೆಗಳನ್ನು ವಿದೇಶಿಯರು ಭಾರತಕ್ಕೆ ಬಂದು ಕಲಿತು ಅವುಗಳನ್ನು ತಮ್ಮ ದೇಶದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ ಉದಾರಣೆಗೆ ನಮ್ಮ ದೇಶದ ಉಡುಗೆಯಾದ ಸೀರೆಗಳು ಪಂಚೆ ರುಮಾಲು ವಿಭೂತಿ ಕುಂಕುಮ ರುದ್ರಾಕ್ಷಿ ಹೀಗೆ ಅನೇಕ ರೀತಿ ರಿವಾಜುಗಳನ್ನು ಅನುಸರಿಸುತ್ತಿದ್ದಾರೆ. ಆದರೆ ದುರಾದೃಷ್ಟವೆಂದರೆ ನಮ್ಮ ಭಾರತೀಯರು ವಿದೇಶದ ಮೊರೆಹೋಗಿ ನಮ್ಮ ಸಂಸ್ಕೃತಿಯನ್ನೇ ಮರೆಯುತ್ತಿದ್ದಾರೆ ಎಂದು ಪರಮ ಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳು ಮೈಲಾರಲಿಂಗೇಶ್ವರ ಆಶ್ರಮ ಇಟ್ನಾಳ ಇವರು ವಿದ್ಯಾನಿಧಿ ಪ್ರಾಥಮಿಕ ಕಾನ್ವೆಂಟ್ಶಾಲೆ ಹಾಗೂ ಜನನಿಲರ್ನಿಂಗ್ಸೆಂಟ ರ್ಗುರ್ಲಾಪುರ್ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವಮಹಿಳಾ ದಿನಾಚರಣೆ ಹಾಗೂ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಸ್ಪರ್ಧೆಯಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ಜಗತ್ತಿನಲ್ಲಿ ನಮ್ಮನ್ನು ಹೊತ್ತು ಹಿಡಿದವಳು ಭೂಮಿತಾಯಿ ನಮಗೆ ದಾಹವಾದಾಗ ನೀರು ಕೊಡುವವಳು ಗಂಗೆತಾಯಿ ನಮಗೆ ಹಸಿದಾಗ ಅನ್ನ ನೀಡುವಳು ಅನ್ನಪೂರ್ಣ ನಮ್ಮ ಅಜ್ಞಾನವನ್ನು ಹೊಡೆದೋಡಿಸಿ ಜ್ಞಾನವನ್ನು ತುಂಬುವವಳು ಸರಸ್ವತಿ ತಾಯಿ, ನಮ್ಮ ಬದುಕಿನಲ್ಲಿ ಕಷ್ಟಗಳನ್ನು ದೂರ ಮಾಡಿ ಸುಖವಾಗಿ ಇಡುವವಳು ಲಕ್ಷ್ಮಿತಾಯಿ ಹೀಗೆ ಹತ್ತು ಹಲವಾರು ವೇಷಗಳನ್ನು ತೊಟ್ಟು ನಮ್ಮನ್ನು ಕಾಯುತ್ತಾ ಬೆಳೆಸುತ್ತಾ ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ತಾಯಿಯ ಪಾತ್ರಮಹತ್ವದ್ದು. ಹಾಗೂ ಪಾಲಕರಾದ ನಾವುಗಳು ಮಕ್ಕಳಲ್ಲಿ ತಂದೆತಾಯಿಗೆ ಗೌರವ ಸ್ಥಾನವನ್ನು ಕೊಡುವುದನ್ನು ಕಲಿಸಬೇಕು ಇದರಿಂದ ನಮ್ಮ ಭಾರತದ ಸಂಸ್ಕೃತಿ ಪರಂಪರೆ ಜಗತ್ತಿಗೆ ಮಾದರಿಯಾಗಲಿದೆ ಎಂದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ರಾಧಾ ಎಂಎಂ ಮಾತನಾಡುತ್ತಾ ಈಗಿನ ಮಕ್ಕಳಲ್ಲಿ ಬೌದ್ಧಿಕ ಮಟ್ಟಹೆಚ್ಚಾಗಿರುವುದರಿಂದ ಸ್ಪರ್ಧಾತ್ಮಕ ಜಗತ್ತಿಗೆಸ್ಪರ್ಧೆಯೊಡಲು ನಿಮ್ಮ ಮಕ್ಕಳನ್ನು ಸದೃಢವಾಗಿ ಬೆಳೆಸಿ. ಈಗಿನ ಮಹಿಳೆಯರಿಗೆ ಜಗತ್ತಿನಲ್ಲಿ ನಿಮಗೆ ಯಾವುದು ಅತಿಮಹತ್ವ ಎಂದರೆ ಗಂಡಮಕ್ಕಳು ಮನೆ ಅಂತ ಹೇಳುತ್ತಾರೆ ಆದರೆ ಮುಖ್ಯ ಅನ್ನುವುದನ್ನು ಮರೆತು ಬಿಟ್ಟಿದ್ದಾರೆ ಮೊದಲು ತಾವು ಸದೃಢವಾಗಿದ್ದರೆ ಮಕ್ಕಳನ್ನು ಹಾಗೂ ಮನೆಯನ್ನು ಸಹಿತ ಸದೃಢವಾಗಿ ಇಡಬಹುದು ಎನ್ನುವುದು ತಿಳಿದಿಲ್ಲ. ತಮಗೆ ಸಿಗದ ಅವಕಾಶಗಳನ್ನು ತಮ್ಮ ಮಕ್ಕಳ ಮುಖಾಂತರ ಈಡೇರಿಸಿಕೊಳ್ಳಲು ಬಯಸುವಳೆ ನಿಜವಾದ ಮಹಿಳೆ. ಸರಕಾರದ ಅಂಕಿ ಅಂಶಗಳಪ್ರಕಾರ 22,000 ಕೋಟಿ ಜಿಡಿಪಿ ಮಹಿಳೆಯರಿಂದನೆ ಬರುತ್ತಿದೆ. ಮಹಿಳೆಯರು ತಮ್ಮ ಮನೆ ಕೆಲಸಗಳನ್ನು ಮಾಡುತ್ತಾ ಹೊರಗಡೆಯ ತಮ್ಮದೇ ಆದ ಸಾಧನೆಗಳನ್ನು ಮಾಡುತ್ತಾ ಸಮಾಜದಲ್ಲಿ ಘನತೆ ಗೌರವದಿಂದ ಬದುಕುವಲ್ಲಿ ಮುನ್ಸೂಚನೆಯಲ್ಲಿದ್ದಾರೆ.ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಹಿಳೆಯರಿಗೆ ಅತಿಹೆಚ್ಚು ಬಿಪಿ, ಶುಗರ್ಹಾಗೂಹಾರ್ಟಅಟ್ಯಾಕ್ನಂತಹ ದೊಡ್ಡ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಹೀಗಾಗಿ ಮಹಿಳೆಯರು ಮೊದಲು ತಮ್ಮ ಆರೋಗ್ಯದ ಮೇಲೆ ಗಮನವಿಟ್ಟು ತಾವು ಸದೃಢವಾಗಿದ್ದು ಸಮಾಜವನ್ನು ಸಹಿತ ಸದೃಢವಾಗಿ ಇಡಬೇಕು ಎಂದರು. ಮತ್ತೋರ್ವ ಅತಿಥಿಗಳಾಗಿ ಆಗಮಿಸಿ ಪ್ರತಿಕ್ಷನೇಮ ಗೌಡ್ರುಮಾತನಾಡಿ ಮಹಿಳೆಯರು ಎಲ್ಲಾಕ್ಷೇತ್ರದಲ್ಲಿಯೂ ಸಹಸಾಧನೆ ಮಾಡುತ್ತಾ ಸಮಾಜದಲ್ಲಿ ಘನತೆ ಮತ್ತು ಗೌರವದಿಂದ ಬದುಕುತ್ತಿದ್ದಾರೆ. ಪತಿಗೆ ಸತಿಯಾಗುವದರೊಂದಿಗೆ ಹಿಡಿದುರಾಷ್ಟ್ರ ಪತಿಯಾಗುವವರೆಗೂ ಮಹಿಳೆಯರ ಸಾಧನೆ ಇದೆ. ಈಸಾಧನೆಯ ಮೂಲವೇ ಶಿಕ್ಷಣ ಮತ್ತು ಒಳ್ಳೆಯ ಸಂಸ್ಕಾರ. ನಿಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಿ ನಿಮ್ಮ ಮಕ್ಕಳಲ್ಲಿಯೂ ಉತ್ತಮಸಂಸ್ಕಾರವನ್ನು ನೀಡಿದ್ದೆ ಆದಲಿ ್ಲಅದರ ಫಲವನ್ನು ನೀವು ಭವಿಷ್ಯದಲ್ಲಿ ಕಾಣುತ್ತೀರಿ ಎಂದರು. ಕಾರ್ಯಕ್ರಮದಲ್ಲಿ ಅಶ್ವಿನಿ ಒಡೆಯರ್ ಶಾಲೆಯ ಮುಖ್ಯಸ್ಥರಾದ ಆನಂದ ಸುಳ್ಳನವರ ಪ್ರಸನ್ನ ಹಿರೇಮಠ ಕುಮಾರ ಹಿರೇಮಠ ಮುಖ್ಯೋಪಾಧ್ಯರಾದ ವಿಷ್ಣುದೊಡ್ಡಮನಿ ಸಂಗೀತ ಮುಧೋಳ ಪೂಜಾ ಮರಾಠೆ ಪವಿತ್ರ ಹಿರೇಮಠ ದಾನೇಶ್ವರಿ ಸುಳ್ಳನವರ ಸುರೇಖಾ ,ಚಚಣ ಎಗಢದಡಿ ಅನಿತಾ ಸುಳ್ಳನವರ, ಸುರೇಶ್ನೇಮ ಗೌಡರ ಹಾಗೂ ವಿದ್ಯಾರ್ಥಿಗಳ ಪಾಲಕಪೋಷಕರರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶೇಷವೇನೆಂದರೆ ಸಾಂಪ್ರದಾಯಿಕಡ್ರೆಸ್ಕಾಂಪಿಟೇಶನನ್ನು ಹಮ್ಮಿಕೊಳ್ಳಲಾಗಿತು ್ತಈ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಮಕ್ಕಳು ಸ್ವಯಂ ಪ್ರದಾಯಿಕ ಉಡುಗೆ ತೊಡೆಗೆಗಳನ್ನು ತೊಟ್ಟು ತಮ್ಮ ಪ್ರತಿಭೆಯನ್ನು ತೋರಿಸಿದರು.