ಗದಗ 20: ಜಿಲ್ಲೆಯ ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸಿ ಕುಡಿಯುವ ನೀರು ಪೂರೈಕೆಗೆ ಕ್ರಮ ಜರುಗಿಸುವ ಹೊಣೆಗಾರಿಕೆಯನ್ನು ಯಾವುದೇ ಇಲಾಖೆ ಅಥವಾ ಸಂಸ್ಥೆಗಳು ನಿಭಾಯಿಸಲು ರಾಜ್ಯ ಕೌಶಲ್ಯಭಿವೃದ್ಧಿ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಆಮ್ಲನ್ ಆದಿತ್ಯ ಬಿಸ್ವಾಸ್ ನಿರ್ದೇಶನ ನೀಡಿದ್ದಾರೆ.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಜಿಲ್ಲೆಯ ಬರ ನಿರ್ವಹಣೆ ಹಾಗೂ ವಿವಿಧ ಇಲಾಖೆಯ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು. ಯೋಜನೆ ಯಾವುದೇ ಇದ್ದರೂ ಏನೇ ನಿಯಮಗಳಿದ್ದರೂ ಜನರಿಗೆ ನೀರು ಕುಡಿಯುವ ನೀರು ಪೂರೈಸುವುದಕ್ಕೆ ಯಾವುದೇ ನಿಯಮ, ಕಾರ್ಯವ್ಯಾಪ್ತಿ, ಸಮಸ್ಯೆಗಳು ಅಡ್ಡಿ ಬಂದರೂ ಜಿಲ್ಲಾಧಿಕಾರಿಗಳು ಅವುಗಳನ್ನು ಮೀರಿ ನೀರು ಪೂರೈಕೆಗೆ ಆದೇಶ ನೀಡಬಹುದಾಗಿದೆ. ಜಿಲ್ಲೆಯಲ್ಲಿ ಸಾಮಾನ್ಯ ಕುಡಿಯುವ ನೀರಿನ ಡಿಬಿಓಟಿ ಯೋಜನೆಯಿಂದಾಗಿ ಹೊಸ ಬೋರ್ ವೆಲ್ ಕೊರೆಯದೇ ನೀರು ಪೂರೈಕೆಗೆ ಸಾಧ್ಯವಾಗಿರುವುದು ಒಳ್ಳೆಯ ಸಂಗತಿ. ಆದಾಗ್ಯೂ ಪೂರ್ವ ಮುಂಗಾರು ಮಳೆ ಕೊರೆತಯಿರುವುದರಿಂದ ಪೂರೈಸುವ ನೀರು, ಭವಿಷ್ಯದ ದೃಷ್ಟಿಯಿಂದ ಅಗತ್ಯಕ್ಕೆ ಅನುಸಾರವಾಗಿ ಮಿತವ್ಯಯ ಮಾಡಲು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆ ಹಾಗೂ ಗ್ರಾ. ಪಂ. ಗಳು ಜನಜಾಗೃತಿಗೆ ಮುಂದಾಗಬೇಕೆಂದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಸೂಚಿಸಿದರು.
ರೈತರ ಕೃಷಿ ಚಟುವಟಿಕೆಗಳು ಮುಂಗಾರು-ಪೂರ್ವ ಮಳೆ ಕೊರತೆಯಿಂದ ಕುಂಠಿತವಾಗಿರುವುದರಿಂದ ಬಾಕಿ ಉಳಿದ ಮುಂಗಾರು ಮಳೆ ಆದಾಗ ಅಗತ್ಯದ ಬೀಜ ರಸಗೊಬ್ಬರ ಪೂರೈಕೆಗೆ ಜಾನುವಾರುಗಳಿಗೆ ಜಿಲ್ಲೆಯಲ್ಲಿ ಸ್ಥಾಪಿಸಲಾದ 28 ಮೇವು ಬ್ಯಾಂಕುಗಳಿಂದ ಗುಣಮಟ್ಟದ ಮೇವು ಬೇಡಿಕೆಗೆ ಅನುಗುಣವಾಗಿ ರೈತರಿಗೆ ಲಭ್ಯವಾಗುವಂತೆ ಅಗತ್ಯದ ಕ್ರಮ ಜರುಗಿಸಬೇಕು.
ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆಯಾಗಿರುವ ಜಲ್ಲೆಯ 35 ಗ್ರಾ,ಮಗಳಲ್ಲಿ ಉದ್ದೇಶಿತ ಅಭಿವೃದ್ಧಿ ಕಾಮಗಾರಿ ಕೈಕೊಳ್ಳುವಾಗ ಸಮನ್ವಯ ಸಾಧಿಸಲು ಸಾಧ್ಯವಿರುವೆಡೆ ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಳ್ಳಬೇಕು. ಉತ್ತಮ ಗುಣಮಟ್ಟದ ಕಾಮಗಾರಿ ಆಗಬೇಕು. ಅಂಗನವಾಡಿ, ಗ್ರಂಥಾಲಯ , ವ್ಯಾಯಾಮ ಶಾಲೆ, ಮುಂತಾದ ಕಟ್ಟಡಗಳು ಸ್ಥಳೀಯ ಅಗತ್ಯಗಳನ್ನು ಪೂರೈಸುವಂತೆ ಹಾಗೂ ಜನಸ್ನೇಹಿ ಆಗಿರುವುದಕ್ಕೆ ಆದ್ಯತೆ ನೀಡಬೇಕು. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ನಿಮರ್ಾಣವಾಗುವ ರಸ್ತೆಗಳು ವೃತ್ತಿಪರ ಕಾಮಗಾರಿಯಾಗಬೇಕು. ರಸ್ತೆ ಹೆದ್ದಾರಿಗೆ ಕೂಡುವಲ್ಲಿ ರಾತ್ರಿ ವೇಳೆ ಕೂಡ ಪ್ರತಿಫಲಿಸುವ ಗ್ರಾಮದ ಹೆಸರು, ದೂರ ಇತ್ಯಾದಿ ವಿವರಗಳನ್ನು ರಸ್ತೆ ಸುರಕ್ಷತೆ ನಿಯಮಗಳನ್ವಯ ಪ್ರದಶರ್ಿಸಲು ಅಗತ್ಯದ ಕ್ರಮ ಜರುಗಿಸಬೆಕು.
ಜಿಲ್ಲೆಗೆ ಕೌಶಲ್ಯಾಭಿವೃದ್ಧಿಯಲ್ಲಿ ಕೌಶಲ್ಯಾಭಿವೃದ್ಧಿ ಸಚಿವರು ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಹೆಚ್ಚಿನ ಅನುದಾನ ನೀಡಲಾಗಿದ್ದು ಅದರ ಸದುಪಯೋಗವಾಗಬೇಕು. ವಷರ್ಾಂತ್ಯದಲ್ಲಿ ಬೃಹತ್ ಉದ್ಯೋಗ ಮೇಳ ಹಾಗು ಅದಕ್ಕೂ ಪೂರ್ವ ಜಿಲ್ಲೆಯ ಯುವ ಜನರು ಸೇರಿದಂತೆ ಕೌಶಲ್ಯಾಭಿವೃದ್ಧಿ ಹೊಂದಲು ಅಗತ್ಯ ಬಿದ್ದಲ್ಲಿ ಹೆಚ್ಚುವರಿ ಸಂಪನ್ಮೂಲ ರೂಢಿಸಿ ತರಬೇತಿಗಳನ್ನು ನೀಡಲು ಈಗಿನಿಂದಲೇ ಅಗತ್ಯ ಕ್ರಮ ಜರುಗಿಸಲು ಜಿಲ್ಲಾ ಉಸ್ತುವಾರಿ ಕಾಯದಶರ್ಿ ಆಮ್ಲನ್ ಆದಿತ್ಯ ಬಿಸ್ವಾಸ್ ತಿಳಿಸಿದರು.
ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.