ಪರಿಸರ ಸ್ನೇಹಿ ವಿಧಾನದಲ್ಲಿ ತ್ಯಾಜ್ಯ ನಿರ್ವಹಣೆ-ಶಾಸಕ ಡಾ. ಚಂದ್ರು ಲಮಾಣಿ

Waste management in an environment-friendly manner-lawmaker Dr. Chandru Lamani

ಪರಿಸರ ಸ್ನೇಹಿ ವಿಧಾನದಲ್ಲಿ ತ್ಯಾಜ್ಯ ನಿರ್ವಹಣೆ-ಶಾಸಕ ಡಾ. ಚಂದ್ರು ಲಮಾಣಿ 

ಶಿರಹಟ್ಟಿ 16:  ಕೆ ಎಲ್ ಡಿ ಮಲ ಸಂಸ್ಕರಣಾ ಘಟಕವು ದಿನಕ್ಕೆ 3000 ಲೀಟರ್ ಮಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಈ ಘಟಕಗಳು ನೈರ್ಮಲ್ಯವನ್ನು ಕಾಪಾಡುವುದು ಮತ್ತು ಪರಿಸರ ಸ್ನೇಹಿ ವಿಧಾನದಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಅವರು ಹೇಳಿದರು. ತಾಲೂಕಿನ ಬೆಳ್ಳಟ್ಟಿ ಗ್ರಾಮದ ಹೊರವಲಯದ ಬುಧವಾರ ರಂದು ಜಿ ಪಂ ಗದಗ ಸಂಯುಕ್ತಾಶ್ರಯದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯು 3 ಕೆ.ಎಲ್‌.ಡಿ.ಮಲ ಸಂಸ್ಕರಣಾ ಘಟಕ ಮತ್ತು ಟೀಟ್ಮೆಂಟ್ ಪ್ಲಾಂಟ್ ನಿರ್ಮಾಣಿಸಲು ಭೂಮಿ  ಪೂಜೆ ಮಾಡಿ ಮಾತಾನಾಡಿ ಅವರು. ಮನೆಗಳು, ಅಪಾರ್ಟ್‌ಮೆಂಟ್‌ಗಳು ಮತ್ತು ವಾಣಿಜ್ಯ ಕಟ್ಟಡಗಳಿಂದ ಮಲವನ್ನು ಸಂಗ್ರಹಿಸಲಾಗುತ್ತದೆ.ಸಂಗ್ರಹಿಸಿದ ಮಲವನ್ನು ವೈಜ್ಞಾನಿಕ ವಿಧಾನಗಳನ್ನು ಬಳಸಿ ಸಂಸ್ಕರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ದ್ರವ ಮತ್ತು ಘನ ತ್ಯಾಜ್ಯವನ್ನು ಪ್ರತ್ಯೇಕಿಸಲಾಗುತ್ತದೆ. ಸಂಸ್ಕರಿಸಿದ ಘನ ತ್ಯಾಜ್ಯವನ್ನು ಜೈವಿಕ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ದ್ರವ ತ್ಯಾಜ್ಯವನ್ನು ಸಂಸ್ಕರಿಸಿ ನೀರನ್ನು ಮರುಬಳಕೆ ಮಾಡಲಾಗುತ್ತದೆ ಎಂದು ಹೇಳಿದರು. ನಮಗೆ ಮುಂತಾದ  ಪ್ರಯೋಜನಗಳ ದೊರೆಯುತ್ತವೆ .ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ.ಮಲವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವ ಮೂಲಕ ಪರಿಸರ ಮಾಲಿನ್ಯವನ್ನು ತಡೆಯುತ್ತದೆ.ಸಂಸ್ಕರಿಸಿದ ತ್ಯಾಜ್ಯದಿಂದ ಉತ್ಪತ್ತಿಯಾಗುವ ಜೈವಿಕ ಗೊಬ್ಬರವನ್ನು ಕೃಷಿಯಲ್ಲಿ ಬಳಸಬಹುದು.ದ್ರವ ತ್ಯಾಜ್ಯವನ್ನು ಸಂಸ್ಕರಿಸಿ ನೀರನ್ನು ಮರುಬಳಕೆ ಮಾಡುವ ಮೂಲಕ ನೀರಿನ ಸಂರಕ್ಷಣೆಗೆ ಕೊಡುಗೆ ನೀಡುತ್ತದೆ ಎಂದು ಹೇಳಿದರು. ಈ ವೇಳೆ ಗ್ರಾ ಪಂ ಅಧ್ಯಕ್ಷ ಪಂಚಪ್ಪ ನಿರ್ವಾಣಶೆಟ್ಟರ್,ಮಾಜಿ ಗ್ರಾ ಪಂ ಅಧ್ಯಕ್ಷ ಗಳ ಶಿವನಗೌಡ್ರ ಪಾಟೀಲ,ತಿಮ್ಮರೆಡ್ಡಿ ಮರರೆಡ್ಡಿ,ಮುಂಡರಗಿ ಬಿಜೆಪಿ ಮಂಡಲ ಅಧ್ಯಕ್ಷ ಗೀರೀಶ್ ಹಾವಿನಾಳ,ಮೋಹನಚಂದ ಗುತ್ತೆಮ್ಮನವರ,ಜಾನು ಲಮಾಣಿ,ಮಲ್ಲಯ್ಯ ಶೀಲವಂತಮಠ , ಮಲ್ಲಿಕಾರ್ಜುನ ಪಾಟೀಲ  ಇತರರಿದ್ದರು.