ಹಾಲೇಶ್ ಶಿವಪ್ಪನವರ
ರಾಣೇಬೆನ್ನೂರು 14 : ರಾಣೇಬೆನ್ನೂರು ತಾಲೂಕಿನ ಗುಡಿಹೊನ್ನತ್ತಿ ಗ್ರಾಮದ ಸಕರ್ಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಸ್ನಾನದ ಬಕೆಟ್ ಸಲುವಾಗಿ ಮಕ್ಕಳು ಜಗಳವಾಡುವಾಗ ಮಕ್ಕಳಿಗೆ ವಾರ್ಡನ್ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ
ಈ ಹಾಸ್ಟಲ್ನಲ್ಲಿ 100 ವಿದ್ಯಾಥರ್ಿಗಳಿದ್ದು ಒಂದೇ ಒಂದು ಬಕೆಟ್ ಇರುತ್ತದೆ.ಆದರೆ ಬೆಳ್ಳಿಗ್ಗೆ ಸ್ನಾನಕ್ಕಾಗಿ ವಿದ್ಯಾಥರ್ಿಗಳು ಜಗಳಾಡುತ್ತಿದ್ದು ಇಲ್ಲಿಯ ವಾರ್ಡನ್ ಆಗಿ ಕೆಲಸಮಾಡುತ್ತಿರುವ ವ್ಯಕ್ತಿ ವಿದ್ಯಾಥರ್ಿಗಳಿಗೆ ಕರುಣೆ ತೋರಿಸದೆ ಮನ ಬಂದತೆ ಹೊಡೆದು ಮೂರು ಮಕ್ಕಳಿಗೆ ಗಾಯಗಳಾಗಿವೆ ಈ ರೀತಿ ಆದರೆ ಹಾಸ್ಟಲ್ನಲ್ಲಿರುವ ಮಕ್ಕಳ ಗತಿ ಎನು?
ಹಲ್ಲೆಗೆ ಒಳಗಾದ ವಿದ್ಯಾಥರ್ಿಗಳು:-
6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರಾಜೇಶ ರಾಮನಾಯ್ಕ. ಕಿರಣ ಹನುಮಂತಪ್ಪ ನಾಯ್ಕ ಹಾಗೂ ಪಂಪಾ ನಾಯ್ಕ ಈ ವಿದ್ಯಾಥರ್ಿಗಳು ಗಾಯಗೊಂಡು ರಾಣೇಬೆನ್ನೂರಿನ ಆಸ್ಪತ್ರೆಗೆ ಕರೆದೋಯ್ದ ಚಿಕಿತ್ಸೆಕೊಡಿಸಲಾಗಿದೆ
ಒಬ್ಬ ವಿದ್ಯಾಥರ್ಿಗೆ ಬಲವಾದ ಪೆಟ್ಟು ಬಿದ್ದು ಒಬ್ಬನ ಮುಖಕ್ಕೆ ಹೊಡೆದಿದ್ದರಿಂದ ಕೈಯಲ್ಲಿನ ಉಂಗುರ ತಾಕಿ ಮುಖ ಬಾವುಬಂದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಹಾಸ್ಟಲಿನ ವಾರ್ಡನ್ ಸಿ.ಸಿ.ಉಪ್ಪಾರ್ ಎಂದು ಹೆಳಲಾಗಿದ್ದು ಇವರು ಮಕ್ಕಳಿಗೆ ಜಾತಿ ಬೇದ ಮಾಡುತ್ತಾರೆಂದು ಹೆಳಿದರು
ಖಾಸಗಿ ಕಾರ್ಯಕ್ರಮಗಳಿಗೆ ಬಾಡಿಗೆ ಶಾಲೆ ರಜೆ ಇದ್ದಾಗ ವಸತಿ ನಿಲಯವನ್ನು ಮದುವೆ ಮತ್ತು ಇತರ ಖಾಸಗಿ ಕಾರ್ಯಕ್ರಮಗಳಿಗೆ ವಾರ್ಡನ್ ಬಾಡಿಗೆ ಕೊಡುತ್ತಿದ್ದು ಸಕರ್ಾರದ ಆದೇಶವನ್ನು ಗಾಳಿಗೆ ತೂರಿ ನಾನೇ ಯಜಮಾನನಂತೆ ದರ್ಪ ತೋರಿಸುತ್ತಾ ಈ ಹಾಸ್ಟಲ್ ಅನ್ನು ಹಾಳುಮಾಡುತ್ತಿದ್ದಾನೆಂದು ವಿದ್ಯಾಥರ್ಿಗಳು ದೂರಿದ್ದಾರೆ
ಹಲ್ಲೇ ಖಂಡಿಸಿ ಪ್ರತಿಭಟನೆ :-
ಕುಲಕ್ಷ ಕಾರಣಕ್ಕೆ ವಿದ್ಯಾಥರ್ಿಗಳನ್ನು ಥಳಿಸಿದ ತಾಲೂಕಿನ ಗುಡಿಹೊನ್ನತ್ತಿ ಗ್ರಾಮದ ಹಾಸ್ಟಲ್ ಮೇಲ್ವಿಚಾರಕ ಸಿ.ಸಿ.ಉಪ್ಪೀನ್ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಎಸ್.ಎಪ್.ಐ ನೇತೃತ್ವದಲ್ಲಿ ವಿದ್ಯಾಥರ್ಿಗಳು ಪ್ರತಿಭಟನೆ ನಡೆಸಿ ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ ಅವರಿಗೆ ಮನವಿ ಸಲ್ಲಿಸಿದರು ಎಸ್.ಎಪ್.ಐ ಮುಖಂಡ ಬಸವರಾಜ ಭೋವಿ ಮಾತನಾಡಿ ಹೊನ್ನತ್ತಿ ಹಾಸ್ಟಲ್ನಲ್ಲಿ ಸೌಲಭ್ಯಗಳು ಕೊರತೆಯಿದ್ದು ವಿದ್ಯಾಥರ್ಿಗಳ ಸಂಖ್ಯೆ ಅನುಗುಣವಾಗಿ ಶೌಚಾಲಯ ಹಾಗೂ ಸ್ನಾನದ ಗೃಹಗಳು ಇರುವುದಿಲ್ಲ ಅದಕ್ಕೆ ವಿದ್ಯಾಥರ್ಿಗಳ ನಡುವೆ ದಿನನಿತ್ಯ ಗಲಾಟೆ ಆಗುತ್ತಿದ್ದು ವಿದ್ಯಾಥರ್ಿಗಳ ಮೇಲೆ ಹಲ್ಲೇ ಮಾಡಿದ ವಾರ್ಡನ್ ಅವರನ್ನು ಅಮಾನತುಗೊಳಿಸಬೇಕೆಂದು ಎಸ್.ಎಪ್.ಐ ಕಾರ್ಯಕರ್ತರು ಸಮಾಜ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದರು.
ಹೊನ್ನತ್ತಿ ಗ್ರಾಮಕ್ಕೆ ಮಕ್ಕಳ ಆಯೋಗದ ಅಧ್ಯಕ್ಷ ವೈ ಮರಿಸ್ವಾಮಿ ಭೇಟಿ: -
ನಿನ್ನೆ ನಡೆದ ಹಾಸ್ಟೆಲ್ ವಿದ್ಯಾಥರ್ಿಗಳ ಮೇಲೆ ವಾರ್ಡನ್ ಹಲ್ಲೆ ಮಾಡಿದನೆಂದು ಸುದ್ದಿ ತಿಳಿದ ತಕ್ಷಣ ಹಾಸ್ಟಲ್ಗೆ ಬೇಟಿ ನೀಡಿ ಮಕ್ಕಳ ಯೋಗ ಕ್ಷಮದ ಬಗ್ಗೆ ವಿಚಾರಿಸಿದ್ದಾರೆ. ಪ್ರತಿಯೊಬ್ಬ ಮಗುವಿನ ಬಗ್ಗೆ ವಿಚಾರಿಸಿ ಇಲ್ಲಿನ ಹಾಸ್ಟೆಲಿನ ಬಗ್ಗೆ ಸ್ಥಿತಿಗಳನ್ನು ನೋಡಿ ವಿಚಾರಣೆ ಮಾಡಿ ಇಲ್ಲಿರುವ ವಾರ್ಡನನ್ನು ಅತೀ ಶ್ರೀಘ್ರದಲ್ಲಿ ಅಮಾನತುಗೊಳಿಸಲು ಸಕರ್ಾರಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ಹೇಳಿದರು.