ಬೆಳಗಾವಿ, 05: "ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ನೈತಿಕ ಮತದಾನ ಮಾಡಲು ಮತ್ತು ಚುನಾವಣಾ ಅಕ್ರಮದ. ಬಗ್ಗೆ ಸಿವಿಜಿಲ್ ಆಪ್ನಲ್ಲಿ ಮಾಹಿತಿಯನ್ನು ಸಲ್ಲಿಸುವಂತೆ ಕರೆ ನೀಡಿದರು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವದು ಮತ್ತು ದೂರು ಸಲ್ಲಿಸಿದ 100 ನಿಮಿಷದೊಳಗಾಗಿ ದೂರಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಾದ ಡಾ.ರಾಜೇಂದ್ರ ಕೆ.ವಿ ಅವರು ತಿಳಿಸಿದರು.
ಜಿಲ್ಲಾ ಸ್ವೀಪ್ ಸಮಿತಿ ಬೆಳಗಾವಿ ಮತ್ತು ಬೆಳಗಾವಿ ವೊಟ್ಸ್ 100% ಇವರ ಸಂಯುಕ್ತಾಶ್ರಯದಲ್ಲಿ ಇಂದು (ಏ.5) ಸಿಪಿಎಡ್ ಮೈದಾನದಿಂದ ವಾಕಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ಈ ಸಂದರ್ಭದಲ್ಲಿ ದಂಡು ಮಂಡಳಿ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಾದ ದಿವ್ಯಾ ಹೊಸೂರ, ಪ್ರೋಬೇಷನರಿ ಐಎಎಸ್ ಅಧಿಕಾರಿಗಳಾದ ಭಂವರಸಿಂಗ್ ಮೀನಾ, ಜಿಲ್ಲಾ ಸ್ವೀಪ್ ಐಕಾನ್ ಮಧು ಮರಾಠೆ ಅವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಇವಿಎಮ್ ಮತ್ತು ವಿವಿಪ್ಯಾಟ್ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು. ವಾಕಥಾನ್ ಸಿಪಿಎಡ್ ಮೈದಾನದಿಂದ ಪ್ರಾರಂಭವಾಗಿ ವೆಂಗುಲರ್ಾ ರಸ್ತೆ, ಹನುಮಾನ ನಗರ, ಜಾಧವ ನಗರ ಮಾರ್ಗವಾಗಿ ಸಂಚರಿಸಿ ಸಿಪಿಎಡ್ ಮೈದಾನದಲ್ಲಿ ಮುಕ್ತಾಯಗೊಂಡಿತು. ಸದರಿ ವಾಕಥಾನ್ ಸುಮಾರು 600 ಜನರು ಭಾಗವಹಿಸಿದ್ದರು.
ವಾಕಥಾನ್ದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ, ಬೆಳಗಾವಿ ವೊಟ್ಸ್ 100% ತಂಡದ ಚೈತನ್ಯ ಕುಲಕಣರ್ಿ, ಸಚಿನ ಸಬ್ಮಿಸ್, ಮಯೂರ ಶಿವಲಕರ, ಕಿರಣ ನಿಪ್ಪಾಣಿಕರ, ಮುಕುಲ್ ಚೌಧರಿ, ಪ್ರವೀನ ಪವಾರ, ಕೀತರ್ಿ ಟೆಂಬೆ, ಆನಂದ ಬುಕ್ಕೆಬಾಗ, ವಿಕ್ರಾಂತ ಕಾಲಕುಂದ್ರಿಕರ, ಡಾ.ಅಪ್ಪಸಾಹೇಬ ನರಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಡಾ|ಶಶಿಧರ ನಾಡಗೌಡ ಮಹಾನಗರ ಪಾಲಿಕೆ ಬೆಳಗಾವಿ, ರವಿ ಭಜಂತ್ರಿ, ಸ್ವೀಪ್ ಸಹಾಯಕ ಅಧಿಕಾರಿ, ಸಿ ಬಿ ರಂಗಯ್ಯ, ಉಪನಿದರ್ೇಶಕರು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ನಾಮದೇವ ಬಿಲಕರ, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ, ಪಿ ಪಿ ದೇಶಪಾಂಡೆ, ತಾಲೂಕ ಯೋಜನಾಧಿಕಾರಿ, ಎ ಪಿ ಬಸನಾಳ. ಲೆಕ್ಕ ಅಧೀಕ್ಷಕರು, ಜಿಲ್ಲಾ ಪಂಚಾಯತ ಹಾಗೂ ಸ್ವೀಪ್ ಸಮಿಶಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.