ಭಾರತ ನಕ್ಷೆಯಲ್ಲಿ ದೀಪ ಬೆಳಗಿಸಿ ಮತದಾನ ಜಾಗೃತಿ

ಧಾರವಾಡ27: ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಚುನಾವಣಾ ಸಹಭಾಗಿತ್ವ ಸಮಿತಿ (ಸ್ವೀಪ್) ನಗರದ ಸಕರ್ಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಆವರಣದಲ್ಲಿ ಸೋಮವಾರ ಸಂಜೆ  ಭಾರತ ನಕ್ಷೆಯಲ್ಲಿ ದೀಪ ಬೆಳಗಿಸುವ ಮೂಲಕ ವಿಭಿನ್ನವಾಗಿ ಮತದಾರರ ಜಾಗೃತಿ ಕಾರ್ಯಕ್ರಮ ಆಚರಿಸಲಾಯಿತು.

ಭಾರತ ನಕಾಶೆ, ಭಾರತ ಚುನಾವಣಾ ಆಯೋಗ, ಸ್ವೀಪ್ ಲಾಂಭನಗಳಿಗೆ  ಮೇಣಬತ್ತಿ ಬೆಳಗಿಸಿ, ಸುಮಾರು 7 ಕೆ.ಜಿ.ತೂಕದ ಕನರ್ಾಟಕ ನಕ್ಷೆ ಮಾದರಿಯ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು.

      ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ,ಜಿಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಮತದಾನ ಪವಿತ್ರ ಕಾರ್ಯವಾಗಿದೆ, ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಈ ಜವಾಬ್ದಾರಿಯನ್ನು ತಪ್ಪದೇ ನಿರ್ವಹಿಸಬೇಕು. 18 ವರ್ಷ ಪೂರ್ಣಗೊಳಿಸಿದ ಯುವಜನರು ಮತದಾರ ಪಟ್ಟಿಗೆ ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದರು.

      ಶಿಕ್ಷಕ ಎಫ್.ಬಿ.ಕಣವಿ ಮತ್ತು ತಂಡದವರಿಂದ ಚುನಾವಣಾ ಗೀತೆಗಳು, ಮಹದೇವ ಸತ್ತಿಗೇರಿಯವರಿಂದ ನಗೆಹನಿ ಮೂಲಕ ಚುನಾವಣಾ ಜಾಗೃತಿ ಕಾರ್ಯಕ್ರಮಗಳು ಜರುಗಿದವು.ವಿಶೇಷ ಮಕ್ಕಳ ವಸತಿ ಶಾಲೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮಹಿಳಾ ವಿದ್ಯಾಥರ್ಿ ನಿಲಯ,  ಸಕರ್ಾರಿ ಬಿ.ಎಡ್.ಕಾಲೇಜು ವಿದ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

  ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಗಜಾನನ ಮನ್ನಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎ.ಎಂ.ಮಿರ್ಜಣ್ಣವರ್, ಸ್ವೀಪ್ ರಾಜ್ಯ ಮಟ್ಟದ ತರಬೇತಿದಾರ ಕೆ.ಎಂ.ಶೇಖ್, ಜಿಲ್ಲಾ ಮಟ್ಟದ ತರಬೇತಿದಾರ ಜಿ..ಎನ್. ನಂದನ ಉಪಸ್ಥಿತರಿದರು.