ಧಾರವಾಡ.9: ಜಿಲ್ಲೆಯಾದ್ಯಂತ ನಡೆಯುತ್ತಿರುವ ಮತದಾರರ ಜಾಗೃತಿ ಚಟುವಟಿಕೆಗಳು ದಿನೇ ದಿನೇ ರಂಗು ಪಡೆಯುತ್ತಿವೆ. ವಿಶೇಷವಾಗಿ ಹೊಸದಾಗಿ ಮತದಾನಕ್ಕೆ ಅರ್ಹತೆ ಪಡೆದುಕೊಂಡಿರುವ ಯುವಜನರನ್ನು ಮತದಾನಕ್ಕೆ ಪ್ರೋತ್ಸಾಹಿಸುವ ಗುರಿಯೊಂದಿಗೆ ಜಿಲ್ಲಾ ಸ್ವೀಪ್ ಸಮಿತಿ ನಡೆಸುತ್ತಿರುವ ವಿಶಿಷ್ಟ ಚಟುವಟಿಕೆಗಳು ಜಿಲ್ಲೆಯಾದ್ಯಂತ ಚುನಾವಣಾ ಹಬ್ಬದ ವಾತಾವರಣ ನಿಮರ್ಿಸುತ್ತಿವೆ. ಜಿಲ್ಲೆಯ ಪದವಿ ಕಾಲೇಜುಗಳ ವಿದ್ಯಾಥರ್ಿನಿಯರಲ್ಲಿ ಮತದಾನದ ಜಾಗೃತಿ ಮೂಡಿಸಲು ಮೆಹಂದಿ ಕಾಯರ್ಾಗಾರ ಮತ್ತು ಸ್ಪಧರ್ೆಗಳನ್ನು ಏರ್ಪಡಿಸುವ ಕಾರ್ಯಕ್ಕೆ ಇಂದು ಇಲ್ಲಿನ ಕೆ.ಎಸ್. ಜಿಗಳೂರ ಕಲಾ ಹಾಗೂ ಎಸ್.ಎಂ. ಶೇಷಗಿರಿ ವಾಣಿಜ್ಯ ಮಹಿಳಾ ವಿದ್ಯಾಲಯದಲ್ಲಿ ಚಾಲನೆ ದೊರೆಯಿತು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಬಿ.ಸಿ. ಸತೀಶ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿದರ್ೇಶಕಿ ಡಾ. ನೀಲಾಂಬಿಕಾ ಪಟ್ಟಣಶೆಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಗಜಾನನ ಮನ್ನಿಕೇರಿ ಸೇರಿದಂತೆ ಮತ್ತಿತರ ಗಣ್ಯರ ಅಂಗೈಯಲ್ಲಿ ವಿದ್ಯಾಥರ್ಿನಿಯರು ಮತದಾನ ಜಾಗೃತಿ ಸಂದೇಶ ಸಾರುವ ಮೆಹಂದಿ ಹಾಕುವುದು ಹಾಗೂ ಸ್ವೀಪ್ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.
ಶಿಕ್ಷಕ, ಕಲಾವಿದ ಮಹದೇವ ಸತ್ತಿಗೇರಿ ಅವರು ನಗೆಹನಿಗಳ ಮೂಲಕ ನೆರೆದ ವಿದ್ಯಾಥರ್ಿಗಳನ್ನು ನಗೆಗಡಲಲ್ಲಿ ತೇಲಿಸುತ್ತಲೇ ಮತದಾನದ ಮಹತ್ವ ಸಂದೇಶ ಸಾರಿದರು. ಎಫ್.ಬಿ. ಕಣವಿ ಮತ್ತು ತಂಡದವರ ಸುಶ್ರಾವ್ಯವಾದ ಚುನಾವಣಾ ಗೀತೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯಗಳನ್ನು ಯುವಜನರಿಗೆ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಟ್ಟವು.
ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕರೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ. ಸತೀಶ ಮಾತನಾಡಿ, ಮೆಹಂದಿ ಮೂಲಕ ವಿಭಿನ್ನವಾಗಿ ಮತದಾರರ ಸಂದೇಶ ಸಾರುವ ಆಯ್ದ ಅತ್ಯುತ್ತಮ ಮೆಹಂದಿಗಳಿಗೆ ಬಹುಮಾನ ನೀಡಲಾಗುವುದು. ಇದೇ ಮೊದಲ ಬಾರಿಗೆ ಮತ ಚಲಾಯಿಸಲು ಅರ್ಹತೆ ಪಡೆದಿರುವ ಯುವಜನರು ತಪ್ಪದೇ ಮತದಾನ ಮಾಡಬೇಕು. ಮತ ಚಲಾಯಿಸಿದ ನಂತರ ತಮ್ಮ ಬೆರಳಿಗೆ ಹಾಕಿಸಿಕೊಂಡ ಶಾಹಿ ಕಾಣುವ ಹಾಗೆ ಮತಗಟ್ಟೆ ಎದುರು ನಿಂತುಕೊಂಡು ಸೆಲ್ಫಿ ಫೋಟೋ ತೆಗೆದುಕೊಂಡು ಜಿಲ್ಲಾ ಸ್ವೀಪ್ ಸಮಿತಿಗೆ ಕಳಿಸಿದರೆ ಉತ್ತಮವಾದ ಸೆಲ್ಫಿಗಳನ್ನು ಆರಿಸಿ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದರು.
ನವ ಯುವ ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವೋಟ್ ಫಾರ್ ಇಂಡಿಯಾ, ಪ್ರಜಾಪ್ರಭುತ್ವ ಬಲವರ್ಧನೆಗಾಗಿ ಮತ ಚಲಾಯಿಸೋಣ, ಮತದಾನ ನಮ್ಮ ಕರ್ತವ್ಯ ಅದನ್ನು ನಿಭಾಯಿಸೋಣ, ನನ್ನ ಮತ ನನ್ನ ಹಕ್ಕು ಹೀಗೆ ಮೊದಲಾದ ಘೋಷಣೆಗಳೊಂದಿಗೆ ಸ್ವೀಪ್, ಚುನಾವಣಾ ಆಯೋಗದ ಲಾಂಛನಗಳು ಮೆಹಂದಿಯಲ್ಲಿ ಅರಳಿದವು.
ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ, ಜಿಲ್ಲಾ ವಾತರ್ಾಧಿಕಾರಿ ಮಂಜುನಾಥ ಡೊಳ್ಳಿನ, ಕಾಲೇಜು ಶಿಕ್ಷಣ ಇಲಾಖೆಯ ಸ್ವೀಪ್ ನೋಡಲ್ ಅಧಿಕಾರಿ ಆರ್.ಬಿ. ಸೋನೆಖಾನ್, ಸ್ವೀಪ್ ರಾಜ್ಯ ಮಟ್ಟದ ತರಬೇತಿದಾರ ಕೆ.ಎಂ. ಶೇಖ್, ವಾತರ್ಾ ಸಹಾಯಕ ಡಾ.ಸುರೇಶ ಹಿರೇಮಠ, ಶಾಂತಾ ಪಾಟೀಲ ಕುಲಕಣರ್ಿ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ನಿರ್ಮಲಾ ಹಿರೇಗೌಡರ್ ಸ್ವಾಗತಿಸಿದರು.ವಿದ್ಯಾಥರ್ಿ ಒಕ್ಕೂಟದ ಸಹ ಕಾರ್ಯದಶರ್ಿ ವಿದ್ಯಾಶ್ರೀ ಗಾಮಣ್ಣವರ್ ನಿರೂಪಿಸಿದರು. ಕಾಲೇಜಿನ ಚುನಾವಣಾ ಸಾಕ್ಷರತಾ ಕ್ಲಬ್ ನೋಡಲ್ ಅಧಿಕಾರಿ ಶಕುಂತಲಾ ಬಿರಾದಾರ ವಂದಿಸಿದರು.