ಮತದಾನ: ಜಿಲ್ಲಾ ಸ್ವೀಪ್ ಸಮಿತಿಯಿಂದ ಕಾಮರ್ಿಕರಿಗೆ ಮಾಹಿತಿ

ಕೊಪ್ಪಳ 01: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಕೊಪ್ಪಳ ಜಿಲ್ಲಾ ಸ್ವೀಪ್ ಸಮಿತಿಯಿಂದ ಕಾಮರ್ಿಕರಿಗೆ ಮತದಾನ ಜಾಗೃತಿ ಮತ್ತು ಇ.ವಿ.ಎಂ. ಹಾಗೂ ವಿ.ವಿ.ಪ್ಯಾಟ್ ಯಂತ್ರಗಳ ಕುರಿತು ಮಾಹಿತಿಯನ್ನು ನೀಡಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾಮರ್ಿಕ ಇಲಾಖೆ, ಕನರ್ಾಟಕ ರಾಜ್ಯ ಅಸಂಘಟಿತ ಕಾಮರ್ಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕನರ್ಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕರ ಕಲ್ಯಾಣ ಮಂಡಳಿ ಇವರ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಶುಕ್ರವಾರದಂದು ಏರ್ಪಡಿಸಲಾದ "ಕಾಮರ್ಿಕ ಸಮ್ಮಾನ ಪ್ರಶಸ್ತಿ" ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಮೂಡಿಸಲಾಯಿತು. 

ಜಿಲ್ಲಾ ಸ್ವೀಪ್ ಸಮಿತಿಯ ಶ್ರೀನಿವಾಸ್ ಚಿತ್ರಗಾರ ಅವರು ಮತದಾನ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.  ಮತ ಖಾತ್ರಿಗಾಗಿ ಬಳಕೆ ಮಾಡಲಾದ ಮತದಾನ ಖಾತ್ರಿಯಂತ್ರ ವಿ.ವಿ.ಪ್ಯಾಟ್ ಕಾರ್ಯ ನಿರ್ವಹಣೆ ಕುರಿತು ಮಸ್ಟರ್ ಟ್ರೈನರ್ ಪ್ರವೀಣ ಮಾಹಿತಿಯನ್ನು ನೀಡಿದರು.  ಜಿಲ್ಲಾ ಕಾಮರ್ಿಕ ಅಧಿಕಾರಿ ಚಂದ್ರಶೇಖರ ಎನ್. ಐಲಿ, ಕಾಮರ್ಿಕ ನಿರೀಕ್ಷಕ ಹೊನ್ನಪ್ಪ ಸೇರಿದಂತೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.  

ಕಾರ್ಯಕ್ರಮದಲ್ಲಿ ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕರು, ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಮಂಡಕ್ಕಿ ಭಟ್ಟಿ ಕಾಮರ್ಿಕರು, ಸಾರಿಗೆ ಕಾಮರ್ಿಕರು, ಹಮಾಲಿಗಳು, ಟೈಲರ್ಗಳು ಹಾಗೂ ಚಿಂದಿ ಆಯುವವರು, ಮೆಕ್ಯಾನಿಕ್ ಕಾಮರ್ಿಕರು, ಗೃಹ ಕೆಲಸದ ಕಾಮರ್ಿಕರು, ತ್ರಿಚಕ್ರ ಮತ್ತು ನಾಲ್ಕು ಚಕ್ರ ವಾಹನ ಚಾಲಕರು ಹಾಗೂ ಅಸಂಘಟಿತ ವಲಯದ ಕಾಮರ್ಿಕ ಸಂಘದವರು ಭಾಗವಹಿಸಿದ್ದು, ಎಲ್ಲರಿಗೂ ಮತದಾನದ ಬಗ್ಗೆ ಹಾಗೂ ಇ.ವಿ.ಎಂ. ಹಾಗೂ ವಿ.ವಿ.ಪ್ಯಾಟ್ ಯಂತ್ರಗಳ ಕುರಿತು ಮಾಹಿತಿಯನ್ನು ನೀಡಲಾಯಿತು.  ಕೆಲ ಕಾಮರ್ಿಕರಿಂದ ಪ್ರಾಯೋಗಿಕವಾಗಿ ಮತದಾನ ಮಾಡಿಸಲಾಯಿತು.  ತಾವು ಹಾಕಿರುವ ಮತವನ್ನು ವಿ.ವಿ.ಪ್ಯಾಟ್ ಮೂಲಕ ಖಾತ್ರಿಯಾಗಿದೆ ಎಂದು ವೆದಿಕೆ ಮೇಲೆ ಮತದಾನ ಮಾಡಿದ ಕಾಮರ್ಿಕರು ಇದೇ ಸಂದರ್ಭದಲ್ಲಿ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.