ಅಂಚೆ ಸಿಬ್ಬಂದಿ ಮೂಲಕ ಮತದಾರರ ಜಾಗೃತಿ: ಡಾ.ಸತೀಶ

ಧಾರವಾಡ 15: ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಬರುವ ಏ.23 ರಂದು ನಡೆಯುವ ಮತದಾನ ಪ್ರಮಾಣವನ್ನು ಉತ್ತಮಪಡಿಸಲು ಜಿಲ್ಲೆಯಾದ್ಯಂತ ವಿವಿಧ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಕಾರ್ಯಕ್ಕೆ ಕೈ ಜೋಡಿಸಲು ಧಾರವಾಡದ ಮೂರು ಹೋಟೆಲುಗಳ ಮಾಲೀಕರು ಮತ ಚಲಾಯಿಸಿ ಬಂದವರಿಗೆ ಅಂದು ಶೇ.10 ರ ರಿಯಾಯಿತಿ ದರದಲ್ಲಿ ಉಪಹಾರ,ಊಟ ಪೂರೈಸಲು ಮುಂದೆ ಬಂದಿದ್ದಾರೆ. ಕಳೆದ ಚುನಾವಣೆಗಳಲ್ಲಿ ಕಡಿಮೆ ಮತದಾನ ವಾಗಿರುವ 20 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಅಂಚೆ ಇಲಾಖೆಯ ಸಹಯೋಗದಲ್ಲಿ ಮತದಾರರ ಮನೆಗಳಿಗೆ ತೆರಳಿ ಮತದಾರರ ಮಾರ್ಗದಶರ್ಿ ಪುಸ್ತಕಗಳನ್ನು ತಲುಪಿಸಲಾಗುವುದು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಹೇಳಿದರು.

    ಹೋಟೇಲುಗಳಲ್ಲಿ ಶೇ.10 ರಿಯಾಯಿತಿ; ಏ.23 ರಂದು ಮತದಾನ ಮಾಡಿ ಬಂದು ಬೆರಳಿಗೆ ಹಾಕಿಸಿಕೊಂಡ ಶಾಹಿ ತೋರಿಸಿದವರಿಗೆ ಅಂದು ಇಡೀ ದಿನ ತಮ್ಮ ಹೋಟೆಲುಗಳಲ್ಲಿ ಶೇ.10 ರ ರಿಯಾಯಿತಿ ದರದಲ್ಲಿ ಉಪಹಾರ,ಊಟವನ್ನು ಒದಗಿಸಲು ಹಳಿಯಾಳ ರಸ್ತೆಯ ಲಿಂಗಾಯತ ಭವನದ ಬಳಿಯ ಶಿವಸಾಗರ ಹೋಟೆಲ್, ಕಿತ್ತೂರು ಚನ್ನಮ್ಮ ಉದ್ಯಾನವನ ಎದುರಿನ ಶ್ರೀಪಂಜುಲರ್ಿ ಹಾಗೂ ಆರ್.ಎಲ್.ಎಸ್.ಕಾಲೇಜು ಬಳಿಯ ಎಲ್.ಇ.ಎ.ಕ್ಯಾಂಟೀನ್ಗಳ ಮಾಲೀಕರು ಸ್ವ ಇಚ್ಛೆಯಿಂದ ಮುಂದೆ ಬಂದಿದ್ದಾರೆ.

 ಮೊದಲ ಬಾರಿಗೆ ಮತ ಚಲಾಯಿಸುವವರಿಗೆ ಸೆಲ್ಫಿ ಸ್ಪಧರ್ೆ ; 18 ವರ್ಷ ಪೂರ್ಣಗೊಂಡು ಇದೇ ಮೊದಲ ಬಾರಿಗೆ ಮತದಾನಕ್ಕೆ ಅರ್ಹತೆ ಪಡೆದಿರುವ ಯುವಜನರು ಮತದಾನದ ಬಳಿಕ ತಮ್ಮ ಬೆರಳಿಗೆ ಹಾಕಿಸಿಕೊಂಡ ಶಾಹಿ ಹಾಗೂ ಮತಗಟ್ಟೆ ಕಾಣುವ ಹಾಗೆ ಸೆಲ್ಫಿ ತೆಗೆದುಕೊಂಡು ಜಿಲ್ಲಾ ಸ್ವೀಪ್ ಸಮಿತಿಗೆ ಕಳುಹಿಸಿದರೆ ಆಯ್ದ ಫೋಟೋಗಳಿಗೆ ಬಹುಮಾನ ನೀಡಲಾಗುವುದು. ಈ ಸ್ಪಧರ್ೆಯು ವೈಯಕ್ತಿಕ ಮತ್ತು ಗುಂಪು ಎರಡೂ ವಿಭಾಗಗಳಲ್ಲಿ ನಡೆಯಲಿದೆ. ಸೆಲ್ಫಿ ಫೋಟೋಗಳನ್ನು ಕಳಿಸಲು 9606539555 ಹಾಗೂ 9606549555 ಮೊಬೈಲ್ ಸಂಖ್ಯೆಗಳಿಗೆ ಕಳಿಸಬಹುದು. ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿದರ್ೇಶಕರ ಅಧ್ಯಕ್ಷತೆಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯು ಅತ್ಯುತ್ತಮ ಸೆಲ್ಫಿ ಫೋಟೋಗಳನ್ನು ಆಯ್ಕೆ ಮಾಡಲಿದೆ. ವಿಜೇತರಿಗೆ ಸಪ್ನಾ ಬುಕ್ ಹೌಸ್ನ ಉಡುಗೊರೆ ವೋಚರ್ಗಳನ್ನು ಬಹುಮಾನ ರೂಪದಲ್ಲಿ ನೀಡಲಾಗುವುದು ಎಂದರು.

     ಮತದಾರರ ಜಾಗೃತಿಯ ವಿವಿಧ ಪೋಸ್ಟರುಗಳು , ಜಿಲ್ಲಾ ಸ್ವೀಪ್ ಸಮಿತಿಯ ಸಹಯೋಗದಲ್ಲಿ ವಿಜೇತ್ ಹೊಸಮಠ ಅವರು ನಿಮರ್ಿಸಿರುವ ವಿಡಿಯೋ ತುಣುಕುಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

      ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಗಜಾನನ ಮನ್ನಿಕೇರಿ , ಅಂಚೆ ಇಲಾಖೆಯ ಅಧಿಕಾರಿಗಳಾದ ಆನಂದ ವಂದಾಲ,ಡಿ.ವಿ.ಉಳ್ಳಿಕಾಶಿ, ಹೊಟೇಲ್ ಉದ್ಯಮಿಗಳಾದ ರವಿಕಾಂತಶೆಟ್ಟಿ, ಮೃತ್ಯುಂಜಯ, ಅಭಿಲಾಷ್ ಮತ್ತಿತರರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.