ಲೋಕದರ್ಶನ ವರದಿ
ಬೆಳಗಾವಿ 25: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಲ್ಲಿ ವಿತಾವಿ ಯ ಚುನಾವಣಾ ಸಾಕ್ಷರತಾ ಸಂಘ ಆಯೋಜಿಸಿದ್ದ 9ನೇ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿ ತಾ ವಿ ಕುಲಸಚಿವರಾದ ಡಾ.ಎ.ಎಸ್.ದೇಶ್ಪಾಂಡೆ ಅವರು ಮಾತನಾಡಿ 2011 ರಿಂದ ಪ್ರತಿವರ್ಷ ಜನವರಿ 25 ರಂದು ರಾಷ್ಟ್ರದಾದ್ಯಂತ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತದೆ.
1950ರಲ್ಲಿ ಈ ದಿನದಂದು ಭಾರತದ ಚುನಾವಣಾ ಆಯೋಗದ ಸ್ಥಾಪನೆಯಾಯಿತು ಆದ ಕಾರಣ 2011 ರಿಂದ ಈ ದಿನವನ್ನು ಗೌರವದ್ಯೋತಕವಾಗಿ ಮತದಾರರ ದಿನವನ್ನಾಗಿ ಆಚರಿಸಲಾಗಿತ್ತಿದೆ ಎಂದು ಹೇಳಿದರು. ಈ ದಿನದ ಆಚರಣೆಯ ಮುಖ್ಯ ಉದ್ದೇಶವೆಂದರೆ ಮತದಾರರ ದಾಖಲಾತಿಯನ್ನು ಪ್ರೋತ್ಸಾಹಿಸುವುದು ಹಾಗೂ ಮತದಾನವನ್ನು ಗರಿಷ್ಠಗೊಳಿಸುವುದಾಗಿದೆ ಹಾಗೆಯೇ ವಿಶೇಷವಾಗಿ ಹೊಸ ಮತದಾರರನ್ನು ಪ್ರೋತ್ಸಾಹಿಸಿ ಪ್ರಜಾಪ್ರಭುತ್ವದ ಹಬ್ಬ "ಚುನಾವಣೆ"ಯಲ್ಲಿ ನಿಭರ್ಿತರಾಗಿ ಮತದಾನವನ್ನು ಮಾಡಲು ಜಾಗೃತಗೊಳಿಸುವುದಾಗಿದೆ ಎಂದು ಹೇಳಿದರು.
ಈ ದಿನವನ್ನು ದೇಶದ ಮತದಾರರಿಗೆ ಸಮಪರ್ಿಸಲಾಗಿದೆ ಎಂದು ಹೇಳಿ ಜವಾಬ್ದಾರಿ ನಾಗರಿಕರಾದ ನಾವುಗಳು ಈ ದಿನದ ಉದ್ದೇಶಗಳನ್ನು ಸಾಕಾರಗೊಳಿಸಲು ಒಂದು ದಿಟ್ಟ ಹೆಜ್ಜೆ ಇಡೋಣ ಎಂದು ಹೇಳಿದರು. ನಂತರ ಮತದಾರರ ಪ್ರತಿಜ್ಞೆ ವಿಧಿಯನ್ನು ಬೋಧಿಸಿದರು. ಚುನಾವಣಾ ಸಾಕ್ಷರತಾ ಸಂಘದ ಸಂಯೋಜಕ ಪ್ರೊ. ಅನಿಲ್ ಪೋಲ್ ಸ್ವಾಗತಿಸಿದರು, ಈ ಸಂದರ್ಭದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ. ಸತೀಶ್ ಅಣ್ಣಿಗೇರಿ, ವಿತಾವಿ, ವಿತಾವಿ ಯ ಸ್ಥಾನಿಕ ಅಭಿಯಂತರ ಹೇಮಂತ್ ಕುಮಾರ್, ಎಲ್ಲ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿಗಳು ಹಾಜರಿದ್ದರು.