ಕಡಬಿ 02: ಪ್ರತಿಯೊಬ್ಬರು ತಪ್ಪದೇ ಮತ ಚಲಾಯಿಸಬೇಕು. ದೇಶದ ಅಳಿವು ಉಳಿವಿನ ಪ್ರಶ್ನೆ ಎಲ್ಲರ ಒಂದು ಮತದಲ್ಲಿರುತ್ತದೆ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುವರ್ಣಗೌರಿ ಕೊಣ್ಣೂರ ಹೇಳಿದರು.
ಅವರು ಶನಿವಾರ ದಿ2ರಂದು ಸ್ಥಳೀಯ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ರಾಷ್ಟ್ರೀಯ ಮತಧಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಲಿ ಎಂಬ ಮಹದಾಸೆಯಿಂದ ಭಾರತ ಚುನಾವಣಾ ಆಯೋಗವು ಜಾಗೃತಿ ಮೂಡಿಸುತ್ತಿದೆ. ಭಾರತದ ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೆ ಮತದಾನದ ಮೂಲಭೂತ ಹಕ್ಕು ನೀಡಿದೆ. ರಾಷ್ಟ್ರದ ಪ್ರಗತಿಗಾಗಿ ಎಲ್ಲರೂ ಕಡ್ಡಾಯವಾಗಿ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಉತ್ತಮ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕೆಂದರು.
ನಂತರ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಕರಪತ್ರ ವಿತರಿಸಿ ಮತ ಚಲಾಯಿಸವಂತೆ ಮತದಾರರಿಗೆ ಅರಿವು ಮೂಡಿಸಿದರು. ಮತಗಟ್ಟೆ ಅಧಿಕಾರಿಗಳಾದ ಬಿ ಎಸ್ ಗಾಣಗಿ, ಎಮ್ ಆಯ್ ಚೆನ್ನಿನಾಯ್ಕರ, ಸಿ ಎಮ್ ಹೊಸುರ, ಎನ್ ಬಿ ದಾಸ್ತಿಕೊಪ್ಪ, ಎಸ್ ಜಿ ಸಂಗೋಳಿ, ಆಶಾ ಕಾರ್ಯಕತರ್ೆಯರಾದ ಎಲ್. ಎಮ್. ಮಾಳಕ್ಕನವರ, ಜಿ. ಆರ್. ಮುಕ್ಕನವರ, ಆರ್. ಸಿ. ಪಾಟೀಲ, ಅಂಗನವಾಡಿ ಕಾರ್ಯಕತರ್ೆಯರಾದ ವಿ. ಎಸ್. ಪಾಟೀಲ, ಎಸ್. ಆರ್. ಮೂಡಲಗಿ, ಎಮ್. ವಾಯ್. ಗೋಪಾಳಿ, ಎನ್. ಎ. ಸನದಿ, ಎಸ್. ಎಮ್. ಆಯಟ್ಟಿ ಕಾರ್ಯದಶರ್ಿ ಪ್ರಕಾಶ ಪಾಟೀಲ, ಮುಂತಾದವರು ಉಪಸ್ಥಿತರಿದ್ದರು.