ಹುಬ್ಬಳ್ಳಿಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Voluntary blood donation camp in Hubballi

ಹುಬ್ಬಳ್ಳಿಯಲ್ಲಿ  ಸ್ವಯಂ ಪ್ರೇರಿತ ರಕ್ತದಾನ ಶಿಬಿರ 

  ಹುಬ್ಬಳ್ಳಿ 06:ದಿನಾಂಕ:06 ರಂದು ಹೊಸೂರ ಪ್ರಾದೇಶಿಕ ಬಸ್ ನಿಲ್ದಾಣ, ಹುಬ್ಬಳ್ಳಿಯಲ್ಲಿ ಕರ್ನಾಟಕ ವೈದ್ಯಕೀಯ ಮಾಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಹುಬ್ಬಳ್ಳಿ ರವರ ಸಹಯೋಗದೊಂದಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ್ಘ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ   ಡಾ. ಎಸ್‌.ಎಫ್‌.ಕಮ್ಮಾರ ನೆರವೇರಿಸಿ ಮಾತನಾಡಿ ವಾ.ಕ.ರ.ಸಾ.ಸಂಸ್ಥೆಯಿಂದ ಕೆ.ಎಮ್‌.ಸಿ.ಆರ್‌.ಆಯ್ ಆಸ್ಪತ್ರೆಗೆ ರಕ್ತದಾನ ಮಾಡಲು ಮುಂದೆ ಬಂದಿರುವುದು ಸಂತೋಷದ ವಿಷಯ, ರಕ್ತದಾನ ಮಾಡುವುದು ಒಂದು ಸರ್ವ ಶ್ರೇಷ್ಠವಾದ ಕಾರ್ಯವಾಗಿದೆ. ರಕ್ತದಾನ ಮಾಡುವದರಿಂದ ನಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ರಕ್ತದಾನದಿಂದ ಒಂದು ಜೀವನವನ್ನು ಉಳಿಸಲು ಸಾಧ್ಯವಿದೆ. ರಕ್ತ ಕೊಡುವದರಿಂದ ಯಾವುದೇ ತೊಂದರೆ ಆಗುವದಿಲ್ಲವೆಂದು ರಕ್ತದಾನದ ಕುರಿತು ಸವಿಸ್ತಾರವಾಗಿ ತಿಳಿಸಿದರು.  ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗಾ ಎಂ, ಭಾ.ಆ.ಸೇ ರವರು ಮಾತನಾಡಿ ರಕ್ತದಾನದ ಮೂಲಕ ನಿಮ್ಮ ಆರೋಗ್ಯವನ್ನು ನೀವು ಚೆನ್ನಾಗಿ ಇಟ್ಟುಕೊಳ್ಳಲು ಸಹಕಾರಿಯಾಗಿದೆ. ಆಧುನಿಕ ಜೀವನದಲ್ಲಿ ಎಷ್ಟೇ ತಂತ್ರಜ್ಞಾನ ಮುಂದುವರೆದಿದ್ದರೂ ಸಹ ರಕ್ತವನ್ನು ತಯಾರಿಸಲು ಸಾಧ್ಯವಾಗಿಲ್ಲ. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ರಕ್ತದಾನ ಮಾಡಿದಾಗ ಮಾತ್ರ ಒಂದು ಜೀವ ಉಳಿಸಿಕೊಳ್ಳಲು ಸಾಧ್ಯ, ಕೆಲವೊಂದು ರಕ್ತದ ಗುಂಪು ಸಿಗುವುದೇ ಅಪರೂಪ, ಆದುದರಿಂದ ಸಂಸ್ಥೆಯ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವಂತೆ ತಿಳಿಸಿದರು.  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಅನಿಲಕುಮಾರ, ರಕ್ತ ಭಂಡಾರ ಅಧಿಕಾರಿಗಳು, ಕೆ.ಎಮ್‌.ಸಿ.ಆರ್‌.ಐ ರವರು ಮಾತನಾಡಿ ರಕ್ತದಾನ ಮಾಡುವುದು ಪುಣ್ಯದ ಕಾರ್ಯವಾಗಿದೆ. ರಕ್ತ ನೀಡುವದರಿಂದ ಅಶಕ್ತರಾಗುತಾರೆ ಎಂಬ ತಪ್ಪು ಕಲ್ಪನೆಯಿದೆ. ಪದೇ ಪದೇ ರಕ್ತದಾನ ಮಾಡುವವರಿಗೆ ಹೃದಯಾಘಾತ ಸಂಭವಿಸುವದಿಲ್ಲ ಮತ್ತು ಮೂರು ವಾರಗಳಲ್ಲಿ ಹೊಸ ರಕ್ತ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಪ್ರತಿ ಮೂರು ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು. ಇದೊಂದು ಸಾಮಾಜಿಕ ಜವಾಬ್ದಾರಿ ಕೂಡ ಆಗಿದೆ ಎಂದು ರಕ್ತದಾನದ ಮಹತ್ವದ ಕುರಿತು ತಿಳಿಸಿದರು.   ಇದೇ ಸಂದರ್ಭದಲ್ಲಿ ಸಂಸ್ಥೆಯ 116 ಸಿಬ್ಬಂದಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು. ಮತ್ತು 10 ಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿದ ಸಂಸ್ಥೆಯ 11 ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಸಂಸ್ಥೆಯ ಇಲಾಖಾ ಮುಖ್ಯಸ್ಥರಾದ ವಿವೇಕಾನಂದ ವಿಶ್ವಜ್ಞ, ಪಿ.ವೈ.ನಾಯಕ ಅಧಿಕಾರಿಗಳಾದ ಪಿ.ವೈ.ಗಡೇದ, ಕೆ.ಎಲ್‌.ಗುಡೆನ್ನವರ, ಸಂತೋಷ ಕಮತ್, ರವಿ ಅಂಚಗಾವಿ, ಪಿ.ಆರಿ​‍್ಕರಣಗಿ, ಸುನೀಲ ವಾಡೇಕರ, ನವೀನಕುಮಾರ ತಿಪ್ಪಾ, ದಯಾನಂದ ಪಾಟೀಲ ಸಂಸ್ಥೆಯ ಗೌರವ ವೈದ್ಯಾಧಿಕಾರಿಗಳಾದ ಡಾ.ರಾಯಜಿ, ಕಾರ್ಮಿಕ ಮುಖಂಡರಾದ ಆರ್‌.ಎಫ್‌.ಕವಳಿಕಾಯಿ, ಸಂಸ್ಥೆಯ 09 ವಿಭಾಗಗಳ ಕಾರ್ಮಿಕ ್ಘ ಕಲ್ಯಾಣಾಧಿಕಾರಿಗಳು ಹಾಗೂ ಸಂಸ್ಥೆಯ ಇನ್ನಿತರ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು. ಎಸ್‌.ಬಿ.ಆಯ್‌. ಬ್ಯಾಂಕ್ ನವರು ರಕ್ತದಾನಿಗಳಿಗೆ ಜ್ಯೂಸ್, ಸೇಬು ಹಣ್ಣು ಹಾಗೂ ನೀರಿನ ಬಾಟಲ್ ನ ಪ್ರಾಯೋಜನೆ ಮಾಡಿದರು.  ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿಗಳಾದ ಪಿ.ವೈ.ನಾಯಕ.ರವರು ಕಾರ್ಯಕ್ರಮ ಸ್ವಾಗತಿಸಿದರು. ಸುನೀಲ ಪತ್ರಿ ರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.