ವಾಲಿಬಾಲ್ ಪಂದ್ಯಾವಳಿ: ಆರ್ ಟಿ ಎಸ್ ಕಾಲೇಜು ಪ್ರಥಮ
ರಾಣೇಬೆನ್ನೂರು 16: ನಗರ ಹೂರ ವಲಯದ ಆರ್ ಟಿ ಇ ಎಸ್ ಮಹಾವಿದ್ಯಾಲಯದ ಆವರಣದಲ್ಲಿ ಇತ್ತೀಚೆಗೆ ಹಾವೇರಿ ವಿಶ್ವವಿದ್ಯಾಲಯದ ಪುರುಷರ ಹಾಗೂ ಮಹಿಳೆಯರ ಅಂತರ ವಾಲಿಬಾಲ್ ಪಂದ್ಯಾವಳಿ ನಡೆಯಿತು.
ಪಂದ್ಯಾವಳಿಯಲ್ಲಿ ಸಾಧನೆ ಮೆರೆದ ಕಾಲೇಜಿನ ವಿದ್ಯಾರ್ಥಿಗಳಿಗೆ, ಶುಭ ಹಾರೈಸಿದ ಆರ್. ಟಿ.ಇ. ಎಸ್. ಅಧ್ಯಕ್ಷ ಸುಭಾಸ ಸಾಹುಕಾರ್ ಅವರು,ಮಾನಸಿಕ, ದೈಹಿಕ, ಮತ್ತು ಬೌದ್ಧಿಕ ಬೆಳವಣಿಗೆಗೆ ಕ್ರೀಡೆಗಳು ತುಂಬಾ ಸಹಕಾರಿಯಾಗಿದೆ. ಯುವಕರು ನೆಲ ಮೂಲದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ, ಆರೋಗ್ಯವಂತ ಜೀವನ ಸಾಗಿಸಲು ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸ್ಪರ್ಧಾತ್ಮಕವಾಗಿ ನಡೆದ ಪಂದ್ಯಾವಳಿಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು, ಗೌರವ ಕೀರ್ತಿ ಬಾಜನರಾದರು. ಪ್ರಾಚಾರ್ಯ,ಸಿ. ಎ.ಹರಿಹರ ಅವರು ಅಭಿನಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.