ವ್ಹಾಲಿಬಾಲ್: ಕೀರ್ತಿ ಹಜೇರಿ ಯೂನಿವರ್ಸಿಟಿ ಬ್ಲೂ
ತಾಳಿಕೋಟಿ 19: ಪಟ್ಟಣದ ಎಸ್. ಎಸ್. ವಿದ್ಯಾ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಎಚ್.ಎಸ್. ಪಾಟೀಲ್ ಮಹಿಳಾ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕೀರ್ತಿ ಲಕ್ಷ್ಮಣ ಹಜೇರಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಅಕ್ಕ ಮಹಾದೇವಿ ಕಲಾ ವಿಜ್ಞಾನ ಹಾಗೂ ವಾಣಿಜ್ಯ ವಿದ್ಯಾಲಯ ಬಾಗಲಕೋಟ ಇವರ ಸಯುಕ್ತ ಆಶ್ರಯದಲ್ಲಿ ಜರುಗಿದ ವಾಲಿಬಾಲ್ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿ ಅಂತರ ವಿಶ್ವವಿದ್ಯಾಲಯದಲ್ಲಿ ಚೆನ್ನೈಗೆ ಆಯ್ಕೆಯಾಗಿದ್ದಾಳೆ.
ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಎಚ್.ಎಸ್. ಪಾಟೀಲ, ಕಾರ್ಯದರ್ಶಿ ಸಚಿನ ಎಚ್ ಪಾಟೀಲ, ಆಡಳಿತಾಧಿಕಾರಿ ಕಿರಣ ಎಚ್. ಪಾಟೀಲ, ಸದಸ್ಯ ರವಿ ಬಿ.ಪಾಟೀಲ, ಪ್ರಾಚಾರ್ಯ ಡಾ. ಎಚ್.ಬಿ. ನಡುವಿನಕೇರಿ, ಉಪನ್ಯಾಸಕರುಗಳಾದ ಗಾಯತ್ರಿ ಪತ್ತಾರ, ಸುರೇಶ ಪಾಟೀಲ, ಆರ್.ಆರ್ ಬಡಗಣ, ಪಿ.ಎಮ್.ಚಲವಾದಿ, ವಾಣಿಶ್ರೀ ಬೀಳಗಿ, ಸಂಸ್ಥೆಯ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.