ವೊಕೇಷನಲ್ ಸರ್ವಿಸ್ ಅವಾರ್ಡ
ಕಾರವಾರ, 06 : ಕಾರವಾರ ರೋಟರಿ ಕ್ಲಬ್ ವತಿಯಿಂದ ಸಮಾಜದಲ್ಲಿ ತಮ್ಮ ವೃತ್ತಿಜೀವನದಲ್ಲಿ ಸಮಾಜಸೇವೆ ಮಾಡಿದಂತಹ ಗಣ್ಯ ವ್ಯಕ್ತಿಗಳನ್ನು ಗುರುತಿಸಿ ರೋಟರಿ ವೊಕೇಷನಲ್ ಸರ್ವಿಸ್ ಅವಾರ್ಡ ಗಳನ್ನು ತಮ್ಮ ಕ್ಲಬ್‌ನ ಸಂಸ್ಥಾಪನಾ ದಿನದಂದು ಪ್ರದಾನಮಾಡಲಾಯಿತು.
ಕ್ಲಬ್‌ನ ರೋಟರಿ ಶತಾಬ್ಧಿ ಭವನದಲ್ಲಿ ಈಚೆಗೆ ಆಚರಿಸಲಾದ ಸಂಸ್ಥಾಪನಾ ದಿನದಂದು ಸಮಾಜದ ನಾಲ್ಕು ಗಣ್ಯವ್ಯಕ್ತಿಗಳನ್ನು ರೊಟರಿ ಪ್ರಾಂತಪಾಲ ರೊ. ಶರದ ಪೈ ಅವರ ವಿಶೇಷ ಪ್ರತಿನಿಧಿ ಗೋವಾ ಪಣಜಿ ಕ್ಲಬ್‌ನ ರೊ. ಸನತ್ ಪಿಲಗಾಂವಕರ ಸನ್ಮಾನಿಸಿದರು. ಗಣೇಶ ನೆರ್ವೆಕರ (ಕೃಷಿ ಕ್ಷೇತ್ರ), ವೈಶಾಲಿ ಮಾಂಜ್ರೇಕರ (ಸಂಗೀತ), ನಿರ್ಮಲಾ ಆಲ್ಫಾನ್ಸೊ (ಪ್ರಾಣಿ ಪ್ರೇಮಿ), ಹಾಗೂ ಶುಭಾಂಗಿ ಶಿರೋಡಕರ್ (ವ್ರತ್ತಿಪರ ಶಿಕ್ಷಣ).ವಿಷೇಶ ಪ್ರತಿನಿಧಿ ರೊ. ಸನತ್ ಪಿಲಗಾಂವಕರ್ ಸನ್ಮಾನಿಸಿದ ಬಳಿಕ ಮಾತನಾಡಿ, ಕಾರವಾರ ರೋಟರಿ ಕ್ಲಬ್ ಮಾಡಿದಂತಹ ಕಾರ್ಯಗಳನ್ನು ಪ್ರಶಂಸಿಸಿದರು ಹಾಗೂ ಇಂತಹ ಸಮಾಜಮೂಖಿ ಸೇವೆ ಕ್ಲಬ್ ಮುಖಾಂತರ ಜರುಗಲಿ ಎಂದು ಹಾರೈಸಿದರು.
ಕಾರವಾರ ರೋಟರಿ ಕ್ಲಬ್ ಅಧ್ಯಕ್ಷ ಎಮ್. ಪಿ. ಕಾಮತ ಮಾತನಾಡಿ, ನಮ್ಮ ಸಂಸ್ಥೆ ಸಮಾಜದ ಹಲವಾರು ಕ್ಷೇತ್ರದಲ್ಲಿ ಸೇವೆಯನ್ನು ಮಾಡುವ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನ ಮಾಡುವ ಮುಖಾಂತರ ಅವರನ್ನು ಪ್ರೋತ್ಸಾಹಿಸಿ ಇತರರಿಗೆ ಮಾದರಿ ಆಗುವ ಉದ್ದೇಶ ಹೊಂದಿದೆ ಎಂದರು.ರೋಟರಿ ಸಹಾಯಕ ಪ್ರಂತಪಾಲ, ಹೊನ್ನಾವರ ರೋಟರಿ ಕ್ಲಬ್‌ನ ರೊ. ಮನವೆಲ್ ಸ್ಟೀಫನ್ ರೊಡ್ರಗೀಸ್ ಮಾತನಾಡಿ ಕಾರವಾರ ಕ್ಲಬ್‌ಗೆ ಸಂಸ್ಥಾಪನಾ ದಿನದ ಶುಭ ಕೋರಿದರು.ಕಾರ್ಯದರ್ಶಿ ಆನಂದ ನಾಯ್ಕ ಅಭಿನಂದಿಸಿದರು. ರೊ. ಶೈಲೇಶ ಹಳ್ದಿಪುರ್ ಹಾಗೂ ಫ್ರಾನ್ಸಿಸ್ ಫನಾಂರ್ಡಿಸ್ ಕಾರ್ಯಕ್ರಮ ನಿರೂಪಿಸಿದರು. ಕ್ಲಬ್‌ನ ಸರ್ವಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು