ಭಾರತದ ಅಭಿವೃದ್ಧಿಗೆ ಬಡವರಿಗೆ ಅನ್ನ, ಶಿಕ್ಷಣ ಹರಡಬೇಕು ಎಂದ ವಿವೇಕಾನಂದರು - ಬಸವರಾಜ ಎಸ್‌

Vivekananda said that for the development of India, food and education should be spread to the poor

ಭಾರತದ ಅಭಿವೃದ್ಧಿಗೆ ಬಡವರಿಗೆ ಅನ್ನ, ಶಿಕ್ಷಣ ಹರಡಬೇಕು ಎಂದ ವಿವೇಕಾನಂದರು - ಬಸವರಾಜ ಎಸ್‌

ಹಾವೇರಿ 12: ಭಾರತ ದೇಶ ಉತ್ತುಂಗಕ್ಕೆ ಏರಬೇಕಾದರೆ ಬಡವರಿಗೆ ಅನ್ನವನ್ನು ಉಣಿಸಬೇಕು ಶಿಕ್ಷಣವನ್ನು ಹರಡಬೇಕು, ಪೂಜಾರಿ ಪೌರೋಹಿತ್ಯವನ್ನು ನಿರ್ಮೂಲನೆ ಮಾಡಬೇಕು. ಮಾನವೀಯತೆ ಇಲ್ಲದ ಧರ್ಮವನ್ನು ವಿರೋಧಿಸಿದವರು ಸ್ವಾಮಿ ವಿವೇಕಾನಂದರು, ಹಸಿದ ಹೊಟ್ಟೆಗೆ ಅನ್ನ ನೀಡದ, ವಿಧವೆಯ ಕಣ್ಣಿರು ಒರೆಸದ, ಯಾವುದೆ ದೇವರು, ಧರ್ಮದಲ್ಲೂ ನನಗೆ ನಂಬಿಕೆಯಿಲ್ಲ ಎಂದ ವಿವೇಕಾನಂದರು ಮಾತುಗಳು ನಿಜವಾಗಿದೆ ಎಂದು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿದರು.ನಗರದ ಹೊರವಲಯದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ನಂ2 ಹಾಸ್ಟೆಲ್ ನಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಹಾಸ್ಟೆಲ್ ಘಟಕ ಆಯೋಜಿಸಿದ ಯುವಜನರ ಸ್ಪೂರ್ತಿ, ಮಹಾ ಮಾನವತಾವಾದಿ ಸ್ವಾಮಿ ವಿವೇಕಾನಂದರ ಜನ್ಮ ದಿನ ಹಾಗೂ ಯುವಜನ ದಿನಾಚರಣೆಯನ್ನು ವಿವೇಕಾನಂದರ ಭಾವಚಿತ್ರಕ್ಕೆ ಪುಷ​‍್ಾರೆ್ಪಣ ಗೌರವ ಸಲ್ಲಿಸಿ ಮಾತನಾಡಿದ ಅವರು ಮಾನವೀಯತೆಯನ್ನು ಮರೆತ ಧರ್ಮಗಳು ಸಂಘರ್ಷಕ್ಕ ದಾರಿ ಮಾಡಿಕೊಡುತ್ತಿವೆ ಎಂದರು. 

ಚಿಕ್ಯಾಗೋ ಸಮ್ಮೇಳನದಲ್ಲಿ ಸಹೋದರ-ಸಹೋದರಿಯರೆ ಎನ್ನುವ ಮೂಲಕ ಇಡೀ ಭಾರತ ದೇಶದ ಬೌದ್ಧಿಕ ಶ್ರೀಮಂತಿಕೆ ತೆರೆದಿಟ್ಟ ವಿವೇಕಾನಂದರನ್ನು ವಿದ್ಯಾರ್ಥಿ-ಯುವಜನರು ಆದರ್ಶವಾಗಿ ಅವರ ವಿಚಾರಗಳನ್ನು ಅಭ್ಯಾಸ ಮಾಡಬೇಕು, ಕುವೆಂಪು ವಿವೇಕಾನಂದರ ವಿಚಾರ ಧಾರೆಗಳು ಒಂದೇ ಆಗಿದವು. ವಿವೇಕಾನಂದರ ಹೆಸರಲ್ಲಿಯೂ ಇವತ್ತು ಕೋಮು ಗಲಭೆಗಳು, ಧರ್ಮ ಧರ್ಮಗಳ ಮಧ್ಯೆ ಜಾತಿಯ ಹೆಸರಲ್ಲಿ  ಸಮಾಜದಲ್ಲಿ ಅಲ್ಲೂಲ ಕಲ್ಲೋಲ ಉಂಟು ಮಾಡಲು ಮೂಲಭೂತವಾದಿಗಳು ಹೊರಟಿದ್ದಾರೆ,  ಮೂಲಭೂತವಾದಿಗಳು ವಿವೇಕಾನಂದರನ್ನು ಕೇವಲ ಧರ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿರುವುದು ವಿಷಾದನೀಯ ಎಂದರು. ಹಾಗಾಗಿ ಇಂದಿನ ಯುವಜನತೆ ವಿವೇಕಾನಂದರ ನಿಜ ಇತಿಹಾಸವನ್ನು ಓದುವ ಮೂಲಕ ಮೂಲಭೂತವಾದಿಗಳಿಂದ ಬಿಡಿಸಬೇಕಿದೆ. ಸೌಹಾರ್ದತೆಯನ್ನು ಕಾಪಾಡಬೇಕಿದೆ ಎಂದರು.  ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷ ಮುತ್ತುರಾಜ್ ದೊಡ್ಡಮನಿ, ತಾಲ್ಲೂಕು ಅಧ್ಯಕ್ಷ ಸುಲೆಮಾನ್ ಮತ್ತಿಹಳ್ಳಿ, ಹಾಸ್ಟೆಲ್ ಘಟಕ ಅಧ್ಯಕ್ಷ ಪ್ರಜ್ವಲ್ ಹರಿಜನ, ಮುಖಂಡರಾದ ವಿರೂಪಾಕ್ಷ ಕೆ, ಧನುಷ್ ದೊಡ್ಡಮನಿ, ತೇಜಸ್ ಎನ್ ಡಿ, ಮನು ಕೆ, ಅಜೇಯ ಎಚ್, ಸಂಜೀವ್ ಪಾಟೀಲ್, ಪ್ರಕಾಶ್ ಕೆ ಆರ್, ನಾಗರಾಜ ಎಲ್, ನವೀನ ಲಮಾಣಿ, ವಿನಾಯಕ ಅಸುಂಡಿ, ರಘು ಎಲ್, ಪುನೀತ್ ಲಮಾಣಿ ಸಿಬ್ಬಂದಿಗಳಾದ ವೆಂಕಟೇಶ ಕೊರಗರ, ರವಿ ಹಾವೇರಿ, ಫಕೀರ​‍್ಪ ಭಜಂತ್ರಿ ಉಪಸ್ಥಿತರಿದ್ದರು.