ತಹಶೀಲ್ದಾರ್ ದಿಢೀರ ಎಂ.ಪಿ.ನಗರ ಶಾಲೆಗೆ ಭೇಟಿ

ಲೋಕದರ್ಶನ ವರದಿ

ಹೂವಿನಹಡಗಲಿ 19: ಪಟ್ಟಣದ ಎಂ.ಪಿ.ಪ್ರಕಾಶ್ ನಗರದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು.

ಬೆಳಿಗ್ಗೆ 11ಗಂಟೆಗೆ ತಹಶೀಲ್ದಾರ್ ಕೆ.ರಾಘವೇಂದ್ರರಾವ್ ದಿಢೀರ ಸಕರ್ಾರಿ ಶಾಲೆಗೆ ಭೇಟಿ ನೀಡಿ ಮಧ್ಯಾಹ್ನ ಊಟದ ಕೋಣೆಯಲ್ಲಿ ಅಡುಗೆ ಮಾಡುವವರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು.ಶುದ್ದವಾದ ತರಕಾರಿಯನ್ನು ಬಳಕೆ ಮಾಡಬೇಕು.ಸ್ವಚ್ಛತೆಯನ್ನು ಕಾಪಾಡಿರಿ ಎಂದ ಅವರು ಅಲ್ಲಿನ ಹಾಜರಿ ಪುಸ್ತಕ,ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮಕ್ಕಳ ಬಳಕೆ ಮಾಡದ ಶೌಚಾಲಯ ದುನರ್ಾತವನ್ನು ನೋಡಿ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಶೌಚಾಲಯವನ್ನು ಸ್ವಚ್ಛತೆ ಮಾಡಿರಿ ಜತಗೆ ಮಕ್ಕಳು ಬಳಕೆಗೆ ಅನುಕೂಲಮಾಡಿ ಕೊಡಿ ಎಂದರು. ಬಿಸಿಯೂಟದ ಕೋಣೆಯಲ್ಲಿ ತರಕಾರಿ, ಬಿಸಿಯೂಟವನ್ನು ಪರಿಶೀಲನೆ ಮಾಡಿದರು.ಜತೆಗೆ ಊಟದ ವ್ಯವಸ್ಥೆಯ ಬಗ್ಗೆ ಮಕ್ಕಳನ್ನು ವಿಚಾರಿಸಿದರು.ಶಿಕ್ಷಕಿ ಸವಿತಾ ಶಾಲೆಯ ಹಿಂಬಾಗದಲ್ಲಿ ಗಿಡ ಗಂಟೆಗಳು ಬೆಳೆದು ನಿಂತಿದ್ದು ಅಲ್ಲಿನ ದುನರ್ಾತ ನಮ್ಮಗೆ ಬರುತ್ತದೆ ಪುರಸಭೆಯಿಂದ ಸ್ವಚ್ಛತೆ ಮಾಡಿಕೊಡಬೇಕೆಂದು ತಹಶೀಲ್ದಾರರಿಗೆ ಮನವಿ ಮಾಡಿದರು.ಅದಕ್ಕೆ ಸ್ಪಂದಿಸಿ ದೂರವಾಣಿ ಮೂಲಕ ಪುರಸಭೆ ಆರೋಗ್ಯ ನಿರೀಕ್ಷಕ ಶ್ರೀನಿವಾಸವರಿಗೆ ಸ್ವಚ್ಛತೆ ಮಾಡಿಕೊಡಬೇಕೆಂದು ಸ್ಥಳದಲ್ಲೇ ಸೂಚಿಸಿದರು. 

ಅಂಗನವಾಡಿಗೆ ಭೇಟಿ : ಎಂ.ಪಿ.ಪ್ರಕಾಶ್ ನಗರದ ಅಂಗನವಾಡಿ ಶಾಲೆಗೆ ದಿಡೀರ ಭೇಟಿ ನೀಡಿದ ತಹಶಿಲ್ದಾರ್ ಕೆ.ರಾಘವೇಂದ್ರ ರಾವ್ ಅವರು ಕೇಂದ್ರದಲ್ಲಿ ಯಾರು ಇಲ್ಲದೇ ಇದ್ದಾಗ ಅಂಗನವಾಡಿ ಟೀಚರ್ಗೆ ಪೋನ್ ಮಾಡಿ ತರಾಟೆಗೆ ತೆಗೆದುಕೊಂಡರು.

ಅಂಗನವಾಡಿ ಕೇಂದ್ರದಿಂದ ನೀಡುವ ಗಭರ್ಿಣಿಯರು,ಬಾಣಂತಿಯರಿಗೆ ಮಧ್ಯಾಹ್ನ ಕೊಡುವ ಆಹಾರವನ್ನು ತಯಾರಿಸಿ ತೆರೆದು ಹೋಗಿದ್ದರಿಂದ ಅಂಗನವಾಡಿ ಸಹಾಯಕಿಯನ್ನು ತರಾಟೆಗೆ ತೆಗೆದುಕೊಂಡರು.ಇನ್ನು ಮುಂದೆ ಈರೀತಿ ಆಗದಂತೆ ನೋಡಿ ಕೊಳ್ಳಿ ಎಂದರು.ಕೇಂದ್ರದಲ್ಲಿ ಒಬ್ಬರು ಇದ್ದು ಮಕ್ಕಳನ್ನು ನೋಡಿಕೊಳ್ಳಬೇಕು ಎಂದರು.ಹಾಜರಿ ಪುಸ್ತಕವನ್ನು ಪರಿಶೀಲಿಸಿದ ಅವರು ಟೀಚರ್ ನಿರ್ಲಕ್ಷ್ಯತನದ ಬಗ್ಗೆ ಕಿಡಿಕಾರಿದ ಅವರು ಅವರ ಮೇಲೆ ಸೂಕ್ತ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಸೂಚಿಸಲಾಯಿತು.

ಅಂಗನವಾಡಿ ಮೇಲ್ವಿಚಾರಕಿ ಹನುಮಕ್ಕ ಬುಧವಾರ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿ ಸ್ವಚ್ಛತೆ ಕಾಪಾಡಬೇಕು ಜತೆಗೆ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಹಾಲು, ಊಟವನ್ನು ಕೊಡಬೇಕು ಜತೆಗೆ ಪ್ರತಿದಿನ ಬೆ.9.30ಕ್ಕೆ ಕೇಂದ್ರದಲ್ಲಿ ಇದ್ದು, ಮಕ್ಕಳ ಪಾಲನೆ ಮಾಡಬೇಕು ,ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ಸಮರ್ಪಕವಾಗಿ ವಿತರಿಸಬೇಕು ಇಲ್ಲದಿದ್ದರೇ ನಿಮ್ಮ ಮೇಲೆ ಸೂಕ್ತ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಎಚ್ಚರಿಸಿದರು.