ಜಿಲ್ಲಾಧಿಕಾರಿಗಳಿಂದ ಗ್ರಾಮ ಒನ್ 3ನೇ ವರ್ಷದ ವಾರ್ಷಿಕೋತ್ಸವ ಹಾಗೂ ಐಪಿಪಿಬಿ ಸೇವೆಗಳ ಉದ್ಘಾಟನೆ
ಹಾವೇರಿ 08: ಗ್ರಾಮ ಒನ್ ಯೋಜನೆಯು ಜನವರಿ 2022 ರಂದು ಪ್ರಾರಂಭಗೊಂಡು ಇಂದಿಗೆ ಮೂರು ವರ್ಷಗಳನ್ನು ಪೂರೈಸಿದ್ದು ನಾಗರಿಕ ಸೇವಾ ವಿತರಣೆಯಲ್ಲಿ ಹಾಗೂ ಸಾರ್ವಜನಿಕರಿಗೆ ಸೇವೆಗಳನ್ನು ಒದಗಿಸುವುದರಲ್ಲಿ ಮಹತ್ವಪೂರ್ಣವಹಿಸಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಾರ್ಯಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ರಾಮ ಒನ್ 3 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಐ ಪಿ ಪಿ ಬಿ ಸೇವೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದಅವರು, ಜಿಲ್ಲೆಯ ಗ್ರಾಮ ಒನ್ ಕೇಂದ್ರಗಳು ಕಳೆದ ಮೂರು ವರ್ಷದ ಅವಧಿಯಲ್ಲಿ ಸರಕಾರದ ವಿವಿಧ ಇಲಾಖೆಯ ಸೇವೆಗಳನ್ನು ನೀಡುತ್ತಾ ಬಂದಿದೆ, ಇದರಲ್ಲಿ 80 ಇಲಾಖೆಗಳಿಂದ 874 ಸೇವೆಗಳನ್ನು ಒಳಗೊಂಡಿರುತ್ತದೆ. ಮೂರು ವರ್ಷದ ಅವಧಿಯಲ್ಲಿ ಒಟ್ಟು 22,58,501 ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಿದೆ ಎಂದರು.
ಗ್ರಾಮ ಒನ್ ಕೇಂದ್ರಗಳು ಸಾರ್ವಜನಿಕರಿಗೆ ಅತ್ಯಂತ ಸ್ನೇಹಮಹಿಯಾವಗಿದ್ದು ಗ್ರಾಮೀಣ ಭಾಗದ ಕಟ್ಟ ಕಡೆಯ ನಾಗರಿಕರಿಗೂ ಕೂಡ ಸರಕಾರದ ಸೇವೆಗಳನ್ನು ಸ್ಥಳೀಯವಾಗಿ ಒದಗಿಸುವುದರಲ್ಲಿ ಹಾಗೂ ಮನೆ ಮನೆ ಬಾಗಿಲಿಗೆ ತೆರಳಿ ಸೇವೆಗಳನ್ನು ನೀಡುವ ಮೂಲಕ ಸಾರ್ವಜನಿಕರಿಗೆ ಸರಕಾರದ ಎಲ್ಲ ಸೇವೆಗಳನ್ನು ಒದಗಿಸುತ್ತಿದ್ದೆ. ಇದರಿದ ಸಾರ್ವಜನಿಕರ ಸಮಯ ಹಾಗೂ ಮಧ್ಯವರ್ತಿಗಳ ಹಾವಳಿಯಿಲ್ಲದೆ ಕಾಲಮಿತಿಯೊಳಗೆ ಸೇವೆಗಳನ್ನು ಒದಗಿಸುತ್ತಿದೆ. 2022-23 ನೇ ಸಾಲಿನಲ್ಲಿ ಜಿಲ್ಲೆಯ ಗ್ರಾಮ ಒನ್ ಕೇಂದ್ರಗಳು ಸತತವಾಗಿ 8 ತಿಂಗಳಗಳ ಕಾಲ ನಾಗರಿಕ ಸೇವೆಗಳನ್ನು ಒದಗಿಸಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿರುವುದು ಗಮನರ್ಹವಾಗಿದೆ ಎಂದರು.
ಗ್ರಾಮ ಒನ್ ಕೇಂದ್ರಗಳು ಸಾರ್ವಜನಿಕರಿಗೆ ಒದಗಿಸುತ್ತಿರುವ ಅತ್ಯಂತ ಪ್ರಮುಖ ಸೇವೆಗಳಾದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (ಬೆಳೆ ವಿಮೆ), ಫ್ರೂಟ್ (ಈಖಗಋಖ) ಸೇವೆ, ಕಾರ್ಮಿಕ ಇಲಾಖೆ ಸೇವೆ,ಆಯುಷ್ಮಾನ್ ಭಾರತ್ ಆರೋಗ್ಯ ಸೇವೆ, ಕಂದಾಯ ಇಲಾಖೆಯ ಸೇವೆ,
ಇ -ಸ್ವಾಂಪ್ ಸೇವೆ, ಮಹಿಳಾ ಇಲಾಖೆ ಸೇವೆಗಳು, ಆಹಾರ ಇಲಾಖೆ ಸೇವೆಗಳು,ಸಮಾಜ ಕಲ್ಯಾಣ ಇಲಾಖೆ ಸೇವೆಗಳು,ಆಧಾರ ಸೇವೆ, ಓಘಏಖಖಖಿಅ ಇಲಾಖೆ ಸೇವೆಗಳು, ಅಂಗವಿಕಲ ಇಲಾಖೆಯ ಸೇವೆಗಳು ಹೀಗೆ ಹಲವಾರು ಸೇವೆಗಳು ಗ್ರಾಮ ಒನ್ ಕೇಂದ್ರಗಳು ಒದಗಿಸುತ್ತ ಬಂದಿರುತ್ತದೆ.
ಈಗ ಗ್ರಾಮ ಒನ್ ಕೇಂದ್ರದಲ್ಲಿ ಇಂಡಿಯನ್ ಪೋಸ್ಟ್ ಪೇಮೆಂಟ್ (ಋಕಃ) ಸೇವೆಗಳನ್ನು ಕೂಡ ಪ್ರಾರಂಭಿಸಿದ್ದು ಇದು ಸಾರ್ವಜನಿಕರಿಗೆ ತಮ್ಮ ದೈನಂದಿನ ನಗದು ವ್ಯವಹಾರಗಳಿಗೆಇದು ಸಹಕಾರಿ ಆಗಿಲಿದೆ, ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆಯ ಮೂಲಕ ಸಾರ್ವಜನಿಕರು ಸ್ಥಳೀಯವಾಗಿ ತಮ್ಮ ಆಧಾರ್ ಬೇಸ್ ಅಕೌಂಟ್ ತೆರೆದು ಬ್ಯಾಂಕಿಂಗ್ ಸೇವೆಯನ್ನು ಆರಂಭಿಸಬಹುದು ಇಂಡಿಯನ್ ಪೋಸ್ಟ್ ಪೇಮೆಂಟ್ ಸರ್ವಿಸ್ ಅಲ್ಲಿ ಸಾರ್ವಜನಿಕರಿಗೆ ಆಧಾರ್ ಆಧಾರಿತ ನಗುದು ವಹಿವಾಟಗಳಾದ ಗೃಹಲಕ್ಷ್ಮಿ ಯೋಜನೆ, ಪಿಎಂ ಕಿಸಾನ್ ಯೋಜನೆ, ಅನ್ನ ಭಾಗ್ಯ ಯೋಜನೆ, ನರೇಗಾ ಯೋಜನೆ, ಬೆಳೆ ವಿಮೆ, ಯುವ ನಿಧಿ ಯೋಜನೆ, ವಿದ್ಯಾರ್ಥಿ ವೇತನ ಹೀಗೆ ಅನೇಕ ಸೇವೆಗಳಿಗೆ ನೇರ ನಗದು ವರ್ಗಾವಣೆಯ (ಆಃಖಿ) ಮೂಲಕ ಹಣ ಸಂದಾಯವಾಗುತ್ತಿದ್ದು ಕೆಲವು ಸಾರ್ವಜನಿಕರು ತಮ್ಮ ಬ್ಯಾಂಕ್ ಅಕೌಂಟ್ ಗೆ ಅಧಾರ್ ಶೀಡಿಂಗ್ ಆಗದೆ ಇದ್ದ ಕಾರಣಕ್ಕೆ ಅಂತವರು ವಂಚಿತವಾಗಿರುವಂತಹ ಪ್ರಕರಣಗಳು ಕಂಡುಬಂದಿದ್ದು ಅಂತ ನಾಗರಿಕರಿಗೆ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅಕೌಂಟ್ ತೆರೆಯುವುದರ ಮೂಲಕ ತಕ್ಷಣವೇ ಆಧಾರ್ ಶೀಡಿಂಗ್ ಆಗುತ್ತದೆ ಅದರಿಂದ ಅವರಿಗೆ ಈ ಸಮಸ್ಯೆಯನ್ನು ಸಹ ಬಗೆಹರಿಸುವುದರಲ್ಲಿ ಇದು ಮಹತ್ವಪೂರ್ಣವಾಗಿದೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್, ಇಡಿಸಿಎಸ್ ಯೋಜನಾ ನಿರ್ದೇಶಕ ಮದನ ಮೋಹನ, ಇಡಿಸಿಎಸ್ ಉಪ ನಿರ್ದೇಶಕ ಮಹಾವೀರ, ಐಪಿಪಿಬಿ ಎ.ಜಿ.ಎಮ್ ಮತ್ತು ಸರ್ಕಲ್ ಹೆಡ್ ದಿವಾಕರ ಎನ್ ಆರ್, ಐಪಿಪಿಬಿ ಮುಖ್ಯ ವ್ಯವಸ್ಥಾಪಕರು ಮತ್ತು ಪ್ರಾದೇಶಿಕ ಮುಖ್ಯಸ್ಥರು ಜಗದೀಶ್ ಎಸ್. ಚಿಕ್ಕನರಗುಂದ, ಐಪಿಪಿಬಿ ಹಿರಿಯ ವ್ಯವಸ್ಥಾಪರು, ಶಿಲ್ಪಾ ಎಸ್., ಗ್ರಾಮ ಒನ್ ಇಡಿಸಿಎಸ್ ಗೀರೀಶ ಎಂ. ಎಮ್, ಐಪಿಪಿಬಿ ಹಿರಿಯ ವ್ಯವಸ್ಥಾಪರು ಶ್ಯಾಮ ಪ್ರಸಾದ ಆರ್, ಗ್ರಾಮ ಒನ್ ಯೋಜನಾ ವ್ಯವಸ್ಥಾಪಕರು ಅರುಣ ಸಿದ್ದಪ್ಪ ಕಾಳಪ್ಪನವರ ಉಪಸ್ಥಿತರಿದ್ದರು.