ಲೋಕದರ್ಶನ ವರದಿ
ತಾಳಿಕೋಟೆ 04: ಮಕ್ಕಳಿಗೆ ಶಿಕ್ಷಣ ಒದಗಿಸುವಲ್ಲಿ ಶಿಕ್ಷಕರು ಎಷ್ಟು ಜವಾಬ್ದಾರರೋ ಅಷ್ಟೆ ಪಾಲಕರ ಹೊಣೆಗಾರಿಕೆಯು ಅಡಗಿರುತ್ತದೆ ಮಕ್ಕಳಿಗೆ ಕೇವಲ ಶಾಲೆ ಪಾಠ ಸಾಲದು ಶಾಲೆಯಲ್ಲಿನ ಪಾಠ ಮರು ನೆನಪಿಸುವಂತಹ ಕಾರ್ಯ ಪಾಲಕರು ಮನೆಯಲ್ಲಿ ಮಾಡಿದರೆ ಉತ್ತಮ ವಿದ್ಯಾಥರ್ಿಯನ್ನು ರೂಪಿಸಿದಂತಾಗುತ್ತದೆ ಎಂದು ಶಿಕ್ಷಣ ಸಂಯೋಜಕ ಆರ್.ಎಸ್.ಶಿಕಳವಾಡಿ ಅವರು ನುಡಿದರು.
ಪಟ್ಟಣದ ವಿಕಾಸ್ ಪಬ್ಲಿಕ್ ಸ್ಕೂಲ್ನ 4 ನೇ ವರ್ಷದ ವಿಕಾಸ್ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಗುರುಕುಲ ಶಿಕ್ಷಣ ವ್ಯವಸ್ಥೆಯ ತರಹ ಈ ಸಂಸ್ಥೆಯಲ್ಲಿ ಶಿಕ್ಷಣ ನೀಡಲಾಗುತ್ತದೆ. ಗುಣಮಟ್ಟದ ಹಾಗೂ ಮೌಲ್ಯದಾರಿತ ಶಿಕ್ಷಣ ನೀಡುವಲ್ಲಿ ಈ ಸಂಸ್ಥೆ ಮುಂಚುಣಿಯಲ್ಲಿದೆ ಶಿಕ್ಷಣದ ಜೋತೆ ಕಲೆ ಆಟ ಪಾಠ ಸಂಗೀತದಂತಹ ಶಿಕ್ಷಣವು ಕೂಡಾ ಇಲ್ಲಿ ಕಲಿಸುತ್ತಿರುವದು ಸಂತೋಷದಾಯಕವಾಗಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ ಕೈಲಾಸ ಪೇಠೆಯ ಶ್ರೀ ಬಸವಪ್ರಭುದೇವರು ಮಾತನಾಡಿ ಈ ದೇಶದ ಸಂಸ್ಕೃತಿ ದೇಶಾಭಿಮಾನವನ್ನು ತುಂಬುವಂತಹ ಉತ್ತಮ ಸತ್ಪ್ರ ಪ್ರಜೆಗಳನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಇಂದಿನ ದಿನಗಳಲ್ಲಿ ಶಿಕ್ಷಣ ಜೊತೆಯಲ್ಲಿ ದೇಶಾಭಿಮಾನವೆಂಬುದು ಅತ್ಯವಶ್ಯವಾಗಿದೆ ಉತ್ತಮ ಶಿಕ್ಷಣದ ಜೊತೆಗೆ ದೇಶಾಭಿಮಾನ ಬೆಳೆಸುವಂತಹ ಕಾರ್ಯ ನಡೆಯಲಿ ಎಂದು ಆಶಿಸಿದ ಅವರು ವಿಕಾಸ್ ಶಿಕ್ಷಣ ಸಂಸ್ಥೆಯಲ್ಲಿ ಸಿಗುವ ಮೌಲ್ಯಾಧಾರಿತ ಶಿಕ್ಷಣ ಕುರಿತು ಗುಣಗಾನ ಮಾಡಿದರು.
ವಿಕಾಸ್ ಪಬ್ಲಿಕ್ ಸ್ಕೂಲ್ ಗೌರವಾಧ್ಯಕ್ಷರಾದ ಡಾ.ವ್ಹಿ.ಎಸ್.ಕಾಚರ್ಿ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಸಿ.ಆರ್.ಪಿ.ಎಸ್.ಆರ್.ವಾಲಿಕಾರ, ವಿಕಾಸ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ರಾಮನಗೌಡ ಬಾಗೇವಾಡಿ, ಎಸ್.ಬಿ.ಆಯ್.ನಿವೃತ್ತ ವ್ಯವಸ್ಥಾಕ ಎ.ಕೆ.ಮುಲ್ಲಾ, ಮೊದಲಾದವರು ಇದ್ದರು.
ಇದೇ ಸಮಯದಲ್ಲಿ ಬಲಶೆಟ್ಟಿಹಾಳದ ಚಿತ್ರಕಲಾ ಶಿಕ್ಷಕ ಭದ್ರಪ್ಪ ಪತ್ತಾರ, ಮಿಣಜಗಿ ದೈಹಿಕ ಶಿಕ್ಷಕ ರಾವುತ್ ಪೂಜಾರಿ, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕುಮಾರಿ ರಕ್ಷೀತಾ ಮುದ್ದೇಬಿಹಾಳ, ಅಬ್ಬಾಕಸ್ ಸ್ಪದರ್ೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶಹಪಾದ್ ಮಕಾಂದಾರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕ ಕಾಶಿನಾಥ ಸ್ವಾಗತಿಸಿದರು. ಅಂಬಿಕಾ ಬಿರಾದಾರ, ಶ್ರೀಕಾಂತ ಪತ್ತಾರ ನಿರೂಪಿಸಿದರು. ನಬಿಸಾಬ ನಾಗರಾಳ ವಂದಿಸಿದರು.