ಲೋಕದರ್ಶನ ವರದಿ
ವಿಜಯಪುರ 20: ಬಸವನ ಬಾಗೇವಾಡಿ, ಕೊಲ್ಹಾರ, ನಿಡಗುಂದಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸುವಂತೆ ಆಗ್ರಹಿಸಿ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಭಾರತೀಯ ಕೃಷಿಕ ಸಮಾಜದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಲ್. ಪಾಟೀಲ ಕುದರಿಸಾಲೋಡಗಿ ಮಾತನಾಡಿ, ವಿಜಯಪುರ ಜಿಲ್ಲೆಯ ಅನೇಕ ತಾಲೂಕುಗಳನ್ನು ಬರಗಾಲ ಪಟ್ಟಿಯಿಂದ ಹೊರಗಿಟ್ಟು ಇನ್ನುಳಿದ ತಾಲೂಕುಗಳನ್ನು ಸಕರ್ಾರ ಬರಗಾಲ ಪೀಡಿತ ಎಂದು ಘೋಷಣೆ ಮಾಡಿದೆ. ಆದರೆ ಈ ಸಮೀಕ್ಷೆಯನ್ನು ಬದಿಗೊತ್ತಿ ಈ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇಲ್ಲ ಎಂದು ಬರಪೀಡಿತ ತಾಲೂಕು ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ ಎಂದರು.
ಅಖಂಡ ಕನರ್ಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದಶರ್ಿ ಅರವಿಂದ ಕುಲಕಣರ್ಿ ಮಾತನಾಡಿ, 2018-19ನೇ ಸಾಲಿನಲ್ಲಿ ಮುಂಗಾರು ಬೆಳೆಯ ಒಟ್ಟು ಅಂದಾಜು 31,20,8600 ರೂ.ಗಳವರೆಗೆ ಬೆಳೆಹಾನಿಯಾಗಿತ್ತು, ಅದರಂತೆ ಹಿಂಗಾರು ಹಂಗಾಮಿಯಲ್ಲಿಯೂ 24,49,63,200 ರೂ.ಗಳಷ್ಟು ಬೆಳೆ ಹಾನಿಯಾಗಿತ್ತು ಎಂದು ಅಧಿಕಾರಿಗಳು ಸಮೀಕ್ಷಾ ವರದಿ ಕಳುಹಿಸಿದ್ದರು. ಆದರೆ ತಹಶೀಲ್ದಾರ ಹಾಗೂ ಕೃಷಿ ಅಧಿಕಾರಿಗಳ ವರದಿಯನ್ನು ಗಣನೆಗೆ ತೆಗೆದುಕೊಳ್ಳದೆ ಮೂರು ತಾಲೂಕುಗಳನ್ನು ಕೈ ಬಿಡಲಾಗಿದೆ, ಬರಗಾಲ ಆವರಿಸಿದ್ದು ನಿಜ ಇದ್ದರು ಕೂಡ ಇದನ್ನು ಮರೆಮಾಚಿ ಕರ್ನಾಟಕ ರಾಜ್ಯ ನೈಸರ್ಗಿಕ ಕ ಬರಗಾಲ ನಿರ್ವಹಣಾ ಕೋಶದ ಅಧಿಕಾರಿಗಳು ಸಕಾಲಕ್ಕೆ ಮಳೆಯಾಗಿದೆ. ಬೆಳೆಗಳು ಕೂಡ ಉತ್ತಮವಾಗಿದೆ ಎಂದು ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ಮೂರು ತಾಲೂಕುಗಳನ್ನು ಕೈ ಬಿಟ್ಟಿರುವುದು ದೊಡ್ಡ ಅನ್ಯಾಯ ಎಂದು ದೂರಿದರು.
ನಾಲ್ಕು ಗೋಡೆಗಳ ಮಧ್ಯೆ ಕುಳಿತುಕೊಂಡು ಸಕರ್ಾರಕ್ಕೆ ತಪ್ಪು ಮಾಹಿತಿ ನೀಡುವುದು ಸಮಂಜಸವಲ್ಲ. ಖುದ್ದಾಗಿ ಬಸವನಬಾಗೇವಾಡಿಗೆ ಆಗಮಿಸಿ ಮಾಹಿತಿ ಪಡೆದುಕೊಂಡರೆ ಸತ್ಯಾಂಶ ಏನೆಂಬುವುದು ತಿಳಿಯುತ್ತದೆ. ಅದನ್ನು ಬಿಟ್ಟು ಮನಸ್ಸಿಗೆ ಬಂದಂತೆ ವರದಿ ಸಲ್ಲಿಸಿ ತಾಲೂಕಿನ ರೈತರಿಗೆ ದ್ರೋಹ ಎಸಗಿದ್ದಾರೆ.
ವಿವಿಧ ರೈತ ಸಂಘಟನೆ ಮುಖಂಡರಾದ ಸದಾಶಿವ ಬರಟಗಿ, ಸಿದ್ರಾಮ ಅಂಗಡಗೇರಿ, ಹೊನಕೇರಪ್ಪ ತೆಲಗಿ, ಜಯಶ್ರೀ ಜಂಗಮಶೆಟ್ಟಿ, ಬಸವರಾಜ ಜಂಗಮಶೆಟ್ಟಿ, ಗುರು ಕೋಟ್ಯಾಳ, ಚಂದ್ರಾಮ ತೆಗ್ಗಿ, ಗೌರವ ಅಧ್ಯಕ್ಷ ಈರಣ್ಣ ದೇವರಗುಡಿ, ಶಾಂತಗೌಡ ಬಿರಾದಾರ, ಹಣಮಂತರಾಯ ಗುಣಕಿ, ಎಂ.ಎಸ್.ಲಚ್ಯಾಣ, ಬಿ.ಜಿ.ಪಾಟೀಲ ಅಗಸಬಾಳ, ಬಾಬುಲಾಲ ಕೌಜಗೇರ, ಸಂಗಪ್ಪ ಮುಂಡಗನೂರ, ಕೃಷ್ಣಪ್ಪ ಬಮ್ಮರಡ್ಡಿ ಉಪಸ್ಥಿತರಿದ್ದರು.