ಲೋಕದರ್ಶನ ವರದಿ
ವಿಜಯಪುರ 25: ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ನಗರದ ಮದ್ಯಭಾಗವಾದ ಮೀನಾಕ್ಷಿ ಚೌಕ ವೀಕ್ಷಣೆ ಮಾಡಿದರು. ಅಲ್ಲಿ ನಡೆದಿರುವ ಮಿನಿ ಗಾರ್ಡನ ಕಾಮಗಾರಿ ಮತ್ತು ಒಳಚರಂಡಿ ಕಾಮಗಾರಿ ಬಗ್ಗೆ ಮಾಹಿತಿ ಸಂಗ್ರಹಿಸಿ, ಸ್ಥಳದಲ್ಲಿ ಉಪಸ್ಥಿತರಿದ್ದ ಆಯುಕ್ತರಾದ ಔದ್ರಾಮ ಇವರಿಗೆ ಕಾಮಗಾರಿಯ ಬಗ್ಗೆ ಸರಿಯಾಗಿ ಗಮನ ಹರಿಸಿ ಸರ್ಕಲ್ನಲ್ಲಿ ನೀರು ಸಂಗ್ರಹ ಆಗದ ಹಾಗೆ ನೋಡಿಕೊಳ್ಳಬೇಕು ಮತ್ತು ಮಿನಿ ಗಾರ್ಡನ್ ಸ್ಥಳದಲ್ಲಿ ಸುಸಜ್ಜಿತವಾದ ಬೆಳಕಿನ ವ್ಯವಸ್ಥೆಗಾಗಿ ಹೈ ಮಾಸ್ಟ ಕೂಡಿಸಲು ಮತ್ತು ವಿದ್ಯಾರ್ಥಿಗಳಿಗೆ ಓದಲು ಅನಕೂಲ ಆಗುವಹಾಗೆ ಬೆಂಚ್ಗಳನ್ನು ಹಾಕಲು ಸೂಚಿಸಿದರು.
ಶಾಸಕರು ಮಾತನಾಡಿ ವಿಜಯಪುರ ನಗರದಲ್ಲಿ ಕಳೆದ ಹಲವು ದಿನಗಳಿಂದ ಸಾಕಷ್ಟು ಬಡಾವಣೆಗಳಿಗೆ ಭೇಟಿ ಮಾಡಿ ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸುವ ಪ್ರಯತ್ನ ಮಾಡಿದ್ದೇನೆ. ಜನರು ನನ್ನ ಮೇಲೆ ಭರವಸೆಯನ್ನು ಇಟ್ಟು ಮತನೀಡಿ ಗೆಲ್ಲಸಿದ್ದಾರೆ. ಅವರ ಋಣ ತೀರಿಸಲು ನಾನು ಅವರ ಹತ್ತಿರ ಹೋಗಿ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತೀದ್ದೇನೆ. ಸಕರ್ಾರದಿಂದ ವಿಜಯಪುರ ನಗರದಲ್ಲಿ ದೀನ ದಲಿತರ, ಬಡವರಿಗೆ ನಿರಾಶ್ರೀತರಿಗೆ ಮನೆಗಳನ್ನ ಒದಗಿಸುವ ಕೆಲಸ ಮಾಡುತ್ತಿದ್ದೇನೆ. ವಾಜಪೇಯಿ ವಸತಿ ಯೋಜನೆ, ಪ್ರಧಾನಮಂತ್ರಿ ಆವಾಸ ಯೋಜನೆ ಅಡಿಯಲ್ಲಿ ನಗರದಲ್ಲಿ 10000 ಮನಗೆಳನ್ನು ನಿರ್ಮಾಣ ಮಾಡುವ ಗುರಿ ಹೊಂದಿದ್ದು, ವಿಜಯಪುರ ನಗರವನ್ನು ಬರುವ ದಿನಗಳಲ್ಲಿ ಸ್ಲಂ ಮುಕ್ತ ಮಾಡುವ ಕನಸು ಹೊಂದಿದ್ದೇನೆ ಎಂದರು
ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ಶಿವರುದ್ರ ಬಾಗಲಕೋಟ, ಶ್ರೀಹರಿ ಗೊಳಸಂಗಿ, ಅಶೋಕ ಬೆಲ್ಲದ, ಶೀತಲ ಓಗಿ, ಕೃಷ್ಣಾ ಗುನ್ಹಾಳಕರ, ಉಮೇಶ ವೀರಕರ, ರೋಹನ ಆಪ್ಟೆ, ರೋಹಿತ ಕೊಪ್ಪದ, ವಿನೋದ ತೆಲಸಂಗ, ಅಜಯ ಸೂರ್ಯವಂಶಿ, ಅರುಣ ಸೌದಿ, ಚಾಯಾ ಮಾಶಿಯನ್ನವರ, ಸಿದ್ದು ಯರನಾಳ ಆಯುಕ್ತ ಔದ್ರಾಮ, ಪೋಲಿಸ ಅಧಿಕಾರಿಗಳು, ಹೆಸ್ಕಾಂ ಅಧಿಕಾರಿಗಳು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.