ಲೋಕದರ್ಶನ ವರದಿ
ವಿಜಯಪುರ 07: ಧಾರವಾಡದ ಗರಗ ಗ್ರಾಮದಲ್ಲಿ ಕ್ಷತ್ರೀಯ ಸಮುದಾಯದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ದುಷ್ಕಮರ್ಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿಜಯಪುರದಲ್ಲಿ ಶನಿವಾರ ಕ್ಷತ್ರೀಯ ಸಮಾಜದವರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಸದಸ್ಯ ಪರಶುರಾಮಸಿಂಗ್ ರಜಪೂತ ಮಾತನಾಡಿ, ಕ್ಷುಲ್ಲಕ ಕಾರಣಕ್ಕಾಗಿ ಗರಗದಲ್ಲಿ ಕ್ಷತ್ರೀಯ ಸಮಾಜದ ಮಡಿವಾಳಪ್ಪ ಕಲಾಲ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ, ಅಷ್ಟೇ ಅಲ್ಲದೇ ವಿದ್ಯುತ್ ಶಾಕ್ ನೀಡಿ ಅತ್ಯಂತ ಅಮಾನವೀಯ ರೀತಿಯಲ್ಲಿ ವರ್ತನೆ ಮಾಡಲಾಗಿದೆ. ಕ್ಷುಲಕ್ಕ ಕಾರಣಕ್ಕಾಗಿ ಈ ರೀತಿ ಮಾರಣಾಂತಿಕ ಹಲ್ಲ ನಡೆಸಿರುವ ಆರೋಪಿಗಳನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ನಿರ್ದಯಿ ಆರೋಪಿಗಳಿಗೆ ರಕ್ಷಣೆ ನೀಡಬಾರದು, ಅವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಬಂಧಿಸಬೇಕು ಈ ರೀತಿಯ ಘಟನೆಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಂಡು ಸಮಾಜದವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಮನೋಹರ ಐನಾಪೂರ, ನ್ಯಾಯವಾದಿ ತುಳಸೀರಾಮ ಸೂರ್ಯವಂಶಿ, ಶ್ರವಣಕುಮಾರ ಮಹೀಂದ್ರಕರ, ವಿಜಯಕುಮಾರ ಘಾಟಗೆ, ಸುರೇಶ ಸಂಕಪಾಳ, ಆನಂದ ಚೌಧರಿ, ಸೃಜನ, ಕಿರಣ ಕಾಳೆ, ಗುರುಸಿಂಗ ಹಜೇರಿ, ಸರಸ್ವತಿ ಮಹೀಂದ್ರಕರ, ಜಯಶ್ರೀ ಲದ್ವಾ, ಜ್ಯೋತಿ ತಿವಾರಿ, ಅಶೋಕ ಕಾಳೆ, ವಿಜಯಕುಮಾರ ಚವ್ಹಾಣ, ಗಜಾನನ ಚೌಧರಿ, ಶಿವಾನಂದ ಮಾನಕರ, ಮೋಹನಸಿಂಗ್ ರಜಪೂತ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.