ಲೋಕದರ್ಶನ ವರದಿ
ವಿಜಯಪುರ 20: ಮನುಷ್ಯನಿಗೆ ಉತ್ತಮ ಆರೋಗ್ಯಕ್ಕಾಗಿ ಯೋಗವು ಅತೀ ಅವಶ್ಯಕವಾಗಿದೆ ಇಂದು ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ಯೋಗವು ಒಂದಾಗಿದೆ. ಯೋಗವು ಭಾರತದ ಪುರಾತನ ಆರೋಗ್ಯಶಾಸ್ತ್ರವಾಗಿದೆ ಎಂದು ಯೋಗ ಶಿಕ್ಷಕ ಮಡಿವಾಳಪ್ಪ ದೊಡಮನಿ ಹೇಳಿದರು.
ಶಿವನೇರಿ ಭೀಮಾಬಾಯಿ ಗಿಡ್ಡೆ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳನ್ನು ಮಾಡಿಸಿ ಮಾತನಾಡಿದರು.
ಮಕ್ಕಳಿಗೆ ಜಂಕ್ ಫುಡ್ಗಳಿಂದ ದೂರ ಉಳಿದು ಹಣ್ಣು, ಹಂಪಲು ಸಿರಿದಾನ್ಯದ ಆಹಾರ ಸೇವಿಸಲು ಪೋಷಕರು ತಿಳಿಹೇಳಬೇಕು ಎಂದು ಹೇಳಿದರು.
ಶಾಲೆಯ ಚೇರಮನ್ ಬಾಬುರಾವ ಗಿಡ್ಡೆ ಮಾತನಾಡಿ, ಮಕ್ಕಳಿಗೆ ಯೋಗದ ಮಹತ್ವವನ್ನು ತಿಳಿಸುತ್ತ ಯೋಗವನ್ನು ಜೀವನದಲ್ಲಿ ಪ್ರತಿದಿನ ಅಳವಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಮುಖ್ಯೋಪಾಧ್ಯಾಯರು ಮಲ್ಲಿಕಾರ್ಜುನ ಬಾರಸಾಕಳೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಶಿವನೇರಿ ಸಂಸ್ಥೆಯ ಸದಸ್ಯರಾದ ನಾರಾಯಣ ಎಂ. ಚವ್ಹಾಣ, ಸಹಶಿಕ್ಷಕಿಯರಾದ ಪದ್ಮಪ್ರೀಯಾ ಪವಾರ, ಬಸಮ್ಮಾ ಕೂಡಗಿ, ಅಕ್ಷತಾ ಬುರಲಿ, ಶೃತಿ ಪಿಸಾಳೆ, ದ್ರಾಕ್ಷಾಯಣಿ ಗುರುಮಠ, ಅನಿತಾ ಬಾಲಗಾಂವ, ಸರಿತಾ ಗಾಯಕವಾಡ ಮುಂತಾದವರು ಉಪಸ್ಥಿತರಿದ್ದರು.