ವಿಜಯಪುರ: ಅಲ್ಪ ಮತಕ್ಕೆ ಕುಸಿದ ಮೈತ್ರಿ ಸರ್ಕಾರ

ಲೋಕದರ್ಶನ ವರದಿ

ವಿಜಯಪುರ 09: ಬಿ.ಜೆ.ಪಿ. ಜಿಲ್ಲಾ ಘಟಕದ ವತಿಯಿಂದ ಮೈತ್ರಿ ಸರ್ಕಾರ  ಅಲ್ಪ ಮತಕ್ಕೆ ಕುಸಿದಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜಿನಾಮೆಗೆ ಆಗ್ರಹಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಸರ್ಕಾರ  ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಮಾತನಾಡಿ ಮೈತ್ರಿ ಸಕರ್ಾರ ಅಲ್ಪಮತಕ್ಕೆ ಕುಸಿದಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜಿನಾಮೆ ನೀಡಬೇಕು. ಬಿ.ಜೆ.ಪಿ. ಸಂಖ್ಯಾಬಲ 107ಕ್ಕೆ ಏರಿಕೆಯಾಗಿದ್ದು, 13 ಶಾಸಕರ ರಾಜಿನಾಮೆಯಿಂದಾಗಿ ಮೈತ್ರಿ ಸಕರ್ಾರ ಸಂಖ್ಯಾಬಲ 104ಕ್ಕೆ ಕುಸಿದಿದೆ. ಆದ್ದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು. 

ಮುಖಂಡರಾದ ವಿಜುಗೌಡ ಪಾಟೀಲ ಮಾತನಾಡಿ ಅಧಿಕಾರಕ್ಕಾಗಿ ಆಂತರಿಕ ಕಚ್ಚಾಟದಿಂದ ಬಹುಮತ ಕಳೆದುಕೊಂಡ ಮೈತ್ರಿ ಸರ್ಕಾರ  ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜನ ಬೆಂಬಲ ಹಾಗೂ ಶಾಸಕರ ಬೆಂಬಲ ಎರಡನ್ನೂ ಕಳೆದುಕೊಂಡು ಅಧಿಕಾರದ ದುರಾಸೆಯಿಂದ ಅತಂತ್ರ ಸ್ಥಿತಿಯಲ್ಲಿ ಅಧಿಕಾರಕ್ಕಾಗಿ ಜೋತು ಬಿದ್ದಿರುವ ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಾಜಿನಾಮೆ ನೀಡಿ ತೊಲಗಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸುರೇಶ ಬಿರಾದಾರ ಸಹ ಮಾತನಾಡಿ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ, ಆಡಳಿತ ಪಕ್ಷದ ಶಾಸಕರೇ ಅಸಮಾಧಾನಗೊಂಡು ರಾಜಿನಾಮೆ ನೀಡಿದ್ದಾರೆ. ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಮುಂದುವರೆಯಲು ಅರ್ಹತೆ ಇಲ್ಲ, ತಕ್ಷಣ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಕಾಸುಗೌಡ ಬಿರಾದಾರ ಸಹ ಮಾತನಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೇಟ್ಟಿ, ಜಿ.ಪ್ರಧಾನ ಕಾರ್ಯದಶರ್ಿ ಆರ್.ಎಸ್. ಪಾಟೀಲ, ಸಂಗರಾಜ ದೇಸಾಯಿ, ದಯಾಸಾಗರ ಪಾಟೀಲ, ಶಿವರುದ್ರ ಬಾಗಲಕೋಟ, ಶೀಲವಂತ ಉಮರಾಣಿ, ಭೀಮಾಶಂಕರ ಹದನೂರ, ಮಳುಗೌಡ ಪಾಟೀಲ, ಪಾಲಿಕೆ ಸದಸ್ಯರಾದ ಉಮೇಶ ವಂದಾಲ ರಾಹುಲ ಜಾಧವ, ಅಲ್ತಾಫ ಇಟಗಿ, ಬಸವರಾಜ ಬೈಚಬಾಳ, ಬಾಬು ಶಿರಶ್ಯಾಡ, ವಿದ್ಯಾ ಪಾಟೀಲ, ವಿಜಯ ಜೋಶಿ, ರಾಕೇಶ ಕುಲಕಣರ್ಿ, ರಾಜೇಶ ತಾವಸೆ, ವಿನಾಯಕ ದಹಿಂಡೆ, ವಿಠ್ಠಲ ನಡುವಿನಕೇರಿ, ಕಾಂತು ಶಿಂಧೆ, ರವಿ ಬಿರಾದಾರ ನಾಗಠಾಣ, ಉಮೇಶ ವೀರಕರ, ಪ್ರಮೋದ ಬಡಿಗೇರ, ಮಲ್ಲಿಕಾರ್ಜುನ ಹಳೆಮನಿ, ಚಿದಾನಂದ ಔರಂಗಬಾದ, ಸೋಮು ಮಠ, ರವಿ ಮುಖತರ್ಿಹಾಳ, ಹಣಮಂತರಾಯಗೌಡ ಪಾಟೀಲ ಅಂಜುಟಗಿ, ಸಂದೀಪ ಪಾಟೀಲ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.