ವಿಜಯಪುರ: ವಿವಿಧ ಕಾಲುವೆಗೆ ನೀರು ರೈತರಲ್ಲಿ ಸಂತಸ

ಲೋಕದರ್ಶನ ವರದಿ

ವಿಜಯಪುರ 19: ಮುಳವಾಡ ಏತನೀರಾವರಿ ಯೋಜನೆ ಬಳೂತಿ ಜಾಕವೆಲ್ನಿಂದ ವಿವಿಧ ಕಾಲುವೆಗಳಿಗೆ ನೀರು ಹರಿಯಲು ಆರಂಭಿಸಿದ್ದು, ಬರಗಾಲದಿಂದ ತತ್ತರಿಸಿದ್ದ ರೈತರಲ್ಲಿ ಸಂತಸ ಮೂಡಿಸಿದೆ.

ಅಗ್ನಿ ಆಕಸ್ಮಿಕಕ್ಕೆ ಒಳಗಾಗಿ 5ತಿಂಗಳಿಂದ ದುರಸ್ಥಿಯಲ್ಲಿದ್ದ ಕೃಷ್ಣಾನದಿಯಿಂದ ನೀರೆತ್ತುವ ಬಳೂತಿ ಜಾಕವೆಲ್ ಆರಂಭಗೊಳ್ಳದೆ ಇರುವದರಿಂದ ರೈತರು ಕಂಗಾಲಾಗಿದ್ದರು. ಗೃಹ ಸಚಿವ ಎಂ.ಬಿ.ಪಾಟೀಲ್ರು ಬಳೂತಿ ಜಾಕವೆಲ್ಗೆ ಭೇಟಿ ನೀಡಿ,ತುರ್ತಾಗಿ ಕಾಮಗಾರಿ ಆರಂಭಿಸಲು ಸೂಚನೆ ನೀಡಿ, ದುರಸ್ಥಿಗೆ ಅಗತ್ಯವಾಗಿರುವ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿದ್ದರು. ಅಲ್ಲದೇ ನಂದವಾಡಗಿ ಏತನೀರಾವರಿ ಯೋಜನೆಗೆ ಅಳವಡಿಸಬೇಕಾಗಿದ್ದ ಕೇಬಲ್ ಸಾಮಗ್ರಿಗಳನ್ನು ಗುತ್ತಿಗೆದಾರರ ಮನವೊಲಿಸಿ, ಬಳೂತಿಗೆ ಸ್ಥಳಾಂತರಿಸಿ, 6ತಿಂಗಳ ಸಮಯಾವಕಾಶ ಕೇಳಿದ್ದ ಅಧಿಕಾರಿಗಳಿಗೆ ಈ ಕಾರ್ಯವನ್ನು 6ವಾರಗಳಲ್ಲಿ ಪೂರ್ಣಗೊಳಿಸಿ, ನೀರು ಹರಿಸಲು ಕಾರಣರಾಗಿದ್ದಾರೆ.

ಬಳೂತಿ, ಹಣಮಾಪುರ ಹಾಗೂ ಮಸೂತಿ ಜಾಕವೆಲ್ಗಳಿಂದ ಮುಳವಾಡ ಏತನೀರಾವರಿ ಪೂರ್ವ, ಪಶ್ಚಿಮ ಹಾಗೂ ಮಲಘಾಣ ಪಶ್ಚಿಮ ಕಾಲುವೆಗೆ ನೀರು ಹರಿಯುತ್ತಿದ್ದು, ರೈತರು ಕಾಲುವೆ ಬಳಿ ತೆರಳಿ, ನೀರನ್ನು ನೋಡಿ ಹಷರ್ೊದ್ಘಾರ ವ್ಯಕ್ತಪಡಿಸುವ ದೃಶ್ಯ ಸಾಮಾನ್ಯವಾಗಿತ್ತು.