ಲೋಕದರ್ಶನ ವರದಿ
ವಿಜಯಪುರ 18: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶೇಕಡಾವಾರು ಮತದಾನ ಹೆಚ್ಚಳವಾಗಲು ಅನುಕೂಲವಾಗುವಂತೆ ಮತದಾರರ ಪಟ್ಟಿಯಲ್ಲಿ ನೊಂದಣಿ ಹಾಗೂ ತಪ್ಪದೇ ಮತದಾನ ಮಾಡುವ ಕುರಿತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ರೂಪಿಸಲಾದ ಸ್ಟೀಕರ್ಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ವಿಕಾಸ ಕಿಶೋರ ಸುರಳಕರ ಅವರು ರಾಜ್ಯ ರಸ್ತೆ ಸಾರಿಗೆ ಬಸ್ಗಳಿಗೆ ಅಂಟಿಸುವ ಮೂಲಕ ಇಂದು ಚಾಲನೆ ನೀಡಿದರು.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿಂದು ಮತದಾರರಿಗೆ ಮತದಾರರ ಪಟ್ಟಿಯಲ್ಲಿ ನೋಂದಣಿಗೆ ಸಂಬಂಧಪಟ್ಟಂತೆ, ವಿದ್ಯುನ್ಮಾನ ಮತಯಂತ್ರ, ವಿವಿ ಪ್ಯಾಟ್, ಸಹಾಯವಾಣಿ ಮಾಹಿತಿ ಹಾಗೂ ತಪ್ಪದೇ ಮತದಾನ ಮಾಡುವ ಕುರಿತಂತೆ ನಿಗದಿತ ದಿನಾಂಕಗಳ ಮಾಹಿತಿಯನ್ನೊಳಗೊಂಡ ಸ್ಟೀಕರ್ಗಳನ್ನು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ರೂಪಿಸಲಾಗಿದ್ದು, ವಿಜಯಪುರ ವಿಭಾಗ ವ್ಯಾಪ್ತಿಯಲ್ಲಿ ಬರುವ ಬಸ್ಗಳಿಗೆ ಅಂಟಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಯಿತು.
ವಿಜಯಪುರ ವಿಭಾಗದ ವಿಜಯಪುರ, ಉಪ ವಿಭಾಗಗಳಾದ ಇಂಡಿ, ಸಿಂದಗಿ, ತಾಳಿಕೋಟೆ, ಮುದ್ದೇಬಿಹಾಳ, ಬಾಗೇವಾಡಿ ವ್ಯಾಪ್ತಿಯ ಬಸ್ಗಳಿಗೆ ಸುಮಾರು 800 ಇಂತಹ ಸ್ಟೀಕರ್ಗಳನ್ನು ಅಂಟಿಸಲಾಗುತ್ತಿದ್ದು, ಸುಮಾರು 1200 ಅಟೋರಿಕ್ಷಾ ಮೂಲಕವೂ ಸಹ ಇಂತಹ ಸ್ಟೀಕರ್ಗಳನ್ನು ಅಂಟಿಸುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಅದರಂತೆ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರ ಪಟ್ಟಿಯಲ್ಲಿ ನೋಂದಣಿಯಾಗದೇ ಉಳಿದಿರುವ ಮತದಾರರನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಂಗಲ್ಸ್ ಒಳಗೊಂಡ ಆಡಿಯೋ ಸಹ ರೂಪಿಸಲಾಗಿದ್ದು, ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಇಂತಹ ಇತರೆ ಸ್ಥಳಗಳಲ್ಲಿ ಜಿಂಗಲ್ಸ್ ಪ್ರಸಾರ ಮಾಡುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಎಸ್.ಜಿ.ಗಂಗಾಧರ, ಜಿಲ್ಲಾ ಪಂಚಾಯತ್ ಉಪ ಕಾರ್ಯದಶರ್ಿ ಸಿ.ಬಿ.ಕುಂಬಾರ, ವಿಭಾಗೀಯ ಸಾರಿಗೆ ಅಧಿಕಾರಿ ಎ.ಎಂ.ಮುಲ್ಲಾ, ಸಹಾಯಕ ಸಂಚಾರ ವ್ಯವಸ್ಥಾಪಕರಾದ ಆರ್.ಎಸ್.ಗಜಾಕೋಶ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿದರ್ೇಶಕ ಸುಲೇಮಾನ ನದಾಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.