ವಿಜಯಪುರ: ವೈಜ್ಞಾನಿಕ ಮೀನು ಸಾಕಾಣಿಕೆ ತರಬೇತಿ ಕಾರ್ಯಕ್ರಮ

ಲೋಕದರ್ಶನ ವರದಿ

ವಿಜಯಪುರ 08: ಬರಗಾಲ ಜಿಲ್ಲೆ ವಿಜಯಪೂರದಲ್ಲಿ ಕೆರೆ ತುಂಬಿಸುವ ಸಕರ್ಾರದ ಯೋಜನೆಯಿಂದ ನೀರಿನ ಸಂಗ್ರಹಣೆ ಹೆಚ್ಚಿಸುತ್ತಿರುವದರಿಂದ ಋತು ಆಧಾರಿತ ಮೀನು ಸಾಕಾಣಿಕೆ ಮಾಡುವುದರಿಂದ ಆಹಾರ ಪೌಷ್ಠಿಕತೆ ಜೋತೆಗೆ ರೈತರ ಆದಾಯ ಕೂಡಾ ಹೆಚ್ಚಾಗಲಿದೆ ಎಂದು ಬಿ.ಎಲ್.ಡಿ ಸಂಸ್ಥೆಯ ಪ್ರಾಚಾರಾಧಿಕಾರಿ ಡಾ. ಮಹಾಂತೇಶ ಬೀರಾದಾರ ಅವರು ಹೇಳಿದರು.

       ನಗರದ ಸಮೀಪದ ಭೂತನಾಳ ಕೆರೆ ಹತ್ತಿರದ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಮೀನು ಕೃಷಿಕರ ದಿನಾಚರಣೆಯ ಅಂಗವಾಗಿ "ವೈಜ್ಞಾನಿಕ ಮೀನು ಸಾಕಾಣಿಕೆ" ತರಬೇತಿ ಮತ್ತು ಮೀನುಮರಿಗಳ ವಿತರಣಾ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು.

ಪ್ರಗತಿಪರ ರೈತರು ಹಾಗು    ಎಮ್.ಬಿ.ಪಾಟೀಲ  ಪೌಂಡೇಶನ್ದ ನಿದರ್ೇಶಕ ಶಂಕರ ಸಿದ್ದರೆಡ್ಡಿ, ಅರಭಾವಿ ತೋಟಗಾರಿಕೆ ಮಹಾವಿದ್ಯಾಲಯದ ವಿಶ್ರಾಂತ ಡೀನ್ ಎಸ್.ಆಯ್.ಹನುಮಶೇಟ್ಟಿ ಅವರು ಕೃಷಿ ಮತ್ತು ತೊಟಗಾರಿಕೆ ಜೋತೆಗೆ ಮೀನು ಸಾಕಾಣಿಕೆ ಮಾಡುವದರ ಅನುಭವ ಹಂಚಿಕೊಂಡರು.

ಈ ತರಬೇತಿ ಕಾಯರ್ಾಗಾರದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು 70 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು. ಸಹಾಯಕ ಪ್ರಾಧ್ಯಾಪಕ ಡಾ. ವಿಜಯ.ಎಸ್.ಅತನೂರ ವಂದಿಸಿದರು.