ವಿಜಯಪುರ: ಜಿಲ್ಲೆಯ 11 ಸಂಸ್ಥೆಗಳಿಗೆ ಕಾಯಕಲ್ಪ ಪ್ರಶಸ್ತಿ : ಆಸ್ಪತ್ರೆಯ ಸ್ವಚ್ಛತೆಯಿಂದ ಪ್ರಶಸ್ತಿ ಸಿಗುವಂತಾಗಲಿ: ಡಾ.ಮಹೇಂದ್ರ

ಲೋಕದರ್ಶನ ವರದಿ

ವಿಜಯಪುರ 16: ಕಾಯಕಲ್ಪ ಪ್ರಶಸ್ತಿ ಪಡೆಯಬೇಕಾದರೆ ಸ್ವಚ್ಚತೆ ಮತ್ತು ನೈರ್ಮಲ್ಯ ಹಾಗೂ ಉತ್ತಮ ಆರೋಗ್ಯ ಸೇವೆಗಳನ್ನು ಕೂಡುವದರ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣವಾಗಲಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಮಹೇಂದ್ರ ಕಾಪಸೆ ರವರು ಹೇಳಿದರು.

ಜಿಲ್ಲೆಯ 11 ಸಂಸ್ಥೆಗಳಿಗೆ ಕಾಯಕಲ್ಪ ಪ್ರಶಸ್ತಿ ಲಭಿಸಿದ ಅಂಗವಾಗಿ ಇಂದು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಭಾರತ ಸರ್ಕಾರ ರವರು ಸಾರ್ವಜನಿಕ ಆರೋಗ್ಯ ಸಂಸ್ಥೆಗೆಳಗೆ ಕಾಯಕಲ್ಪ ಪ್ರಶಸ್ತಿಗಳನ್ನು ಕೂಡುವದರ ಮೂಲಕ  ಆರೋಗ್ಯ ಸಂಸ್ಥೆಗಳ ಸ್ವಚ್ಚತೆ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳನ್ನು ಕೂಡಲು ಭಾರತ ಸರ್ಕಾರ  ಮತ್ತು ಕನರ್ಾಟಕ ಸರಕಾರದ ಮಾನದಂಡಗಳ ಒಳಗೊಂಡು ಪ್ರಶಸ್ತಿಗಳನ್ನು  ಕೂಡಲಾಗುತ್ತದೆ.

 ಅದರಂತೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಸನ್-2018-19ನೇ ಸಾಲಿನಲ್ಲಿ ಕರ್ನಾಟಕ  ರಾಜ್ಯಾದಂತ 2805 ಆರೋಗ್ಯ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, 1429 ಸಂಸ್ಥೆಗೆಳ ಪರಸ್ಪರ ಮೌಲ್ಯಮಾನ ಅದರಲ್ಲಿ 781 ಸಂಸ್ಥೆಗಳು ಬಾಹ್ಯಮೌಲ್ಯ ಮಾಪನದಲ್ಲಿ ಭಾಗವಹಿಸಿ. 479 ಸಂಸ್ಥೆಗಳು ಪ್ರಶಸ್ತಿಯನ್ನು ಪಡೆದಿರುತ್ತದೆ.

ಜಿಲ್ಲೆಯಿಂದ 13 ಆರೋಗ್ಯ ಸಂಸ್ಥೆಗಳು ಬಾಹ್ಯಮೌಲ್ಯಮಾಪನಕ್ಕೆ ಒಳಪಟ್ಟು 11 ಸಂಸ್ಥೆಗಳು ಬಹುಮಾನಪಡೆದಿರುತ್ತದೆ. ಅದರಲ್ಲಿ ಜಿಲ್ಲಾ ಆಸ್ಪತ್ರೆ ಸಮಾನಕರ ಬಹುಮಾನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೊನವಾಡ, ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ಯುತ್ತಮ ಪ್ರಶಸ್ತಿ ಪಡೆದಿರುತ್ತದೆ. 

ಸಮಾಧಾನಕ ಬಹುಮಾನ ಪಡೆದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ತಿಕೋಟಾ, ಶಿವಣಗಿ, ಹೊನ್ನಟಗಿ, ನಗರ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ನಗರ ಆರೋಗ್ಯ ಕೇಂದ್ರ ದರ್ಗಾ, ಅತ್ಯುತ್ತಮ ಪ್ರಶಸ್ತಿ ಪಡೆದಿರುತ್ತದೆ. ಪ್ರಥಮ ರನ್ಆಫ್ ಪ್ರಶಸ್ತಿಯು ನಗರ ಆರೋಗ್ಯ ಕೇಂದ್ರ ಶಾಂತಿನಗರ ಹಾಗೂ ಸಮುದಾಯ ಆರೋಗ್ಯ ಸಂಸ್ಥೆಗಳು, ತಾಲೂಕಾ ಆಸ್ಪತ್ರೆಗಳು ಸಮಾಧಾನಕರ ಪ್ರಶಸ್ತಿ ಪತ್ರ ಪಡೆದ ಸಂಸ್ಥೆಗಳ ವಿವರ ಚಡಚಣ, ತಾಲೂಕಾ ಆಸ್ಪತ್ರೆ ಬಸವನ ಬಾಗೇವಾಡಿ, ಸಮುದಾಯ ಆರೋಗ್ಯ ಕೇಂದ್ರ ಕಾಳಗಿ, ನಿಡಗುಂದಿ ಪ್ರಶಸ್ತಿಗಳನ್ನು ಪಡೆದಿರುತ್ತದೆ. 

ಕಾರ್ಯಕ್ರಮದಲ್ಲಿ ಅನುಷ್ಠಾನ ಅಧಿಕಾರಿಗಳಾದ ಡಾ.ಜ್ಯೋತಿ ಪಾಟೀಲ, ಡಾ.ಸುರೇಶ ಚವ್ಹಾಣ, ಡಾ.ಎಂ.ಬಿ.ಬಿರಾದಾರ, ಡಾ.ಈರಣ್ಣ.ಧಾರವಾಡಕರ, ಡಾ.ರಾಜೇಶ್ವರಿ.ಗೊಲಗೇರಿ, ತಾಲೂಕಾ ಆರೋಗ್ಯ ಅಧಿಕಾರಿಗಳಾದ  ಡಾ.ಕೆ.ಡಿ.ಗುಂಡಬಾವಡಿ, ಡಾ.ಮಹೇಶ.ನಾಗರಭಟ್ಟ, ಡಾ.ಅರ್ಚನಾ.ಕುಲಕರ್ಣಿ ಡಾ.ಆರ್.ಎಸ್.ಇಂಗಳೆ, ಡಾ.ಸತೀಶ ಭಗವಾನ ಹಾಗೂ ಜಿಲ್ಲೆಯ ವೈದ್ಯಾಧಿಕಾರಿಗಳು ಭಾಗವಹಿಸಿದರು. ಜಿಲ್ಲಾ ಗುಣಮಟ್ಟ ಸಲಹೆಗಾರರಾದ ಡಾ.ಸಂತೋಷ ಕಂಚ್ಯಾಣಿ ರವರು ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಾಣಾಧಿಕಾರಿಗಳಾದ ಸುರೇಶ ಹೊಸಮನಿ ರವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.