ಲೋಕದರ್ಶನ ವರದಿ
ಮೂಡಲಗಿ 16: 'ಪ್ರೌಢ ಶಾಲಾ ಹಂತದಲ್ಲಿ ವಿದ್ಯಾಥರ್ಿಗಳು ತೆಗೆದುಕೊಳ್ಳುವ ಸ್ವ-ನಿಧರ್ಾರ, ಆತ್ಮವಿಶ್ವಾಸವು ಮುಂದೆ ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸುತ್ತದೆ' ಎಂದು ಮಕ್ಕಳ ತಜ್ಞ ರಬಕವಿಯ ಡಾ. ಯತೀಶ ಎಂ. ಪೂಜಾರ ಹೇಳಿದರು.
ಇಲ್ಲಿಯ ಎಸ್ಎಸ್ಆರ್ ಪ್ರೌಢ ಶಾಲೆಯ ಆತಿಥ್ಯದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದವರು 'ಪ್ರೌಢ ಶಾಲಾ ಮಕ್ಕಳ ಕಲಿಕೆಯ ಸಮಸ್ಯೆಗಳು ಮತ್ತು ಜೀವನ ಕೌಶಲಗಳು' ವಿಷಯ ಕುರಿತು ಕಾಯರ್ಾಗಾರದಲ್ಲಿ ಮಾತನಾಡಿದ ಅವರು ವಿದ್ಯಾಥರ್ಿಗಳು ಕಲಿಕಾ ಹಂತದಲ್ಲಿ ಉತ್ತಮ ಸಂವಹನ ಮತ್ತು ಒತ್ತಡಗಳನ್ನು ನಿಭಾಯಿಸಬೇಕು ಎಂದರು.
ವಿದ್ಯಾಥರ್ಿಗಳು ಉತ್ತಮ ಹವ್ಯಾಸ, ಆರೋಗ್ಯ ಮತ್ತು ದುಷ್ಚಟಗಳಿಂದ ದೂರವಿದ್ದು ಸಾಧಕರ ಆದರ್ಶಗಳನ್ನು ಪಾಲಿಸಿ ಶ್ರೇಷ್ಠ ವ್ಯಕ್ತಿಯಾಗಬೇಕು ಎಂದರು. ಡಾ. ಪೂಜಾರ ಅವರು 200 ವಿದ್ಯಾಥರ್ಿಗಳಿಗೆ 'ಯಶಸ್ಸು ನಿಮ್ಮ ಕೈಯಲ್ಲಿ ಕೈಪಿಡಿಯನ್ನು ಉಚಿತವಾಗಿ ನೀಡಿದರು.
ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಮೋನಿಕಾ ಸಾವಂತ ಮಾತನಾಡಿ ಇಂದು ಎಲ್ಲೆಡೆ ಸ್ಪಧರ್ೆ ಇದ್ದು, ವಿದ್ಯಾಥರ್ಿಗಳು ಕಠಿಣ ಪರಿಶ್ರಮ ಮಾಡಿದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು. ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ ಬಾಗೇವಾಡಿ ಮಾತನಾಡಿದರು. ಮೂಡಲಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಜಯ ಸೋನವಾಲಕರ, ಲಯನ್ಸ ವಲಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಮಹಾಂತೇಶ ಹೊಸೂರ, ಶ್ರೀಶೈಲ್ ಲೋಕನ್ನವರ, ಗಿರೀಶ ಆಸಂಗಿ ವೇದಿಕೆಯಲ್ಲಿದ್ದರು. ಸಿ.ಎಂ. ಹಂಜಿ ಸ್ವಾಗತಿಸಿದರು, ಬಾಲಶೇಖರ ಬಂದಿ ನಿರೂಪಿಸಿದರು, ಯು.ಬಿ. ದಳವಾಯಿ ವಂದಿಸಿದರು.