ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಹೋರಾಟಕ್ಕೆ ಜಯ: ವಿಜಯೋತ್ಸವದ ಸಂಭ್ರಮ

Victory for the struggle of hostel and residential school outsourced employees: Celebration of vict

ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಹೋರಾಟಕ್ಕೆ ಜಯ: ವಿಜಯೋತ್ಸವದ ಸಂಭ್ರಮ  

ಹಾವೇರಿ 15: ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರಜಿಲ್ಲಾ ಸಂಘಟನಾ ಸಮಿತಿ ಸಭೆಯಲ್ಲಿ ಕನಿಷ್ಠ ವೇತನ ಹೆಚ್ಚಳ ಮಾಡಿದರಾಜ್ಯ ಸರ್ಕಾರತೀರ್ಮಾನವನ್ನು ಸ್ವಾಗತಿಸಿ, ಹಾಸ್ಟೆಲ್ ಹೊರಗುತ್ತಿಗೆ ನೌಕರರರು ಪರಸ್ಪರ ಸಹಿ ವಿತರಣೆಯ ಮೂಲಕ ವಿಜಯೋತ್ಸವ ಸಂಭ್ರಮಾಚರಣೆ ಮಾಡಿದರು.ಸಭೆಯನ್ನು ಉದ್ದೇಶಿಸಿ ಡಿವೈಎಫ್‌ಐರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಹೋರಾಟದ ಪ್ರತಿಫಲವಾಗಿ ರಾಜ್ಯ ಸರ್ಕಾರಕ್ಕೆಕಾರ್ಮಿಕಇಲಾಖೆಯು ಕನಿಷ್ಟ ವೇತನ ಹೆಚ್ಚಳಕ್ಕೆ ಪ್ರಸ್ತಾವನೆ ಕಳಿಸಿದ್ದು ಸ್ವಾಗತರ್ಹಾ. ಈ ಕೂಡಲೇ ಕನಿಷ್ಠ ವೇತನ ಹೆಚ್ಚಳವನ್ನು ತೀರ್ಮಾನದಂತೆಜಾರಿ ಮಾಡಲು ಮುತುವರ್ಜಿಯಿಂದ ಇಲಾಖೆಗಳು ಮುಂದಾಗಬೆಕೆಂದು ಒತ್ತಾಯಿಸಿದರು.ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಮುಖಂಡರಾದ ಶಾಂತಕ್ಕಗಡ್ಡಿಯವರ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಹಾಸ್ಟೆಲ್ ಮತ್ತು ವಸತಿ ನಿಲಯಗಳಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ನೌಕರರುಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಚತಾಗಾರರು, ಕಾವಲುಗಾರರು, ಡಿ.ಗ್ರೂಪ್ ಸಿಬ್ಬಂದಿಗಳು ಕಳೆದ 15-20 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿರಾಜ್ಯ ಮತ್ತುಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಸಾಕಷ್ಟು ಹೋರಾಟ ಮಾಡಿದ ಪ್ರತಿಫಲವಾಗಿ ರಾಜ್ಯ ಸರ್ಕಾರ ದಿನಾಂಕ:11-04-2025 ರಂದು ಕಾರ್ಮಿಕ ಇಲಾಖೆಯು 4 ವಲಯಗಳ ಬದಲಾಗಿ 3 ವಲಯಗಳನ್ನು ಮಾಡಿದೆ.  

ಕನಿಷ್ಟ ವೇತನ 31 ಸಾವಿರ ಕೇಳಿದ್ದಕ್ಕೆ 25,714 ರೂ.ಗಳನ್ನು ನಿಗದಿ ಮಾಡಿಗೆಜೆಟಿಯರ್ ನೋಟಿಪಿಕೇಷನ್ ಗೆ ಕಾರ್ಮಿಕ ಇಲಾಖೆ ಮೂಲಕ ರಾಜ್ಯ ಸರ್ಕಾರಕ್ಕೆ ಕಳಿಸಿದೆ.ಇದನ್ನು ನಮ್ಮ ಸಂಘ ಸ್ವಾಗತಿಸುತ್ತದೆ. ಜೊತೆಗೆರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆಗೆ ಅಭಿನಂದನೆಗಳನ್ನು ತಿಳಿಸುತ್ತೇವೆ. ಸಂಘದ ಹೋರಾಟಕ್ಕೆಜಯ ಸಿಕ್ಕಿದೆ. ಈ ವಿಜಯೋತ್ಸವವನ್ನುರಾಜ್ಯದಎಲ್ಲಾಜಿಲ್ಲಾ ಕೇಂದ್ರಗಳಲ್ಲಿ ಮಾಡುತ್ತಿದ್ದುಇದರ ಭಾಗವಾಗಿಇಂದು ನಮ್ಮಜಿಲ್ಲೆಯಲ್ಲಿ ಮಾಡುತ್ತಿದ್ದೇವೆಎಂದರು. ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ಕನಿಷ್ಟ ವೇತನ 35 ಸಾವಿರ, ಸೇವಾ ಭದ್ರತೆ, ಕಾಯಂಗಾಗಿ ಕಳೆದ 15 ವರ್ಷಗಳಿಂದ ಹೋರಾಟ ಮಾಡುತ್ತಿದ್ದುಇದರ ಬಗ್ಗೆ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಕಾಳಜಿ ವಹಿಸಬೇಕಾಗಿ ತಮ್ಮ ಮಾಧ್ಯಮದ ಮೂಲಕ ರಾಜ್ಯ ಸರ್ಕಾರವನ್ನುಆಗ್ರಹಿಸುತ್ತಿದ್ದೇವೆಎಂದರು.ಈ ಸಂದರ್ಭದಲ್ಲಿಎಸ್‌ಎಫ್‌ಐಜಿಲ್ಲಾಧ್ಯಕ್ಷ ಬಸವರಾಜಎಸ್, ಮುಖಂಡರಾದ ಹೆಚ್‌. ಹೆಚ್‌. ನಾದಫ್, ಶಿವರಾಜ ಮಾರನಬೀಡಾ, ಶೋಭ ಸಿ ಡೊಳ್ಳೇಶ್ವರ, ಫಕ್ಕಿರೇಶ ಪೂಜಾರ, ಶೇಖಪ್ಪ ಮುಗಳಹಳ್ಳಿ, ಕುಮಾರ ಮನ್ನಂಗಿ, ಪ್ರಕಾಬುರಡಿಕಟ್ಟಿ, ಸುನೀಲ್‌ಕುಮಾರ್‌ಎಲ್, ಮಾಲತೇಶ್ ಮಾಕನೂರ, ಮಲ್ಲವ್ವ ಕೆ, ಆರ್, ರತ್ನ ಬುರಡಿಕಟ್ಟಿ ಸೇರಿದಂತೆಅನೇಕರು ಉಪಸ್ಥಿತರಿದ್ದರು.