ಜೀವನವೆಂಬ ದೋಣಿಗೆ ವಚನಗಳೇ ದಿಕ್ಸೂಚಿ
ಬಳ್ಳಾರಿ 21: ಜೀವನವು ಜೀಕುವ ವನವಾಗಬಾರದು. ಸುಂದರ ಹೂದೋಟದಂತಿರಬೇಕು. ಇದಕ್ಕೆ ಮಾರ್ಗದರ್ಶನ ಅಗತ್ಯ. ಜೀವನಕ್ಕೆ ಸರ್ವಶ್ರೇಷ್ಠ ಮಾರ್ಗದರ್ಶನ ಶರಣ ರಿಂದ ಮತ್ತು ಅವರ ವಚನಗಳಿಂದ ದೊರೆಯುತ್ತದೆ. ನಿತ್ಯ ಜೀವನದ ಜಂಜಡಗಳಲ್ಲಿ ಸಿಲುಕಿದ ಮಾನವ ವಚನಗಳ ಬೆಳಕಿನಲ್ಲಿ ತನ್ನ ಬಾಳನ್ನು ಸುಂದರವಾಗಿಸಿ ಕೊಳ್ಳಬಲ್ಲನೆಂದು ನಿವೃತ್ತ ಮುಖ್ಯ ಶಿಕ್ಷಕರಾದ ಸಿ.ಕೊಟ್ರೇಶ್ ತಿಳಿಸಿದರು.
ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಸಂಗನಕಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 308ನೇ ಮಹಾಮನೆ ಸಂಗನಕಲ್ಲು ದೊಡ್ಡ ಶರಣಪ್ಪ ಹಂಪಮ್ಮ ದತ್ತಿ ಕಾರ್ಯಕ್ರಮದಲ್ಲಿ "ನಿತ್ಯ ಜೀವನಕ್ಕೆ ವಚನಗಳು" ಎಂಬ ವಿಷಯದ ಬಗೆಗೆ ಮಾತನಾಡುತ್ತಾ, ಶರಣರು ನೈತಿಕ ಮೌಲ್ಯವನ್ನು ಬರೀ ಬೊಧನೆ ಮಾಡಲಿಲ್ಲ. ಆದರ್ಶದಂತೆ ನಡೆದು ನಿತ್ಯ ಸುಖಿಗಳಾಗಿದ್ದರೆಂದರು.
ಸಂಗನಕಲ್ಲಿನ ಸದಾಶಿವ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಎಸ್.ಮೇಟಿ ಬಸವರಾಜರು ಅತಿಥಿಗಳಾಗಿ ಪಾಲ್ಗೊಂಡು, ಸಂಗನಕಲ್ಲಿನ ಪ್ರಾಚೀನತೆ ಹಾಗೂ ಸಮಾಜಕ್ಕಾಗಿ ದುಡಿದು ಶ್ರೇಷ್ಟರಾಗಿ ಕೀರ್ತಿಶೇಷರಾಗಿ ಉಳಿದವರ ಬಗ್ಗೆ ತಿಳಿಸಿ, ಮಕ್ಕಳಿಗೆ ತಾವೂ ಶ್ರೇಷ್ಟರಾಗಬೇಕೆಂದು ಉಪದೇಶಿಸಿದರು. ಸಮಾಜಮುಖಿ ಸೇವಾಪರರಾಗಿರುವ ಉರಗ ತಜ್ಞ ಡಿ.ಸತೀಶ್ ಕುಮಾರರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯ ಮುಖ ಗುರುಗಳಾದ ಎ.ಸರಸ್ವತಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ವಿದ್ಯಾರ್ಥಿನಿಯರಾದ ಪದ್ಮಾವತಿ ಹಾಗೂ ತಂಡದವರು ಪ್ರಾರ್ಥನೆ ಸಲ್ಲಿಸಿದರು. ಶಿಕ್ಷಕ ಶಿವಣ್ಣ ಸ್ವಾಗತ ಕೋರಿ ಕಾರ್ಯಕ್ರಮ ನಿರೂಪಿಸಿದರು. ಪರಿಷತ್ತಿನ ಅಧ್ಯಕ್ಷ ರಾದ ಕೆ.ಬಿ.ಸಿದ್ಧಲಿಂಗಪ್ಪ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.ಶಿಕ್ಷಕ ಬಸವರಾಜು ಶರಣು ಸಮರ್ಿಸಿದರು. ವೇದಿಕೆಯ ಗಣ್ಯರನ್ನು ಸ್ವಾಗತಿಸುವುದರೊಂದಿಗೆ ಕಾರ್ಯಕ್ರಮ ಮಂಗಳವಾಯಿತು.