ತರಕಾರಿ ಮಾರಾಟಗಾರರು ಸರ್ಕಾರದಿಂದ ಸಾಲ ಸೌಲಭ್ಯ ಪಡೆಯಬೇಕು: ನಿರ್ದೇಶಕ ವಿನೋದಕುಮಾರ
ಕಂಪ್ಲಿ 03: ತರಕಾರಿಗಳಲ್ಲಿ ಹೆಚ್ಚಾಗಿ ಪ್ರೋಟೀನ್ ನಾರಿನಾಂಶ ಆಹಾರ ಇರುವುದರಿಂದ ಅವುಗಳನ್ನು ಸೇವಿಸಿ ಆರೋಗ್ಯವನ್ನು ಕಾಪಾಡಲು ಮುಂದಾಗಬೇಕು ಎಂದು ಜಿ.ಪಂ.ಯೋಜನಾ ನಿರ್ದೇಶಕ ವಿನೋದಕುಮಾರ ಹೇಳಿದರು ತಾಲೂಕಿನ ಮೇಟ್ರಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯಿತಿ ಇಲಾಖೆ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಜಿಲ್ಲಾ ಮತ್ತು ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮೇಟ್ರಿ ಇವರ ಸಹಕಾರದೊಂದಿಗೆ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ಮೆಟ್ರಿ ಸಂಜೀವನಿ ವಾರದ ಸಂತೆ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕೇ ಚಾಲನೆ ನೀಡಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ವಾರದ ಸಂತೆಯಾಗಿದೆ ತರಕಾರಿ ಮಾರಾಟಗಾರರು ಸರ್ಕಾರದಿಂದ ಸಾಲ ಸೌಲಭ್ಯ ಪಡೆಯಲು ಮುಂದಾಗಿ ತರಕಾರಿ ಮಾರಿದರೆ ಲಾಭವನ್ನು ಪಡೆಯಬಹುದು ಇದರಿಂದ ಸಾರ್ವಜನಿಕರಿಗೆ ಅನುಕೂಲ ವಾಗುತ್ತದೆ ಮಹಿಳಾ ವ್ಯಾಪಾರಗಳಿಗೆ ಗ್ರಾಮದ ಹಿರಿಯರು ನೆರಳಿಗೆ ತಾತ್ಕಾಲಿಕ ಷಾಮೀನು ಛತ್ರಿ ಅನುಕೂಲ ಮಾಡಿ ಕೋಡಬೇಕು ಎಂದರು ತಾ.ಪಂ ಇಓ ಆರ್ ಕೆ.ಶ್ರೀಕುಮಾರ ಮಾತನಾಡಿ .ವಾರದ ಸಂತೆ ಸಾರ್ವಜನಿಕರಿಗೆ ಬಹಳ ಅನುಕೂಲವಾಗಿದೆ ಇದನ್ನು ಸದುಪಯೋಗ ಪಡೆದುಕೊಳ್ಳಿ ಎಂದರು ಜಿಲ್ಲಾ ವ್ಯವಸ್ಥಾಪಕ ವಿಜಯಕುಮಾರ ಮೇಟ್ರಿ ಗ್ರಾ.ಪಂ ಅಧ್ಯಕ್ಷೆ ಸಿ.ಡಿ ಗುಂಡಪ್ಪ ಉಪಾಧ್ಯಕ್ಷ ನೇಣಿಕಿ ಗೀರೀಶ್ ಪಿ.ಡಿ.ಓ ಬೀರಲಿಂಗ ಕಾರ್ಯದರ್ಶಿ ಎಚ್ ಹುಲುಗಪ್ಪ ಗ್ರಾ.ಪಂಚಾಯಿತಿ ಸದಸ್ಯರಾದ ಕುಮಾರಸ್ವಾಮಿ ನಾಗರಾಜ ಜಡೆಪ್ಪ ಎನ್ ಗುಂಡಪ್ಪ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಎಚ್ .ಲಕ್ಷೀ ಕಾರ್ಯದರ್ಶಿ ಕೆ.ರತ್ತಮ್ಮ ಟಿ.ಪಿ.ಎಂ ಮೇಲ್ವಿಚಾರಕಿ ಎನ್ ಪಾರ್ವತಿ ಬಿ.ಅರ್.ಪಿ .ವಿ.ಪಿ.ಅಶ್ವೀನಿ ಮುಖಂಡರಾದ ಎಚ್ ಗಂಗಾಧರ ಮಹಾಂತೇಶ ಸಿ.ಡಿ ಚಿದಾನಂದ ಸೇರಿ ಅನೇಕರಿದ್ದರು ಮಾ03ಮೇಟ್ರಿ ಗ್ರಾಮದಲ್ಲಿ ಮಹಿಳಾ ಒಕ್ಕೂಟ ಮೆಟ್ರಿ ಸಂಜೀವನಿ ವಾರದ ಸಂತೆ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕೇ ನಿರ್ದೇಶಕ ವಿನೋದಕುಮಾರ ಚಾಲನೆ ನೀಡಿದರು