ವೀರಭದ್ರೇಶ್ವರ ಜಾತ್ರಾ ಮಹೋತ್ಸವ : 7 ಜೋಡಿಗಳ ಉಚಿತ ಸಾಮೂಹಿಕ ವಿವಾಹ
ಬ್ಯಾಡಗಿ 07 : ಕನ್ಯಾ ಹಾಗೂ ವರನಿಗೆ ಕಾನೂನು ಪ್ರಕಾರ ವಯಸ್ಸಾದಾಗ ಮಾತ್ರ ವಿವಾಹ ಮಾಡಲು ಅವಕಾಶಗಳು ಇದ್ದು ವಯಸ್ಸು ಕಡಿಮೆ ಇದ್ದಾಗ ವಿವಾಹ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವದು ಎಂದು ಮಹಿಳಾ ಮತ್ತು ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಚಂದ್ರಶೇಖರ ಹೇಳಿದರು. ಪಟ್ಟಣದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ನಡೆದ 7 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಂದರ್ಭದಲ್ಲಿ ಮಾತನಾಡಿದರು. ಆಯಾ ಪ್ರದೇಶದ ಅಂಗನವಾಡಿ ಶಿಕ್ಷಕಿಯರು ಮದುವೆ ಆಗುವಾಗ ವಯಸ್ಸು ಪರೀಶೀಲನೆ ಮಾಡುವ ಅಗತ್ಯವಿದೆ ಎಂದರು.