ಬೆಳಗಾವಿ, ಡಿ 19 (ಯುಎನ್ಐ) ಉತ್ತರ ಕನರ್ಾಟಕಕ್ಕೆ ಅನ್ಯಾಯವಾಗಿದೆ ಎಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಸುವರ್ಣ ಸೌಧದ ಮುಂದೆ ರೊಟ್ಟಿ ಹಂಚುವ ಮೂಲಕ ವಿನೂತನ ಪ್ರತಿಭಟನೆ
ನಡೆಸಿದರು.
ಸುವರ್ಣ ಸೌಧದ ಗೇಟ್ ಬಳಿ ರೊಟ್ಟಿ ಹಂಚಿ ವಿನೂತನ ಪ್ರತಿಭಟನೆ ನಡೆಸಲು ಮುಂದಾದ ವಾಟಾಳ್ ನಾಗಾರಾಜ್ ಅವರನ್ನು ಪೊಲೀಸರು
ಬಂಧಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಉತ್ತರ ಕನರ್ಾಟಕದ ಅಭಿವೃದ್ದಿ ಬಗ್ಗೆ ಸಮಗ್ರವಾಗಿ ಚಚರ್ೆ ನಡೆಯುತ್ತಿಲ್ಲ.
ಯಾರೂ ಸಹ ಪ್ರಮಾಣಿಕ ಪ್ರಯತ್ನ ನಡೆಸಿಲ್ಲ. ಬರೀ ಕಾಟಾಚಾರಕ್ಕೆ ಉತ್ತರ ಕನರ್ಾಟಕದ ಬಗ್ಗೆ ಚಚರ್ೆ ನಡೆಸುತ್ತಿದ್ದಾರೆ. ಉತ್ತರ ಕನರ್ಾಟಕಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡಿಲ್ಲ. ಇದನ್ನು ಖಂಡಿಸಿ ಜನವರಿಯಲ್ಲಿ ಬೀದರನಿಂದ ಬೆಂಗಳೂರುವರೆಗೆ ಹೋರಾಟ ನಡೆಸುವುದಾಗಿ ವಾಟಾಳ್ ನಾಗಾರಾಜ್ ಎಚ್ಚರಿಕೆ
ನೀಡಿದರು.