ಮಧ್ವ ನವಮಿ ನಿಮಿತ್ತ ಕಂಪ್ಲಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು- ಸರ್ವಮೂಲ ಗ್ರಂಥ ರಥೋತ್ಸವ.
ಕಂಪ್ಲಿ 08: ಮಧ್ವ ನವಮಿ ನಿಮಿತ್ತ ಪಟ್ಟಣದ ಅಮೃತಶಿಲಾ ರಾಮಚಂದ್ರ ಹಾಗೂ ಆಂಜಿನೇಯ ದೇವಸ್ಥಾನದಲ್ಲಿ ಮಧ್ವಾಚಾರ್ಯರ ಪ್ರತಿಮೆಗೆ ಪೂಜೆಯನ್ನು ಸಲ್ಲಿಸುವುದರ ಜೊತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರು. ಬೆಳಿಗ್ಗೆ ಕೋಟೆಯ ಆಂಜಿನೇಯ ದೇವಸ್ಥಾನದಲ್ಲಿ ಆಂಜಿನೇಯಸ್ವಾಮಿ ಪ್ರತಿಮೆಗೆ ಪೂಜೆ, ಮಧು ಅಭಿಷೇಕ, ವಾಯುಸ್ತುತಿ ಪಾರಾಯಣ, ಸಮಗ್ರ ಸರ್ವ ಮೂಲಗ್ರಂಥ ಪಾರಾಯಾಣ, ಪಂಚಾಮೃತಾಭಿಷೇಕ ಸೇರಿದಂತೆ ವಿವಿಧ ಅಭಿಷೇಕಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ ಬ್ರಾಹ್ಮಣ ಬೀದಿಯಲ್ಲಿನ ಅಮೃತಶಿಲಾ ರಾಮಚಂದ್ರ ದೇವಸ್ಥಾನದಲ್ಲಿ ಗುರುರಾಜ ಸೇವಾ ಮಂಡಳಿಯಿಂದ ಅರ್ಚಕ ರಾಮಚಾರ್ ಜ್ಯೋಯಿಸ್ ಪೌರೋಹಿತ್ಯದಲ್ಲಿ ವಾಯುದೇವರು, ಮಧ್ವಾಚಾರ್ಯರು, ಸರ್ವಮೂಲಗ್ರಂಥವನ್ನು ರಥದಲ್ಲಿರಿಸಿ ದೇವಸ್ಥಾನದ ಆವರಣದಲ್ಲಿ ರಥೋತ್ಸವ ಜರುಗಿತು. ಅಮೃತಶಿಲಾ ರಾಮಚಂದ್ರ, ಸೀತೆ, ಲಕ್ಷ್ಮಣ,ಆಂಜಿನೇಯ ಪ್ರತಿಮೆಗಳನ್ನು ನೂತನ ವಸ್ತ್ರ ಹಾಗು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ನಂತರ ಅನ್ನ ಸಂತರೆ್ಣ ಜರುಗಿತು. ಕಾರ್ಯಕ್ರಮದಲ್ಲಿ ಮಂಡಳಿ ಅಧ್ಯಕ್ಷ ಗೌಡ್ರು ಗೋಪಾಲಕೃಷ್ಣ, ಕಾರ್ಯದರ್ಶಿ ಅಗಸನೂರು ನಾಗರಾಜ, ಖಜಾಂಚಿ ಬಿ.ರಮೇಶ್, ಮುಖಂಡರಾದ ದಿಗ್ಗಾವಿ ಗುರುರಾಜಾಚಾರ, ಕೆ.ಶ್ರೀಕಾಂತಾಚಾರ್ ಸೇರಿದಂತೆ ಇತರರು ಇದ್ದರು. ಫೆ.003: ಕಂಪ್ಲಿಯ ಅಮೃತಶಿಲಾ ರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ಮಧ್ವಾಚಾರ್ಯರ ಪ್ರತಿಮೆ, ಸರ್ವಮೂಲಗ್ರಂಥದ ರಥೋತ್ಸವ ಜರುಗಿತು.