ಲೋಕದರ್ಶನ ವರದಿ
ಯಲ್ಲಾಪುರ: ರೈತರು ದೇಶದ ಬೆನ್ನೆಲುಬಾಗಿದ್ದಾರೆ. ಆದರೆ ಕೃಷಿ ಕಷ್ಟದಾಯಕ ಹಾಗೂ ಆದಾಯವೂ ಕಡಿಮೆ ಎಂಬ ಮನೊಧೋರಣೆಯಿಂದ ಇಂದು ಜನರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯಸರಕಾರ ಕೃಷಿಕರಿಗೆ ಉತ್ತೇಜನ ನೀಡುವ ಹಲವು ಯೋಜನೆಗಳನ್ನು ಜಾರಿ ತಂದಿದೆ.ಈ ಎಲ್ಲಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಯುವಜನಾಂಗ ಕೃಷಿಯತ್ತ ಮುಖ ಮಾಡಬೇಕು ಎಂದು ಜಿಲ್ಲಾ ಪಂಚಾಯತಿ ಸದಸ್ಯೆ ಶೃತಿ ಹೆಗಡೆ ಹೇಳಿದರು.
ಅವರು ಬುಧವಾರ ಪಟ್ಟಣದ ತಾಪಂ ಆವಾರದ ಗಾಂಧಿಕುಟೀರದಲ್ಲಿ ಜಿಲ್ಲಾಪಂಚಾಯತ,ತಾಲೂಕಾಡಳಿತ,ತಾಲೂಕಾಪಂಚಾಯತ ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕೃಷಿ ಅಭಿಯಾನ , ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕೃಷಿ ಯಂತ್ರೋಪಕರಣ ಪ್ರದರ್ಶನ ಉದ್ಘಾಟಿಸಿ ತಾಪಂ ಅದ್ಯಕ್ಷೆ ಭವ್ಯಾ ಶೆಟ್ಟಿ ಮಾತನಾಡಿ ಸರಕಾರ ಭತ್ತದ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ಕೃಷಿಯಿಂದ ಸಿಗುವ ನೆಮ್ಮದಿಯ ಬದುಕು ಬೇರೆ ಯಾವದೇ ಉದ್ಯೋಗದಿಂದ ಹೆಚ್ಚಿನ ಹಣ ದೊರೆತರೂ ನೆಮ್ಮದಿ ಸಿಗಲು ಸಾಧ್ಯವಿಲ್ಲ. ಕೃಷಿಕರು ಒಂದೇ ಬೆಳೆ ಬೆಳೆಯದೇ ತಂತ್ರಜ್ಞಾನದ ಜೊತೆಗೆ ಮಿಶ್ರ ಅಥವಾ ಸಮಗ್ರ ಬೇಸಾಯ ಪದ್ಧತಿಯನ್ನು ಆಳವಡಿಸಿಕೊಂಡರೆ ಹೆಚ್ಚಿನ ಆದಾಯವನ್ನು ಪಡೆಯಬಹುದು ಎಂದರು.ಇದೇ ಸಂದರ್ಭದಲ್ಲಿ ಆತ್ಮಾಯೋಜನೆಯಡಿ ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಮಹಾಲಕ್ಷ್ಮಿ ಶಿವರಾಮ ಭಟ್ಟ ಹಾಗೂ ತಾಲೂಕಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಎಸ್ .ಎಸ ಭಟ್ ಶಿರನಾಲಾ .ನಾಗೇಶ ಭಟ್ಟ ಚಿಮನಳ್ಳಿ, ಗಣಪತಿ ನಾಗಪ್ಪಾ ಭಾಗ್ವತ್ ಆನಗೋಡ, ರಾಮಕೃಷ್ಣ ಗಾವಂಕರ್ ಆನಗೋಡ,ರಾಮಚಂದ್ರ ಗೋಪಾಲಕೃಷ್ಣ ಭಟ್ಟ ಸಹಸ್ರಳ್ಳಿ, ಈ ಐವರನ್ನು ಸನ್ಮಾನಿಸಲಾಯಿತು . ಸಹಾಯಕ ಕೃಷಿ ಅಧಿಕಾರಿ ಟಿ.ಎಸ್ ಚಿಕ್ಕಮಠ ಪ್ರಾಸ್ತಾವಿಕ ಮಾತನಾಡಿದರು.ವೇದಿಕೆಯಲ್ಲಿ ತಾ.ಪಂ ಉಪಾಧ್ಯಕ್ಷೆ ಸುಜಾತಾ ಸುರೇಶ ಸಿದ್ದಿ, ತೋಟಗಾರಿಕಾ ಅಧಿಕಾರಿ ಶಂಕರಪ್ಪಾ ಅರಿಕಟ್ಟಿ,ತಾ.ಪಂಕಾರ್ಯನಿರ್ವಹಣಾಧಿಕಾರಿ ನಾರಾಯಣ ಹೆಗಡೆ, ಕೃಷಿಸಂಶೋಧನಾ ಕೇಂದ್ರದ ಕೃಷಿ ತಜ್ಞರಾದ ಎಸ.ವಿಹೆಗಡೆ,ಸತೀಶ ಗುನಗಾ ,ಪಾಲಿ ಕ್ಲಿನಿಕನ ಡಾ.ಗೋವಿಂದಭಟ್ಟ,. ಸಹಾಯಕ ಕೃಷಿ ನಿದರ್ೇಶಕ ವಿ.ಜಿ ಹೆಗಡೆ ಉಪಸ್ಥಿತರಿದ್ದರು.ರೈತಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.ಆತ್ಮಾಯೋಜನಾಧಿಕಾರಿ ಎಮ.ಜಿ ಭಟ್ ನಿರ್ವಹಿಸಿ ಸ್ವಾಗತಿಸಿದರು.