ಗದಗ 07: ಗ್ರಾಮದ ಸ್ವಚ್ಛತೆಯ ಜೊತೆಗೆ ಸುತ್ತಮುತ್ತಲಿನ ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದರ ಜೊತೆಗೆ ಆರೋಗ್ಯದ ಕಡೆ ಗಮನಹರಿಸಬೇಕು. ಹಾಗೂ ಸರಕಾರದ ಯೋಜನೆಗಳನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಿ ಎಂದು ಸೊರಟೂರು ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯ ಕೆ.ಎಚ್. ಬೇಲೂರು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹಮ್ಮಿಕೊಂಡದ್ದ ಕ್ಷೇತ್ರ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸೊರಟೂರು ಗ್ರಾಮದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ನಡೆದ ಸ್ವಚ್ಛತೆ ಹಾಗೂ ಸಕರ್ಾರದ ಯೋಜನೆಗಳ ಕುರಿತು ಕೊತಬಾಳ ಬಸವ ಬಳಗ ಕಲಾ ತಂಡ ಹಾಗೂ ನೀಲಗುಂದ ಜೈ ಭೀಮ ಗೀಗೀ ಮೇಳದವರು ಬೀದಿನಾಟಕ ಮತ್ತು ಜಾನಪದ ಹಾಡಿನ ಮೂಲಕ ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿಗಳಾದ ಎಲ್.ಜಿ.ಶತಪಥಿ, ಎಸ್.ಪಿ.ಗಿಡ್ನಂದಿ, ಲೂ.ಸಿ.ಆರ್, ಎಸ್.ವೈ.ಭಜಂತ್ರಿ, ಕೆ.ಎಮ್.ರೇಶ್ಮಿ, ಎಲ್.ಎಸ್.ಅಂಗಡಿ, ಎ.ಬಿ.ನಾಯಕ, ಎಫ್.ಎಮ್ ಜಡಿಯವರ, ಎಫ್.ಕೆ.ಪಾಟೀಲ, ಎಮ್.ಎ.ದೇಶಪಾಂಂಡೆ, ಆರ್.ಕೆಳಗಿನಓಣಿ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಮ್.ಟಿ. ನೇಮರಾಜ. ಎಸ್.ಎನ್ ಪೋಲಿಸಗೌಡ್ರು ಇತರರು ಉಪಸ್ಥಿತರಿದ್ದರು. ಜಿ.ಎಫ್. ಡೊಂಬರ ಸ್ವಾಗತಿಸಿದರು.