ಲೋಕದರ್ಶನ ವರದಿ
ಗದಗ 09: ಭಾರತದಲ್ಲಿ ಉದರ್ು ಪ್ರಭಾವಿ ಭಾಷೆಯಾಗಿ ಪರಿವರ್ತನೆಯಾಗಿದ್ದು, ಉದರ್ು ಭಾಷೆ ಬಳಕೆಯಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಆಲಿಸಲು, ಮಾತನಾಡಲು ಹಾಗೂ ಬರೆಯಲು ಉದರ್ು ಭಾಷೆ ತನ್ನದೆ ಆದ ಸೋಗಡನ್ನು ಹೊಂದಿದೆ ಎಂದು ಬೆಂಗಳೂರಿನ ಕನರ್ಾಟಕ ಉದರ್ು ಅಕಾಡೆಮಿಯ ಅಧ್ಯಕ್ಷ ಜನಾಬ ಮೋಬಿನ್ ಮುನಾವರ್ ಅಭಿಪ್ರಾಯಪಟ್ಟರು.
ಅವರು ಸೋಮವಾರ ನಗರದ ಕನರ್ಾಟಕ ಭವನದಲ್ಲಿ ಪ್ರಪ್ರಥಮ ಬಾರಿಗೆ ಎರ್ಪಡಿಸಿದ್ದ ರಾಷ್ಟ್ರಮಟ್ಟದ ಉದರ್ು ಕವಿಗೋಷ್ಠಿಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದರ್ು ಭಾರತೀಯ ಭಾಷೆಯಾಗಿದ್ದು ವಿಜಯನಗರ ಆಳ್ವಿಕೆಯಲ್ಲಿ ಉದರ್ು ಭಾಷೆ ಅಸ್ತಿತ್ವವನ್ನು ಪಡೆಯಿದು ಎಂದು ತಿಳಿದು ಬರುವದು ಕುಲಿ ಕುತಬ್ಷಾ ಉದರ್ು ಭಾಷೆಯ ಮೊದಲ ಕವಿ ಎಂದು ಬಣ್ಣಿಸಲಾಗುತ್ತಿದೆ ಎಂದ ಅವರು ಹಲವು ಭಾಷೆಗಳ ಸಮ್ಮಿಳಿತದಿಂದ ಶ್ರೀಮಂತಿಕೆಯನ್ನು ಪಡೆದ ಉದರ್ು ಭಾರತ ಸ್ವತಂತ್ರ್ಯ ಸಂಗ್ರಾಮದಲ್ಲಿ ಹಾಗೂ ಸೇನೆಯಲ್ಲಿ ಪ್ರಭಾವಿ ಭಾಷೆಯಾಗಿ ಮಾರ್ಪಟ್ಟಿದ್ದನ್ನು ಇತಿಹಾಸದಿಂದ ತಿಳಿಯಬಹುದಾಗಿದೆ ಎಂದರು.
ಉದರ್ು ಭಾಷೆಯ ಸಮೃದ್ಧಿಯನ್ನು ವೃದ್ಧಿಸಲು ಕನರ್ಾಟಕ ರಾಜ್ಯದಲ್ಲಿ ಉದರ್ು ಅಕಾಡೆಮಿ ಮೂಲಕ ರಾಜ್ಯದಾದ್ಯಂತ ಉದರ್ು ಭಾಷೆಯ ಪ್ರಚಾರ, ಅಭಿವೃದ್ಧಿ, ಶಿಕ್ಷಣ, ಕಲಿಕೆಯ ಕಾರ್ಯ ನಡೆದಿದೆ. ಸಾಹಿತ್ಯಿಕವಾಗಿಯೂ ಉದರ್ು ಭಾಷೆಯನ್ನು ಇನ್ನಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಕಾಯರ್ಾಗಾರ, ಚಿಂತನಮಂಥನ, ವಿಚಾರ ಸಂಕಿರಣ, ಕವಿಗೋಷ್ಠಿಗಳನ್ನು ಏರ್ಪಡಿಲಾಗುತ್ತಿದೆ ಈ ಮಾಲಿಕೆಯಲ್ಲಿ ಗದುಗಿನಲ್ಲಿ ಪ್ರಪ್ರಥಮ ಬಾರಿಗೆ ರಾಷ್ಟ್ರಮಟ್ಟದ ಉದರ್ು ಕವಿಗೋಷ್ಠಿಯನ್ನು ಎರ್ಪಡಿಸಲಾಗಿದೆ. ರಾಜ್ಯ ಹಾಗೂ ಅಂತರ್ ರಾಜ್ಯದ ಹೆಸರಾಂತ ಕವಿ-ಕವಯಿತ್ರಿಯರು ಪಾಲ್ಗೋಂಡಿದ್ದಾರೆ ಎಂದರು.
ಗದುಗಿನಲ್ಲಿ ಉದರ್ು ಅಕಾಡೆಮಿಯ ಸೆಂಟರ್ ತೆರೆಯುವ ಉದ್ದೇಶವಿದ್ದು ಈ ಬಗ್ಗೆ ಈಗಾಗಲೇ ಬೇಡಿಕೆ, ಒತ್ತಾಸೆ ಬಂದಿದ್ದು ಇದನ್ನು ಸಾಕಾರಗೊಳಿಸಲು ಗದಗ-ಬೆಟಗೇರಿ ನಗರಸಭೆ ಅಥವಾ ನಗರ ಯೋಜನಾ ಪ್ರಾಧಿಕಾರ ನಿವೇಶನವೊಂದನ್ನು ನೀಡಲು ಮುಂದೆ ಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವದು. ಈ ಸೆಂಟರ್ದಲ್ಲಿ ವಾಚನಾಲಯ, ಭಾಷೆಯ ಅಧ್ಯಯನ, ಉದರ್ು ಕಲಿಯುವ ಮತ್ತು ಕಲಿಸುವ ನಿರಂತರ ಕಾರ್ಯದ ಜೊತೆಗೆ ಕಂಪ್ಯೂಟರ್ ತರಬೇತಿಯನ್ನೂ ಈ ಸೆಂಟರ್ದಲ್ಲಿ ನೀಡಲಾಗುವದು ಈ ಬಗ್ಗೆ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಆಸಕ್ತಿ ತೆಗೆದುಕೊಳ್ಳಬೇಕಷ್ಟೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಧರ್ಮ ಗುರುಗಳಾದ ಮೌಲಾನಾ ಇನಾಯುತುಲ್ಲಾಸಾಹೇಬ ಫೀರಜಾದೆ, ಆಝಾದ್ ಕೋ-ಆ ಬ್ಯಾಂಕ್ನ ಚೇರಮನ್ ಜನಾಬ ಸರ್ಫರಾಜ ಉಮಚಗಿ, ನಿವೃತ್ತ ಡಿಡಿಪಿಐ ಎಸ್.ಎನ್.ಖಾಜಿ ಉದರ್ು ಭಾಷೆಯ ಮಹತ್ವ ಹಾಗೂ ಕವಿಗೋಷ್ಠಿಯ ಔಚಿತ್ಯವನ್ನು ಬಣ್ಣಿಸಿದರು.
ಉದ್ದಿಮೆದಾರ ಸಿರಾಜ್ಅಹ್ಮದ್ ಬಳ್ಳಾರಿ ಮಾತನಾಡಿ ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಕನರ್ಾಟಕ ರಾಜ್ಯದಲ್ಲಿ ವಿವಿದ ಜಿಲ್ಲೆಗಳಲ್ಲಿ ರಾಜ್ಯ ಮಟ್ಟದ ಉದರ್ು ಸಾಹಿತ್ಯ ಸಮ್ಮೇಳನಗಳು ನಡೆಯಬೇಕು ಆ ಮೂಲಕ ಉದರ್ು ಭಾಷೆಯ ಅಭಿವೃದ್ಧಿ ಹಾಗೂ ಸಾಹಿತ್ಯ ಬೆಳೆದು ಬರುವಂತಾಗಬೇಕೆಂದರು.
ಪೌರಾಯುಕ್ತ ಮನ್ಸೂರ್ಅಲಿ ಮಾತನಾಡಿ ಗದುಗಿನಲ್ಲಿ ರಾಷ್ಟ್ರಮಟ್ಟದ ಉದರ್ು ಕವಿಗೋಷ್ಠಿಯನ್ನು ಏರ್ಪಡಿಸುವ ಮೂಲಕ ಗದುಗಿನ ಹಿರಿಮೆಯನ್ನು ಉದರ್ು ಭಾಷೆಯ ಮಹತ್ವವನ್ನು ತೆರೆದಿಟ್ಟಂತಾಗಿದೆ ಎಂದರಲ್ಲದೆ ಗದುಗಿನಲ್ಲಿ ಉದರ್ು ಅಕಾಡೆಮಿಯ ಸೆಂಟರ್ ತೆರೆಯಲು ನಗರಸಭೆಯಿಂದ ಲಭ್ಯವಿರುವ ನಿವೇಶನವನ್ನು ಕಾನೂನಿನ ಚೌಕಟ್ಟಿಗೆ ಒಳಪಟ್ಟು ನೀಡುವ ಭರವಸೆ ನೀಡಿದರು.
ವೇದಿಕೆಯ ಮೇಲೆ ರಾಷ್ಟ್ರೀಯ ಉದರ್ು ಭಾಷಾಭಿವೃದ್ಧಿ ಸಮಿತಿಯ ಸದಸ್ಯ ಡಾ.ಝಾಹೀದ್ ತಿಮ್ಮಾಪೂರಿ, ಮೌಲಾನಾ ಝಾಕರಿಯಾ, ಜಿಲ್ಲಾ ವಕ್ಪ ಬೋರ್ಡನ ಚೇರಮನ್ ಜಿ.ಎಂ.ದಂಡಿನ, ವೈಸ್ ಚೇರಮನ್ ಎಸ್.ಡಿ.ಮಕಾನದಾರ, ಮಹಮ್ಮದ ಯೂಸೂಫ ಇಟಗಿ, ಜಾಮೀಯಾ ಮಸ್ಜೀದ್ ಚೇರಮನ್ ಸಾದಿಕ್ ನರಗುಂದ, ಗದಗ ಅಂಜುಮನ್ ಇಸ್ಲಾಂ ಕಮೀಟಿಯ ಅಧ್ಯಕ್ಷ ಯುಸೂಫ್ ನಮಾಜಿ, ಗದಗ ಅಂಜುಮನ್ ಇಸ್ಲಾಂ ಕಮೀಟಿಯ ಮಾಜಿ ಅಧ್ಯಕ್ಷ ಅಕ್ಬರಸಾಬ ಬಬಚರ್ಿ, ನಗರಸಭಾ ಸದಸ್ಯ ಎಂ.ಸಿ.ಶೇಖ, ಗದಗ ಅಂಜುಮನ್ ಇಸ್ಲಾಂ ಪಾಲಿಟೆಕ್ನಿಕ್ ಕಾಲೇಜಿನ ನಿದರ್ೆಶಕರಾದ ಸಿರಾಜಅಹ್ಮದ್ ಖಾಜಿ, ಶಬ್ಬೀರಅಹ್ಮದ್ ಅಬ್ಬಿಗೇರಿ, ಅಬ್ದುಲ್ ಕಲಾಂ ಕಾಲೇಜಿನ ಚೇರಮನ್ ಬಿ.ಕೆ.ಖಾಜಿ, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಕೋ-ಆಡರ್ಿನೇಟರ್ ನಿಸಾರಅಹ್ಮದ್ ಖಾಜಿ, ಡಾ.ಪ್ಯಾರಅಲಿ ನೂರಾನಿ, ರಸೀದಸಾಬ ಮದರಂಗಿ, ಜಿಲ್ಲಾ ಕಾಂಗ್ರೇಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಉಮರಫಾರೂಕ ಹುಬ್ಬಳ್ಳಿ, ಶಹಾಬುದ್ದೀನ್ ಹುಯಿಲಗೋಳ ಉಪಸ್ಥಿತರಿದ್ದರು.
ಮೌಲಾನಾ ಇನಾಯುತುಲ್ಲಾಸಾಹೇಬ ಫೀರಜಾದೆ ಕುರಾಣ ಪಠಿಸಿದರು, ಸಿರಾಜಅಹ್ಮದ್ ಖಾಜಿ ಸ್ವಾಗತಿಸಿದರು, ನಿಸಾರಅಹ್ಮದ್ ಖಾಜಿ ಪರಿಚಯಿಸಿದರು. ಕನರ್ಾಟಕ ಉದರ್ು ಅಕಾಡೆಮಿಯ ಸದಸ್ಯ ಮಹಮ್ಮದ್ಶಾಹಿದ್ ಖಾಜಿ ನಿರೂಪಿಸಿದರು ಕೊನೆಗೆ ಖದೀರ್ಅಹ್ಮದ್ ಬಾಳೇಕುಂದ್ರಿ ವಂದಿಸಿದರು.