ಗಂಗಾಮತಸ್ಥರ ಎಸ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ

Urge central government to add Gangamatshara to ST

ಗಂಗಾಮತಸ್ಥರ ಎಸ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ   

ಕಂಪ್ಲಿ 04: ಕರ್ನಾಟಕ  ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಆಯ್ಕೆಗೊಂಡ ಎನ್‌.ರವಿಕುಮಾರ್ ಅವರನ್ನು ರಾಜ್ಯ ಗಂಗಾಮತಸ್ಥರ ಸಂಘದ ನಿಕಟಪೂರ್ವ ಪದಾಧಿಕಾರಿಗಳು ಮಂಗಳವಾರ ಬೆಂಗಳೂರಿನಲ್ಲಿ ಸನ್ಮಾನಿಸಿ, ಮನವಿ ಸಲ್ಲಿಸಿದರು. ನಂತರ ನಿಕಟಪೂರ್ವ ರಾಜ್ಯ ಉಪಾಧ್ಯಕ್ಷ ಮಣ್ಣೂರು ನಾಗರಾಜ ಮಾತನಾಡಿ, ಎನ್‌.ರವಿಕುಮಾರ್ ಗಂಗಾಮತ ಸಮಾಜದ ಶಕ್ತಿಯಾಗಿದ್ದಾರೆ ಅರ್ಥಿಕ ಶೈಕ್ಷಣಿಕ ಮತ್ತು ಸಾಮಾಜಿಕ ಹಿಂದುಳಿದ ಸಮುದಾಯವಾಗಿದ್ದು ಬೆಸ್ತರು ಕೋಲಿ, ಕಬ್ಬಲಿಗ, ಬಾರಿಕ  ಅಂಬಿಗ, ಮೊಗವೀರರು ಆರು ಜಾತಿಗಳು ಎಸ್ಟಿಗೆ ಸೇರಿಸುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೂ ಈತನಕವೂ ಸೇರಲಾಗಿಲ್ಲ. ಸುಮಾರು ವರ್ಷಗಳ ಹೋರಾಟ ಮಾಡುತ್ತ ಬಂದರೂ ಸಹ ಇವತ್ತಿನವರೆಗೂ ಪರಿಶಿಷ್ಟ ಪಂಗಡಕ್ಕೆ ಸೇರೆ​‍್ಡ ಮಾಡಿಲ್ಲ ತಾವುಗಳು ಅಧಿವೇಶನದಲ್ಲಿ ಧ್ವನಿ ಎತ್ತುವ ಮೂಲಕ ಎಸ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು.  

ಇದರ ಜೊತೆಗೆ ನಿಜಶರಣ ಅಂಬಿಗರ ಚೌಡಯ್ಯನವರ ನಿಗಮಕ್ಕೆ 100ಕೋಟಿ ರೂಪಾಯಿಗಳ ಅನುದಾನ ಒದಗಿಸುವಂತೆ, ಮನವಿ ಮಾಡಿದರು ರಾಜ್ಯ ಗಂಗಾಮತಸ್ಥರ ಸಂಘದ ನಿಕಟಪೂರ್ವ ರಾಜ್ಯ ಅಧ್ಯಕ್ಷ ಬಿ.ಮೌಲಾಲಿ, ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಕರೇಕಲ್ ಮನೋಹರ ಸೇರಿ ಇತರರಿದ್ದರು.