ಕೇಂದ್ರ ಬಜೆಟ್ ಹಿ 2025-26; ಕೇವಲ ಘೋಷಣೆಗಳು - ಯಾವುದೇ ನಿರ್ದಿಷ್ಟ ಕ್ರಮಗಳಿಲ್ಲ!
ಬಳ್ಳಾರಿ 01: 2025/26ರ ಕೇಂದ್ರ ಬಜೆಟ್ ನಲ್ಲಿ ಶಿಕ್ಷಣ ವಲಯಕ್ಕೆ ನೀಡಿರುವ ಬಜೆಟ್, ಈ ಹಿಂದೆ ಕೇಂದ್ರ ಸರ್ಕಾರಗಳು ಘೋಷಿಸಿದ ಬಜೆಟ್ಗಳಿಗೆಯೇ ಅನುಗುಣವಾಗಿದೆ. ಇದು ಶಿಕ್ಷಣ ಕ್ಷೇತ್ರವನ್ನು ಸುಧಾರಿಸುವ ನಿರ್ದಿಷ್ಟ ಕ್ರಮಗಳಿಗಿಂತ ಹೆಚ್ಚಾಗಿ ಘೋಷಣೆಗಳಿಂದ ತುಂಬಿವೆ. ಬಜೆಟ್ ನಲ್ಲಿ ಶಿಕ್ಷಣ ವಲಯಕ್ಕೆ ಹಂಚಿಕೆಯಾಗಿರುವ 1,28,600 ಕೋಟಿ ರೂಪಾಯಿಗಳು, ಒಟ್ಟು ಬಜೆಟ್ನ 2.6ಅ ಕ್ಕಿಂತ ಕಡಿಮೆ ಇದೆ. ಹಲವಾರು ತಜ್ಞರು ಶಿಕ್ಷಣಕ್ಕೆ ಕನಿಷ್ಠ 10ಅ ಕೇಂದ್ರ ಬಜೆಟ್ ಅನ್ನು ಮೀಸಲಿಡಬೇಕೆಂದು ಶಿಫಾರಸ್ಸು ಮಾಡಿದ್ದಾರೆ. ಆದರೆ ಇದು ಅದಕ್ಕಿಂತಲೂ ಕಡಿಮೆ ಇದೆ.
ಪ್ರಸ್ತುತ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಓಇಕ-2020 ಸಹ ಶಿಕ್ಷಣಕ್ಕೆ ಕೇಂದ್ರ ಬಜೆಟ್ನ 6ಅ ಅನ್ನು ಮೀಸಲಿಡಲು ಶಿಫಾರಸು ಮಾಡುತ್ತದೆ. ಈ ವರ್ಷಮೀಸಲಿಟ್ಟಿರುವ 2.6ಅ ರಷ್ಟು ಮೊತ್ತವು ಹಿಂದಿನ ವರ್ಷಗಳಲ್ಲಿ ಮೀಸಲಿಟ್ಟ ಬಜೆಟ್ಗಿಂತ ಬಹಳ ಕಡಿಮೆ. ಪ್ರಸ್ತುತ ಬಜೆಟ್ನಲ್ಲಿ ಮಾಡಲಾದ ಪ್ರಮುಖ ಘೋಷಣೆಗಳು - ಂಋ ತರಗತಿಗಳು, ಮಾಧ್ಯಮಿಕ ಶಾಲೆಗಳ ಡಿಜಿಟಲೀಕರಣ, ಕೌಶಲ್ಯ ತರಬೇತಿ, ಋಖಿಗಳ ಪ್ರವೇಶವನ್ನು ಹೆಚ್ಚಿಸುವುದು ಇತ್ಯಾದಿ ಅಂಶಗಳು , ದೇಶದ ಪ್ರಸ್ತುತ ಶಿಕ್ಷಣ ವಲಯವು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಿಗೆ ಯಾವುದೇ ನಿರ್ದಿಷ್ಟ ಪರಿಹಾರವನ್ನು ಒದಗಿಸುವುದಿಲ್ಲ.
ಸರ್ಕಾರಿ ಶಾಲೆಗಳ ಸ್ಥಿತಿಯು ಎಷ್ಟು ಗಂಭೀರವಾಗಿದೆ ಎಂದರೆ, 20ಅ ಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯವಿಲ್ಲ. ಅವಶ್ಯಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅನುದಾನವನ್ನು ಒದಗಿಸುವ ಬದಲು, ಆಯ್ದ ಶಾಲೆಗಳಲ್ಲಿ ಡಿಜಿಟಲೀಕರಣದತ್ತ ಸಾಗುವುದು ಮತ್ತು ಅದಕ್ಕಾಗಿ ಹಣವನ್ನು ಮೀಸಲಿಡುತ್ತಿರುವುದು ಪ್ರಸ್ತುತ ಸರ್ಕಾರದ ಆದ್ಯತೆಗಳ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಉದ್ಯೋಗ ಸೃಷ್ಟಿಗೆ ನಿರ್ದಿಷ್ಟ ಕ್ರಮಗಳನ್ನು ಉಲ್ಲೇಖಿಸದೆ ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ್ಯಗಳನ್ನು ಒದಗಿಸುವ ಸಲುವಾಗಿ ಹಂಚಿಕೆಯಾಗಿರುವ ನಿಧಿಯು ಅನವಶ್ಯಕ ವೆಚ್ಚವಾಗುತ್ತದೆ.
ಋಖಿಗಳ ಪ್ರವೇಶವನ್ನು ಹೆಚ್ಚಿಸಲಾಗುವುದು ಎಂದು ಮಾನ್ಯ ಹಣಕಾಸು ಸಚಿವರು ಹೇಳಿದ್ದಾರೆ. ಋಖಿಗಳಲ್ಲಿ ಬಿ.ಟೆಕ್ ಕೋರ್ಸಿನ ಶುಲ್ಕವು ವರ್ಷಕ್ಕೆ ಸುಮಾರು ?3 ಲಕ್ಷ ರೂ.ಗಳು! ಈ ದೇಶದಲ್ಲಿ ಎಷ್ಟು ವಿದ್ಯಾರ್ಥಿಗಳು ಅದನ್ನು ಭರಿಸಬಲ್ಲರು? ಋಖಿಗಳ ಮೂಲಕ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಸರ್ಕಾರದ ಗುರಿಯಾಗಿದ್ದರೆ, ಧನಸಹಾಯವನ್ನು ಹೆಚ್ಚಿಸಬೇಕಾಗಿತ್ತು. ಇದರಿಂದ ವಿದ್ಯಾರ್ಥಿಗಳ ಮೇಲಿನ ಶುಲ್ಕದ ಹೊರೆಯು ಕಡಿಮೆಯಾಗುತ್ತದೆ.ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ತೆಲುಗು ಕವಿತೆಯ ಒಂದು ಸಾಲನ್ನು ಉಲ್ಲೇಖಿಸಿ "ದೇಶವೆಂದರೆ ಬರೀ ಮಣ್ಣಲ್ಲವೋ , ಆ ದೇಶದ ಜನರು.." ಎಂದು ಹೇಳಿದರು. ಈ ದೇಶದ ಬಹುಪಾಲು ಜನರು ಸಾರ್ವಜನಿಕ ಶಿಕ್ಷಣವನ್ನು ಸುಧಾರಿಸಬೇಕು ಮತ್ತು ಬಲಪಡಿಸಬೇಕೆಂದು ಬಯಸುತ್ತಾರೆ. ದೇಶದಲ್ಲಿ ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಒಂದೇ ಒಂದು ಯೋಜನೆಯನ್ನು ಘೋಷಿಸದಿರುವುದು ಮತ್ತು ಶಿಕ್ಷಣಕ್ಷೇತ್ರಕ್ಕೆ ಬಜೆಟ್ನಲ್ಲಿ ಮೊತ್ತ ಕಡಿಮೆಗೊಳಿಸಿರುವುದು ದೇಶದ ಸಾರ್ವಜನಿಕ ಶಿಕ್ಷಣದ ಮೇಲೆ ದಾಳಿ ಎಂದು ಂಋಖಓ ನಂಬುತ್ತದೆ.