ಗದಗ 11: ಜಿಲ್ಲೆಯಲ್ಲಿನ ಮಲಪ್ರಭಾ ನೀರಾವರಿ ಕಾಲುವೆಗಳ ಹೂಳು ತೆಗೆದು ತಾತ್ಕಾಲಿಕ ದುರಸ್ತಿಗೊಳಿಸಲು ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಹಲವಾರು ಬಾರಿ ಕೆ.ಡಿ.ಪಿ ಸಭೆಯಲ್ಲಿ ನಿದರ್ೇಶನ ನೀಡಲಾಗುತ್ತಿದ್ದರು ಈ ವರೆಗೂ ಕ್ರಮ ವಹಿಸದ ಜಲಸಂಪನ್ಮೂಲ ಇಲಾಖೆ ನರಗುಂದ ಉಪವಿಭಾಗದ ಅಧಿಕಾರಿಗಳು ತಕ್ಷಣವೇ ಈ ಕುರಿತು ಸಮೀಕ್ಷೆ ನಡೆಸಿ ಅಗತ್ಯದ ಕ್ರೀಯಾ ಯೋಜನೆ ರೂಪಿಸಿ ಮಂಜೂರಾತಿಗೆ ಸಲ್ಲಿಸಲು ಗದಗ ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಬೃಹತ ಮತ್ತು ಮಧ್ಯಮ ನೀರಾವರಿ ಇಲಾಖೆ ನರಗುಂದ ಉಪ ವಿಭಾಗದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಗದಗ ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು (ದಿ.11) ಜರುಗಿದ ಕನರ್ಾಟಕ ಅಭಿವೃದ್ಧಿ ಕಾರ್ಯಕ್ರಮಗಳ(ಕೆಡಿಪಿ) ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಸಕರ್ಾರದ ಯೋಜನೆಗಳ ಸೂಕ್ತ ಬಳಕೆಗೆ ಅವಕಾಶವಿದ್ದರೂ ಇಲಾಖೆ ಉದಾಸೀನತೆ ತೋರುತ್ತಿರುವುದು ನಿಜಕ್ಕೂ ಖೇದಕರವಾಗಿದೆ ಎಂದು ಮಂಜುನಾಥ ಚವ್ಹಾಣ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಅಂದಾಜು 8 ಸಾವಿರ ರೈತರ ಜಮೀನು ಒಣ ಬೇಸಾಯವಿದ್ದು ನೀರಾವರಿ ಎಂದು 2016ರ ಬೆಳೆ ಹಾನಿ ಸಮೀಕ್ಷೆ ಸಂದರ್ಭದಲ್ಲಿ ತಪ್ಪಾಗಿ ನಮೂದಾಗಿದ್ದು ಇದರಿಂದ ರೈತರ ಬೆಳೆ ವಿಮೆ ಪಡೆಯುವಲ್ಲಿ ನಷ್ಟವಾಗಿದೆ. ಇದನ್ನು ಸರಿಪಡಿಸಲು ಅಗತ್ಯದ ಕ್ರಮ ಜರುಗಿಸಲು ಜಿ.ಪಂ. ಅಧ್ಯಕ್ಷ ಎಸ್.ಪಿ.ಬಳಿಗಾರ ಸೂಚಿಸಿದರು. ಆರೋಗ್ಯ ಇಲಾಖೆ ಅನುಮತಿ ಇಲ್ಲದೇ ಜಿಲ್ಲೆಯ ಮೆಣಸಗಿ ಗ್ರಾಮದಲ್ಲಿ ಸ್ವರ್ಣಪ್ರಾಶನ ಬಿಂದು ಹಾಕಿದ ಖಾಸಗಿ ಸಂಸ್ಥೆ ವಿರುದ್ಧ ಆರೋಗ್ಯ ಇಲಾಖೆ ಜವಾಬ್ದಾರಿಯುತವಾಗಿ ಸರಿಯಾಗಿ ವರದಿ ನೀಡದಿರುವದು ಖೇದಕರ. ಈ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಲು ತಕ್ಷಣ ಕ್ರಮ ಜರುಗಿಸಬೇಕು ಎಂದು ಅಧ್ಯಕ್ಷರು ಸೂಚಿಸಿದರು.
ಭವಿಷ್ಯದಲ್ಲಿ ಸಕ್ಷಮ ಪ್ರಾಧಿಕಾರದ ಮಂಜೂರಾತಿ ಪಡೆಯದ ಸಂಸ್ಥೆಗಳು ಇಂತಹ ಕಾರ್ಯಗಳಲ್ಲಿ ಆಶಾ ಅಥವಾ ಅಂಗನವಾಡಿ ಕಾರ್ಯಕರ್ತರು ಭಾಗವಹಿಸದೇ ತಕ್ಷಣ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲು ಆದೇಶ ಹೊರಡಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಜಿ.ಪಂ. ಸಿ.ಇ.ಒ ತಿಳಿಸಿದರು.
ಜಿಲ್ಲೆಯಲಿ ಸಾರ್ವಜನಿಕ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ನಿಮರ್ಾಣ ಪೂರ್ಣಗೊಂಡಿ ಕಟ್ಟಡಗಳನ್ನು ಅವುಗಳಿಗೆ ಹಸ್ತಾಂತರಿಸಲು ವಿಳಂಬವಿಲ್ಲದೆ ಕ್ರಮ ಜರುಗಿಸಲು ಜಿ.ಪಂ. ಅಧ್ಯಕ್ಷರು ಸೂಚಿಸಿದರು.
ಜಿಲ್ಲೆಯಲಿ ಪ್ರಸಕ್ತ ಸಾಲಿನಲ್ಲಿ 821 ವಿದ್ಯಾಥರ್ಿಗಳು ವಿವಿಧ ಕಾರಣಗಳಿಂದ ಶಾಲೆಗಳಿಂದ ಹೊರಗುಳಿದ ವಿಷಯದ ಕುರಿತಂತೆ ಜಿ.ಪಂ. ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ ಅವರು ಸಕರ್ಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಲ್ಲಿ ನೀಡದ ಎಲ್ಲ ಸೌಲಭ್ಯಗಳನ್ನು ವಿಧ್ಯಾಥರ್ಿಗಳು ಪಡೆಯುತ್ತಿದ್ದು ಅಲ್ಲಿನ ಶಿಕ್ಷಕರಿಗಿಂತ ಹೆಚ್ಚಿನ ವಿದ್ಯಾರ್ಹತೆ, ತರಬೇತಿ ಪಡೆದ ಶಿಕ್ಷಕರು ಇದ್ದಾರೆ ಎಂದರು. ಹಾಗಿದ್ದರೂ ಕೂಡಾ ಸರಕಾರಿ ಶಾಲಾ ಮಕ್ಕಳು ಸಂಖ್ಯೆ ಗುಣಿಸುವ, ಸರಿಯಾಗಿ ಬರೆಯುವಷ್ಟು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿಲ್ಲ. ಅವರಿಗೆ ಕಲಿಸುವ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವಿವರಣೆ ಎಕೆ ಕೇಳುತ್ತೀಲ್ಲ. ಅವರಿಗೆ ಎಚ್ಚರಿಕೆ ಏಕೆ ನೀಡಿಲ್ಲ ಎಂದು ಶಕುಂತಲಾ ಮೂಲಿಮನಿ ಪ್ರಶ್ನಿಸಿ ಈ ಕುರಿತು ಸಮಗ್ರ ಕ್ರಮ ಕೈಗೊಳ್ಳಬೇಕು ಎಂದರು.
ಕೆರೆ ಅಭಿವೃದ್ಧಿಗಾಗಿ ಸಣ್ಣ ನೀರಾವರಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗಳಡಿ ಪ್ರದೇಶ, ರಸ್ತೆ ಗುರುತಿಸುವಾಗ ಜನಪತ್ರಿತಿನಿಧಿಗಳ ಗಮನಕ್ಕೆ ತರುವ ಅಗತ್ಯವನ್ನು ವಿವಿಧ ಇಲಾಖೆಗಳು ಸೌಲಭ್ಯ ನೀಡುವ ಫಲಾನುಭವಿಗಳ ಅಂತಿಮ ಪಟ್ಟಿಯ ಪ್ರತಿಯನ್ನು ನೀಡಲು ಕ್ರಮ ಜರುಗಿಸಬೇಕು ಎಂದು ಸಭೆಯ ಚಚರ್ೆಯಲ್ಲಿ ಭಾಗವಹಿಸಿದ ಸ್ಥಾಯಿ ಸಮಿತಿ ಸದಸ್ಯರುಗಳು ಆಗ್ರಹಿಸಿದರು.
ಜಿಲ್ಲೆಯಲ್ಲಿ ಮೇವು ಉತ್ಪಾದನೆಗಾಗಿ ವಿತರಿಸಿದ ಮೇವು ಕಿಟಗಳ ವಿತರಣೆ ಹಾಗೂ ಅದರಿಂದ ಉತ್ಪಾದನೆಗೊಂಡ ಮೇವಿನ ಪ್ರಮಾಣದ ವರದಿಯನ್ನು ಸಲ್ಲಿಸಲು ಜಿ.ಪಂ. ಅಧ್ಯಕ್ಷರು ಸೂಚಿಸಿದರು.
ಪರಿಸರ ಬೆಳೆಸುವ ಟ್ರೀಪಾರ್ಕ ಯೋಜನೆಯ ಮಾರ್ಗದಶರ್ಿ ಸೂತ್ರಗಳನ್ವಯ ನಗರ ಪ್ರದೇಶದ 5 ಕಿ.ಮೀ. ವ್ಯಾಪ್ತಿಯಲ್ಲಿ ಜಿಲ್ಲೆಯ ಬಿಂಕದಕಟ್ಟಿ, ನರಗುಂದ ಹಾಗೂ ತಡಕೋಡಗಳಲ್ಲಿ ಟ್ರೀ ಪಾರ್ಕ ಬೆಳೆಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಭೆಗೆ ತಿಳಿಸಿದರು. ಅರಣ್ಯ ಹಕ್ಕು ಪತ್ರ ನೀಡುವ ಪ್ರಕ್ರಿಯೆಯನ್ನು ಜಿಲ್ಲಾ ಮಟ್ಟದ ಸಮಿತಿ ಆದಷ್ಟು ಬೇಗನೆ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಮಂಜುನಾಥ ಚವ್ಹಾಣ ಸಮಿತಿಯ ಸದಸ್ಯ ಕಾರ್ಯದಶರ್ಿ ಸಮಾಜ ಕಲ್ಯಾಣ ಇಲಾಖೆ ಉಪನಿದರ್ೇಶಕರಿಗೆ ತಿಳಿಸಿದರು.
ಸಭೆಯಲ್ಲಿ ಗ್ರಾಮಿಣ ಕುಡಿಯುವ ನೀರು, ಕೃಷಿ, ತೋಟಗಾರಿಕೆ, ಹಿಂದುಳಿದ ವರ್ಗ, ವಿವಿಧ ನಿಗಮ, ಹೆಸ್ಕಾಂ, ರೇಷ್ಮೆ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಜರುಗಿತು.
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಈರಪ್ಪ ನಾಡಗೌಡ್ರ, ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ನೀಲಗುಂದ, ಜಿ.ಪಂ. ಉಪಕಾರ್ಯದಶರ್ಿ ಡಿ.ಪ್ರಾಣೇಶ, ಯೋಜನಾಧಿಕಾರಿ ಬಿ.ಆರ್.ಪಾಟೀಲ, ವಿವಿಧ ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.