ಸಹಕಾರ ಸಂಘಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧ ಆಯ್ಕೆ

Uncontested election of President and Vice-President for Co-operative Society

ಸಹಕಾರ ಸಂಘಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧ ಆಯ್ಕೆ 

ಕಂಪ್ಲಿ 23: ತಾಲೂಕಿನ ಎಮ್ಮಿಗನೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಸಿಂಸಾಬು ಬಿ ಹಾಗೂ ಉಪಾಧ್ಯಕ್ಷರಾಗಿ ಅಲ್ಲಾಸಾಬು ಸಿದ್ದಮ್ಮನಹಳ್ಳಿ ಅವಿರೋಧವಾಗಿ ಆಯ್ಕೆಗೊಂಡರು. 

ಇಲ್ಲಿನ ಕಛೇರಿಯಲ್ಲಿ ಸೋಮವಾರ ಚುನಾವಣೆ ಜರುಗಿತು.  

ಈ ಚುನಾವಣೆಯಲ್ಲಿ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ ಹಿನ್ನಲೆ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಕಾಸಿಂಸಾಬು, ಉಪಾಧ್ಯಕ್ಷ ಸ್ಥಾನಕ್ಕೆ ಅಲ್ಲಾಸಾಬು ಆಯ್ಕೆಗೊಂಡಿದ್ದಾರೆ. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವರು ಸಹಕಾರ ಸಂಘದ ಸರ್ವ ನಿರ್ದೇಶಕ ಹಾಗೂ ರೈತರ ಸಹಕಾರದೊಂದಿಗೆ ಅಭಿವೃದ್ಧಿಗೆ ಮುಂದಾಗಬೇಕು ಎಂದು ರಿಟರ್ನಿಂಗ್ ಅಧಿಕಾರಿ ರಮೇಶ ತಿಳಿಸಿದರು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.  

ಈ ಸಂದರ್ಭದಲ್ಲಿ ಮುಖ್ಯಕಾರ್ಯನಿರ್ವಾಹಕ ಈ.ಜಡೇಶರೆಡ್ಡಿ, ನಿರ್ದೇಶಕರಾದ ಉಮಾಪತಿ, ಬೇರಿ​‍್ಗ ಮಹೇಶಗೌಡ, ರಾಜಾಸಾಬು, ಶೇಖರ​‍್ಪ, ಪಕ್ಕೀರ​‍್ಪ, ಅಮರೇಶ, ರಂಜಾನ್ ಸಾಬು, ರಾಮು, ಗಂಗಮ್ಮ, ತಿಪ್ಪಮ್ಮ ಹಾಗೂ ಗ್ರಾಮದ ಮುಖಂಡರು ಹಾಗೂ ರೈತರಿದ್ದರು. ಡಿ.002: ನೂತನ ಅಧ್ಯಕ್ಷ ಕಾಸಿಂಸಾಬು ಹಾಗೂ ಉಪಾಧ್ಯಕ್ಷ ಅಲ್ಲಾಸಾಬುಗೆ ಸನ್ಮಾನಿಸಿ ಗೌರವಿಸಿದರು.