ಕುರುಹಿನ ಶೆಟ್ಟಿ ಸೊಸಾಯಿಟಿಗೆ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

Uncontested election of President-Vice President for Kuruhina Shetty Society

ಕುರುಹಿನ ಶೆಟ್ಟಿ ಸೊಸಾಯಿಟಿಗೆ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ 

ಮೂಡಲಗಿ 9 : ಪಟ್ಟಣದ ಪ್ರತಿಷ್ಠಿತ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ಮುಂದಿನ ಐದು ವರ್ಷಗಳ ಅವಧಿಗೆ ರವಿವಾರ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಸೊಸಾಟಿಯ ಅಧ್ಯಕ್ಷರಾಗಿ ಸುಭಾಸ ಗಂಗಪ್ಪ ಬೆಳಕೂಡ ಮತ್ತು ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಮಹ್ಮದಸಾಹೇಬ ಕಳ್ಳಿಮನಿ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಗೋಕಾಕ ಸಹಕಾರಿ ಅಭಿವೃದ್ಧಿ ಅಧಿಕಾರಿ ಸುರೇಶ ಬಿರಾದಾರಪಾಟೀಲ ತಿಳಿಸಿದ್ದಾರೆ.  

   ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಡಳಿತ ಮಂಡಳಿಯವರು ಸತ್ಕರಿಸಿ ಗೌರವಿಸಿದರು.  

ಈ ಸಮಯದಲ್ಲಿ ಸೊಸಾಯಿಟಿಯ ನಿರ್ದೇಶಕರಾದ ಬಸಪ್ಪ ಸಿ.ಮುಗಳಕೋಡ, ಗೊಡಚಪ್ಪ ಕೆ.ಮುರುಗೋಡ, ಲಕ್ಕಪ್ಪ ಎಲ್‌.ಪೂಜೇರಿ, ಬಸವರಾಜ ಬಿ.ಬೆಳಕೂಡ, ವಿಶಾಲ ಎಸ್‌.ಶೀಲವಂತ, ರಾಮಪ್ಪ ಡಿ.ಬಳೆಗಾರ, ಮಾಲಾ ಎಂ. ಬೆಳಕೂಡ,  ಶಾಂತವ್ವ ಬಿ.ಬೋರಗಲ, ಉಮಾ ಬಿ.ಬೆಳಕೂಡ, ರುಕ್ಕವ್ವ ಎಲ್‌.ಪೂಜೇರಿ,  ಶ್ಯಾಲನ್ ಎಸ್‌.ಕೊಡತೆ, ಸೊಸಾಯಿಟಿಯ ಪ್ರಧಾನ ವ್ಯವಸ್ಥಾಪಕ ರಮೇಶ ಒಂಟಗೋಡಿ, ಕಾನೂನು ಸಲಹೆಗಾರರಾದ ಅಶೋಕ ಭಾಗೋಜಿ ಮತ್ತು ಬಿ.ವಾಯ್‌.ಶಿವಾಪೂರ, ಪರ​‍್ಪ ಮುಗಳಖೋಡ, ಸಮೃದ್ಧ ಬೆಳಕೂಡ, ಸಾಗರ ಬೆಳಕೂಡ, ಅಲೀಮ ಕಳ್ಳಿಮನಿ,  ಶೇಖರಯ್ಯ  ಹಿರೇಮಠ, ಚಂದ್ರಕಾಂತ ಕೊಡತೆ, ಬಸನಗೌಡ ಬೋರಗಲ್, ರವೀಂದ್ರ ಹುದ್ದಾರ್ ಮತ್ತಿತರರು ಉಪಸ್ಥಿತರಿದ್ದರು.