ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್ ಅವರಿಂದ ತುಂಗಭದ್ರಾ ನದಿ ವೀಕ್ಷಣೆ
ಗದಗ 17 : ಗದಗ ಜಿಲ್ಲೆಯ ಸಿಂಗಟಾಲೂರ್ ಹತ್ತಿರದ ತುಂಗಭದ್ರಾ ನದಿ ವೀಕ್ಷಣೆಯನ್ನು ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್ ಅವರು ಶುಕ್ರವಾರ ನಡೆಸಿದರು. ಗದಗ ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಹಲವಾರು ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜು ಸಿಂಗಟಾಲೂರ ಗ್ಯಾರೇಜ್ ನಿಂದ ಆಗುತ್ತಿದ್ದು ನದಿಯ ನೀರಿನ ಮಟ್ಟ ಹಾಗೂ ನಿರೆತ್ತುವ ಸ್ಥಳದ ಕುರಿತು ಸ್ಥಳ ಪರೀಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮುಂಡರಗಿ ತಹಶೀಲ್ದಾರ್ ಸೇರಿದಂತೆ ತಾಲೂಕಿನ ಇತರ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.