ಕ್ಷಯರೋಗವು ಸೋಂಕು ರೋಗವಾಗಿದ್ದು ಸಾರ್ವಜನಿಕರು ಆರೋಗ್ಯದ ಕಡೆಗೆ ಜಾಗೃತೆ ವಹಿಸಿ: ಡಾ.ರಾಜೇಶ್ವರಿ
ರಾಣಿಬೆನ್ನೂರ:19 ಕ್ಷಯರೋಗವು ಒಂದು ಸೋಂಕು ರೋಗವಾಗಿದ್ದು, ಸಾರ್ವಜನಿಕರು ಆರೋಗ್ಯದ ಕಡೆಗೆ ಜಾಗೃತೆ ವಹಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ್ವರಿ ಕದರಮಂಡಲಗಿ ಹೇಳಿದರು.
ಇಲ್ಲಿಯ ರಂಗನಾಥ ನಗರದ ಕುಂಬಾರಗೆರಿಯಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವ ಮತ್ತು ಚಿಕಿತ್ಸೆ ನೀಡುವ ಆಂದೋಲನ ಕಾರ್ಯಕ್ರಮದಲ್ಲಿ ಕುಂಬಾರ ವೃತ್ತಿಯಲ್ಲಿ ಕೆಲಸ ಮಾಡುತ್ತಿರುವ ಕುಟುಂಬದ ಸದಸ್ಯರಿಗೆ ಜಾಗೃತೆ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೆಮ್ಮುವುದು ಹಾಗೂ ಸಿನುವುದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದು ಹೆಚ್ಚಾಗಿ ದುರ್ಬಲ ವರ್ಗದ ಜನರಿಗೆ ಕ್ಷಯರೋಗದ ಸೋಂಕು ತಗಲಿ, ಬೇಗ ಕಾಯಿಲೆಯಾಗುವ ಸಂಭವವಿರುತ್ತದೆ. ಸರಕಾರವು ಈ ದೃಷ್ಟಿಯಲ್ಲಿ ಕುಂಬಾರ ವೃತ್ತಿಯಲ್ಲಿ ಸಾಕಷ್ಟು ಮಣ್ಣು ಮತ್ತು ಹೊಗೆಯ ವಾತಾವರಣದಲ್ಲಿ ಕಾರ್ಯನಿರ್ವಹಿಸುವುದರಿಂದ ಸೋಂಕು ಬೇಗ ತಗಲುತ್ತದೆ. ಸರಕಾರವು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಕಪ ಪರೀಕ್ಷೆ ಮತ್ತು ಉಚಿತ ಚಿಕಿತ್ಸೆಯನ್ನು ಏರಿ್ಡಸಿದ್ದು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಡಾ. ಜಗದೀಶ್ ಪಾಟೀಲ ಹಾಗೂ ನಗರ ಕ್ಷಯರೋಗ ಆರೋಗ್ಯ ಸಂದರ್ಶಕ ಗೀರೀಶ ಮುರನಾಳ ಅವರು ಕ್ಷಯರೋಗದ ಕುರಿತು ಮಾಹಿತಿ ನೀಡುವುದರ ಜೊತೆಗೆ ಸರಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಡಾ.ಅಭಿನವ ಸೊಪ್ಪಿನ, ನಾಗರಾಜ ಕುಡುಪಲಿ, ಶೋಭಾ ಬಸೇನಾಯ್ಕರ್, ವಿಜಯ ಉಪ್ಪಾರ, ಮಂಜುಳಾ ನಾಯಕ ಸೇರಿದಂತೆ ಇತರರಿದ್ದರು.