ಯುವ ಪ್ರತಿಭೆ ಭುವನೀಶ ನೀರಲಗಿಗೆ ಸನ್ಮಾನ
ಶಿಗ್ಗಾವಿ 20 : ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕ ಹನುಮರಹಳ್ಳಿ ಗ್ರಾಮದ ಯುವ ಪ್ರತಿಭೆ ಕುಮಾರ ಭುವನೀಶ ಶಂಭುಲಿಂಗ ನೀರಲಗಿ ಪಟ್ಟಣದ ಎ.ಪಿ.ಎಂ.ಸಿಯಲ್ಲಿ ನಡೆದ ಸ್ಪರ್ಧೆಯಲ್ಲಿ 1 ನಿಮಿಷ 20 ಸೆಕೆಂಡಗಳಲ್ಲಿ 400 ಮೀಟರ್ ಗಡಿಯನ್ನು ವೇಗದಲ್ಲಿ ತಲುಪಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಇನ್ ರನ್ನಿಂಗಗೆ ಭಾಜನನಾಗಿದ್ದಾನೆ. ಯುವ ಪ್ರತಿಭೆ ಕುಮಾರ ಭುವನೇಶ ನೀರಲಗಿಗೆ ಸನ್ಮಾನಿಸಿ ಗೌರವಿಸಿ ಇತನಿಗೆ ಉತ್ತಮವಾಗಿ ಕೋಚ್ ಕೊಟ್ಟರೆ ಈ ಬಾಲಕ ಮುಂದೋಂದು ದಿನ ಭಾರತ ದೇಶದ ಉತ್ತಮ ರನ್ನ ವೇಗದ ಸರದಾರನಾಗುತ್ತಾನೆ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ತಹಶಿಲ್ದಾರ ಗಣೇಶ ಸವಣೂರ, ಗ್ಯಾರಂಟಿ ಅಧ್ಯಕ್ಷ ಎಸ್.ಎಫ್.ಮಣಕಟ್ಟಿ, ಪುರಸಭೆ ಸದಸ್ಯ ಗೌಸಖಾನ ಮುನಶಿ, ತಂದೆ ಶಂಭುಲಿಂಗ ನೀರಲಗಿ, ತಾಯಿ ಪುಟ್ಟಮ್ಮ ನೀರಲಗಿ ಮುಖಂಡರಾದ ಗುಡ್ಡಪ್ಪ ಜಲದಿ, ಮಹಾಂತೇಶ ಸಾಲಿ, ಮುನ್ನಾ ಲಕ್ಷ್ಮೇಶ್ವರ ಸೇರಿದಂತೆ ಸಿಬ್ಬಂದಿ ವರ್ಗದವರು, ಕಾರ್ಯಕರ್ತರು ಉಪಸ್ಥಿತರಿದ್ದರು.